Advertisement

ಧಾರವಾಡ: ಹೈಕೋರ್ಟ್ ಲೋಕ ಅದಾಲತ್ 4 ಕೋಟಿ ರೂ.ಗಳಿಗೂ ಅಧಿಕ ಮೊತ್ತದ 221 ಪ್ರಕರಣಗಳ ಇತ್ಯರ್ಥ

06:26 PM Jun 25, 2022 | Team Udayavani |

ಧಾರವಾಡ: ಇಲ್ಲಿನ ಕರ್ನಾಟಕ ಉಚ್ಛ ನ್ಯಾಯಾಲಯ ಪೀಠದಲ್ಲಿ ಇಂದು ನಡೆದ  ರಾಷ್ಟ್ರೀಯ  ಲೋಕ ಅದಾಲತ್‌ನಲ್ಲಿ 221 ಪ್ರಕರಣಗಳಲ್ಲಿ ಸುಮಾರು 4 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಪರಿಹಾರಕ್ಕೆ ಇತ್ಯರ್ಥಪಡಿಸಲಾಯಿತು.

Advertisement

ಹಿರಿಯ ನ್ಯಾಯಮೂರ್ತಿ ಕೆ.ಎಸ್.ಮುದಗಲ್, ನ್ಯಾಯಮೂರ್ತಿಗಳಾದ  ಪ್ರದೀಪ್ ಸಿಂಗ ಯೆರೂರ್,ಎಂ.ಜಿ.ಎಸ್ . ಕಮಲ್ , ಅದಾಲತ್‌ನ ಸದಸ್ಯರುಗಳಾದ ಎಮ್.ಟಿ . ಬಂಗಿ , ಡಿ . ಎಲ್ . ಲಾಡಖಾನ ಮತ್ತು  ಎಮ್. ಸಿ . ಹುಕ್ಕೇರಿ ಅವರನ್ನೊಳಗೊಂಡ   3 ಪೀಠಗಳಲ್ಲಿ  ಒಟ್ಟು 1227 ಪ್ರಕರಣಗಳನ್ನು ವಿಚಾರಣೆಗೆ ಗುರುತಿಸಿಕೊಂಡು,ಅವುಗಳಲ್ಲಿ ಒಟ್ಟು 221 ಪ್ರಕರಣಗಳನ್ನು ರೂ .4,46,53,063 ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.

ನ್ಯಾಯಮೂರ್ತಿಗಳಾದ  ಎಂ.ಜಿ.ಎಸ್ . ಕಮಾಲ್ ಹಾಗೂ ಎಮ್ . ಸಿ . ಹುಕ್ಕೇರಿ ವಕೀಲರವರ ಲೋಕ ಅದಲಾತ್ ಪೀಠವು ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 30 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ರಾಜಿ – ಸಂಧಾನದ ಮೂಲಕ ಉಭಯ ಪಕ್ಷಗಾರರ ಸಮಕ್ಷಮ ಇತ್ಯರ್ಥಪಡಿಸಿರುವುದು ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್‌ನ ಹೆಗ್ಗಳಿಕೆಯಾಗಿದೆ .

ಇದರಿಂದ ಉಭಯ ಪಕ್ಷಗಾರರಿಗೆ ತುಂಬಾ ಅನುಕೂಲವಾಗಿದ್ದು ವ್ಯಾಜ್ಯ ಮುಕ್ತರಾಗಿರುತ್ತಾರೆ  ಎಂದು ಹೈಕೋರ್ಟಿನ ನ್ಯಾಯಾಂಗದ  ಅಧಿಕ ವಿಲೇಖನಾಧಿಕಾರಿ  ಮತ್ತು  ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ  ವೆಂಕಟೇಶ ಆರ್.ಹುಲಗಿ ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next