Advertisement

ದುಷ್ಕರ್ಮಿಗಳಿಂದ ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಮತ್ತು ಸಹೋದರನ ಗುಂಡಿಕ್ಕಿ ಹತ್ಯೆ

07:08 PM Nov 10, 2021 | Team Udayavani |

ನವದೆಹಲಿ : ದುಷ್ಕರ್ಮಿಗಳ ತಂಡವೊಂದು ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಮತ್ತು ಸಹೋದರ ಸೂರಜ್​​ ಎಂಬುವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

Advertisement

ಘಟನೆ ಹರ್ಯಾಣದ ಸೋನೆಪತ್‌ನ ಹಲಾಲ್‌ಪುರ್‌ನಲ್ಲಿರುವ ಸುಶೀಲ್ ಕುಮಾರ್ ಕುಸ್ತಿ ಅಕಾಡೆಮಿ ಬಳಿ ಇಬ್ಬರನ್ನು ಗುಂಡಿಕ್ಕಿ ಹತ್ಯೆಮಾಡಲಾಗಿದೆ.

ಇದೆ ವೇಳೆ ನಿಶಾ ದಹಿಯಾ ತಾಯಿಯ ಮೇಲೆಯೂ ಗುಂಡಿನ ದಾಳಿ ನಡೆಸಿದ್ದು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ನಿಶಾ ದಹಿಯಾ ತಾಯಿ ಹೋರಾಟ ನಡೆಸುತ್ತಿದ್ದಾರೆ.

ನಿಶಾ ದಹಿಯಾ ಮತ್ತು ಸಹೋದರನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿದ್ದಾರೆ, ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.

ಇತ್ತೀಚೆಗೆ ಸೆರ್ಬಿಯಾದಲ್ಲಿ ನಡೆದ ವರ್ಲ್ಡ್​​​ ಅಂಡರ್ -23 ಚಾಂಪಿಯನ್​ಶೀಪ್​ ಟೂರ್ನಿಯಲ್ಲಿ 65 ಕೆಜಿ ಮಹಿಳಾ ಕುಸ್ತಿಪಟು ವಿಭಾಗದಲ್ಲಿ ನಿಶಾ ಕಂಚಿನ ಪದಕ ಗೆದ್ದಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ನಿಶಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Advertisement

ಇದನ್ನೂ ಓದಿ : ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ನಲ್ಲಿ ಕಂದಕಕ್ಕೆ ಉರುಳಿದ ಮದುವೆ ವಾಹನ: ತಪ್ಪಿದ ದೊಡ್ಡ ದುರಂತ

Advertisement

Udayavani is now on Telegram. Click here to join our channel and stay updated with the latest news.

Next