Advertisement

ಜಿಲ್ಲೆಯಲ್ಲಿ 79,907 ಪ್ರಕರಣ ಇತ್ಯರ್ಥ ಬಾಕಿ

03:25 PM Jun 21, 2022 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ಜೂ.25ರಂದು ರಾಷ್ಟ್ರೀಯ ಲೋಕ್‌ ಅದಾಲತ್‌ ಅನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶೆ ಎ. ಎಂ.ನಳಿನಿಕುಮಾರಿ ತಿಳಿಸಿದರು.

Advertisement

ನಗರದ ನ್ಯಾಯಾಲಯದ ಸಂಕೀರ್ಣದ ಎಡಿಆರ್‌ ಕಟ್ಟಡದಲ್ಲಿ ಲೋಕ್‌ ಅದಾಲತ್‌ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

2469 ಪ್ರಕರಣ ಇತ್ಯರ್ಥ: ಜಿಲ್ಲೆಯಲ್ಲಿ ಸುಮಾರು 79907 ಪ್ರಕರಣ ಬಾಕಿ ಇದ್ದು, ಅದರಲ್ಲಿ ಸುಮಾರು 10477 ಪ್ರಕರಣಗಳು ರಾಜಿ ಆಗಬಹುದಾದಂಥ ಪ್ರಕರಣಗಳಾಗಿವೆ. ಅವುಗಳಲ್ಲಿ ಸುಮಾರು 534 ಪ್ರಕರಣ ಈಗಾಗಲೇ ರಾಜಿಗಾಗಿ ಪರಿಗಣಿಸಲಾಗಿದೆ. 3591 ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಸುಮಾರು 2469 ಪ್ರಕರಣಗಳು ಈಗಾಗಲೇ ಇತ್ಯರ್ಥಗೊಂಡಿವೆ ಎಂದು ಮಾಹಿತಿ ನೀಡಿದರು.

ಸದ್ಬಳಕೆ ಮಾಡಿಕೊಳ್ಳಿ: ಈ ಬಾರಿಯ ಲೋಕ್‌ ಅದಾಲತ್‌ನಲ್ಲಿಯೂ ಇನ್ನೂ ಹೆಚ್ಚಿನ ಪ್ರಕರಣ ಇತ್ಯರ್ಥಪಡಿಸಿ ಜನ ಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ನ್ಯಾಯದಾನ ಮಾಡಬೇಕೆಂಬ ಇಚ್ಛೆಯಿಂದ ಪ್ರಕರಣಗಳನ್ನು ತೆಗೆದುಕೊಂಡಿದ್ದು, ಜನ ಸಾಮಾನ್ಯರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಶೇಷ ಪೀಠ: ಪ್ರತಿದಿನ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್‌ಗೆ ಸಂಬಂ ಧಿಸಿದಂತೆ ಪೂರ್ವಭಾವಿ ಬೈಠಕ್‌, ಪೀಠಗಳು ನಡೆಯುತ್ತಿದ್ದು, ಮೇ 23ರಿಂದ ಜೂ.25ರವರೆಗೆ ಟೆಲಿಫೋನ್‌ ಬಿಲ್‌, ವಿದ್ಯುತ್‌ ಬಿಲ್‌ ನ್ಯಾಯಾಲಯದಲ್ಲಿ ಬಾಕಿ ಇರುವ ಸಿವಿಲ್‌ ವ್ಯಾಜ್ಯ ಮತ್ತು ಚೆಕ್‌ಬೌನ್ಸ್‌ ಪ್ರಕರಣಗಳನ್ನು ರಾಜಿ ಮುಖಾಂತರ ನಡೆಸಲಾಗುವುದು. ಸಣ್ಣಪುಟ್ಟ ಸಾಲ ವಸೂಲಿಗಾಗಿ ಸಲ್ಲಿಸಿರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ ವಿಶೇಷ ಪೀಠ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಸಹಕಾರ ನೀಡಲು ಮನವಿ: ನ್ಯಾಯಾಲಯದಲ್ಲಿ ರಾಜಿಯಾಗುವಂಥ ವ್ಯಾಜ್ಯಗಳನ್ನು ರಾಜಿ ಮಾಡಿಕೊಂಡು ಮುಕ್ತಾಯಗೊಳಿಸಿಕೊಳ್ಳಲು ರಾಷ್ಟ್ರೀಯ ಲೋಕ್‌ ಅದಾಲತ್‌ ಸಹಕಾರಿ ಯಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ ತಾಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಎಲೆಕ್ಟ್ರಾನಿಕ್‌ ಮೋಡ್‌ ಮುಖಾಂತರವಾಗಲಿ ಅಥವಾ ಖುದ್ದಾಗಿ ವಕೀಲರ ಮೂಲಕ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದರು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ/ತಾಲೂಕು ಕಾನೂನು ಸೇವೆಗಳ ಸಮಿತಿಗಳಿಗೆ

ಇ-ಮೇಲ್‌ dlsa.mandya@gmail.com ಎಸ್‌ಎಂಎಸ್‌, ವಾಟ್ಸ್‌ ಆ್ಯಪ್‌ ಸಂಖ್ಯೆ: 9482971495 ಸಂದೇಶದ ಮುಖಾಂತರ, ಸಹಾಯವಾಣಿ ಸಂ.08232- 229345 /1800-425-90900 ಅಥವಾ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.

13,059 ಕ್ಕೂ ಪ್ರಕರಣ ಇತ್ಯರ್ಥ :

ಕಳೆದ ಬಾರಿ ಲೋಕ್‌ ಅದಾಲತ್‌ನಲ್ಲಿ 13059ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ವಕೀಲರ, ಕಕ್ಷಿದಾರರ ಹಾಗೂ ಎಲ್ಲಾ ನ್ಯಾಯಲಯದ ಗೌರವಾನ್ವಿತ ನ್ಯಾಯಾ ಧೀಶರ ಸಹಯೋಗ ದೊಂದಿಗೆ ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಎ.ಎಂ.ನಳಿನಿಕುಮಾರಿ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next