Advertisement

ರಾಷ್ಟ್ರಮಟ್ಟದ ವೆಬಿನಾರ್‌ ಕಾರ್ಯಕ್ರಮ

12:50 PM Aug 05, 2020 | Suhan S |

ಮಹಾಲಿಂಗಪುರ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಹಾಗೂ ಡಿಡಿಎಸ್‌ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಮತ್ತು ಗ್ರಂಥಾಲಯ ವಿಜ್ಞಾನ ವಿಭಾಗದ ವತಿಯಿಂದ ಆರೋಗ್ಯ, ಸಾಮರ್ಥ್ಯ, ಸಂಶೋಧನೆಯಲ್ಲಿ ಮಾಹಿತಿ ಮೂಲಗಳು ಕುರಿತು ರಾಷ್ಟ್ರ ಮಟ್ಟದ ವೆಬಿನಾರ್‌ ಜರುಗಿತು.

Advertisement

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ದೇಶಕ ಜಗದೀಶ ಗಸ್ತಿ ಮಾತನಾಡಿ, ಕ್ರೀಡೆಯ ಮೂಲಕ ಒಳ್ಳೆಯ ಆರೋಗ್ಯ ಪಡೆದುಕೊಳ್ಳುವುದು ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ತಿಳಿಸಿಕೊಟ್ಟರು.

ಸಂಪನ್ಮೂಲ ವ್ಯಕ್ತಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ವಿನಾಯಕ ಬಂಕಾಪುರ ಸಂವಹನಾ ಸಂಶೋಧನಾ ಪ್ರಕಟಣೆ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಚಾರ್ಯ ಡಾ| ಬಿ.ಎಂ.ಪಾಟೀಲ, ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ವಿ.ಎಸ್‌. ಅಂಗಡಿ, ಎಸ್‌.ಎಸ್‌. ಬಿದರೆ, ಐಕ್ಯೂಎಸಿ ಸಂಯೋಜಕ ಡಾ| ಕೆ.ಎಂ.ಅವರಾದಿ, ಡಾ| ಸುನಂದಾ ಸೋರಗಾಂವಿ, ಸಂಚಾಲಕರಾದ ಆರ್‌.ಎಸ್‌. ಪೂಜಾರಿ, ಎ.ಎಂ. ಉಗಾರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next