Advertisement

ರಾಜಿ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ

04:16 PM Aug 14, 2022 | Team Udayavani |

ಕೋಲಾರ: ರಾಜಿ-ಸಂಧಾನದ ಮೂಲಕ ರಾಜಿಯಾಗಬಲ್ಲ ಪ್ರತಿಯೊಂದು ಕೇಸುಗಳನ್ನೂ ನೀವು ಲೋಕ ಅದಾಲತ್‌ನಲ್ಲಿ ಇವತ್ತೇ ಫೈನಲ್‌ ಮಾಡಿಕೊಳ್ಳಬಹುದಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಆರ್‌.ನಾಗರಾಜ್‌ ಹೇಳಿದರು.

Advertisement

ನಗರದ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ಶನಿವಾರದಂದು ಏರ್ಪಡಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜಿ ಆಗಬಲ್ಲ ಪ್ರತಿಯೊಂದು ಕೇಸುಗಳನ್ನೂ ಲೋಕ ಅದಾಲತ್‌ನಲ್ಲಿ ಖಂಡಿತಾ ಇತ್ಯರ್ಥಪಡಿಸಿಕೊಳ್ಳ ಬಹುದಿದೆ. ರಾಜಿ ಆಗಬಹುದಾದ ಅಪರಾಧ ಪ್ರಕರಣಗಳು, ಬ್ಯಾಂಕ್‌ ಪ್ರಕರಣಗಳು, ಹಣಕಾಸು ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ಕಾರ್ಮಿಕ ವಿವಾಧಗಳು, ಕೌಟುಂಭಿಕ ನ್ಯಾಯಾಲಯದ ಪ್ರಕರಣಗಳು, ಬ್ಯಾಂಕ್‌ ವಸೂಲಾತಿ ಪ್ರಕರಣಗಳು, ಚೆಕ್‌ ಬೌನ್ಸ್‌ ಪ್ರಕರಣಗಳು ರಾಜಿ ಆಗುವಂಥಾ ಕೇಸುಗಳಾಗಿರುತ್ತವೆ. ಇಂಥ ಕೇಸುಗಳಲ್ಲಿ ಕೇಸುಗಳನ್ನು ನಡೆಸಿಕೊಂಡು ಹೋಗುತ್ತಾ ಇರುವ ಬದಲಾಗಿ ಎರಡೂ ಪಕ್ಷದವರು ಕುಳಿತು ಮಾತನಾಡಿ ರಾಜಿ ಮಾಡಿಕೊಂಡು ಮುಗಿಸಿಕೊಳ್ಳಬಹುದಿದೆ ಎಂದರು.

ಒಂದೇ ಬೈಠಕ್‌ನಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಿರುವುದಿಲ್ಲವೆಂಬುದು ನಮಗೆ ಅರಿವಿದೆ. ಹೀಗಾಗಿ ನೀವೆಲ್ಲರೂ ರಾಜಿ-ಸಂಧಾನದ ಮೂಲಕ ಇತ್ಯರ್ಥವಾಗಲಿ ಎಂಬ ಸದುದ್ದೇಶದಿಂದಲೇ ಕೆಲವು ದಿನಗಳಿಂದ ಪ್ರತಿದಿನ ಊಟದ ಸಮಯದಲ್ಲಿ ಇಲ್ಲಿಯೇ ಪೂರ್ವಭಾವಿ ಲೋಕ ಅದಾಲತ್‌ ನಡೆಸಲಾಯಿತು. ಆದರೆ ಈವರೆವಿಗೂ ಪೂರ್ವಭಾವಿ ಅದಾಲತ್‌ನಲ್ಲಿ ಪಾಲ್ಗೊಂಡ ಪ್ರಕರಣಗಳಲ್ಲಿ ಒಂದೆರೆಡು ಪ್ರಕರಣಗಳು ಒಮ್ಮತಕ್ಕೆ ಬರಲು ವಿಫಲವಾದರೂ ಉಳಿದೆಲ್ಲಾ ಈಗ ರಾಜಿಯಾಗಿರುವುದು ಸ್ವಾಗತಾರ್ಹ ಬೆಳವಣಿಗೆಯೇ ಆಗಿದೆ ಎಂದರು.

ಜಿಲ್ಲಾ ಪ್ರಧಾನ ಕೌಟುಂಭಿಕ ನ್ಯಾಯಾಧೀಶ ಎಸ್‌ .ನಿರ್ಮಲಾದೇವಿ, ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸುನಿಲ ಎಸ್‌ ಹೊಸಮನಿ, ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪಿ.ಕೆ.ದಿವ್ಯಾ, ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಬಾಲಚಂದ್ರ.ಎನ್‌.ಭಟ್‌, ಒಂದನೇ ಹಿರಿಯ ಸಿವಿಲ್‌ ನ್ಯಾಯಾಧೀಶ ರಶ್ಮಿ, ಎರಡನೇ ಹಿರಿಯ ಸಿವಿಲ್‌ ನ್ಯಾಯಾಧೀಶ ಸಿ.ರಂಗೇಗೌಡ, ಪ್ರಧಾನ ಸಿವಿಲ್‌ ನ್ಯಾಯಾಧೀಶ ವಿವೇಕ್‌ ಗ್ರಾಮೋಪಧ್ಯಾಯ, ಎರಡನೇ ಸಿವಿಲ್‌ ನ್ಯಾಯಾಧೀಶ ಶಿಲ್ಪಾ ಬ್ಯಾಳಗಿ, ಮೂರನೇ ಸಿವಿಲ್‌ ನ್ಯಾಯಾಧೀಶ ಮದನ್‌.ಪಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next