Advertisement

40 ಮಿಲಿಯನ್ ಡಾಲರ್ ಮೌಲ್ಯದ ಕ್ಲೀಯರ್ ​ಟ್ರಿಪ್ ‌ಫ್ಲಿಪ್ ಕಾರ್ಟ್ ತೆಕ್ಕೆಗೆ..?

12:43 PM Apr 19, 2021 | |

ನವ ದೆಹಲಿ : 40 ಮಿಲಿಯನ್ ಡಾಲರ್ ಮೌಲ್ಯದ ಕ್ಲೀಯರ್ ​ಟ್ರಿಪ್ ಅನ್ನು ವಾಲ್ ಮಾರ್ಟ್ ಒಡೆತನದ ಭಾರತದ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್ ಕಾರ್ಟ್ ತನ್ನ ಬ್ಯುಸಿನೆಸ್ ಅಂಗಳಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದು, ಈ ವ್ಯವಹಾರವು ನಗದು-ಕಮ್-ಇಕ್ವಿಟಿ ಒಪ್ಪಂದವಾಗಿದೆ ಎಂಬ ವರದಿಯಾಗಿದೆ.

Advertisement

ಮುಂಬೈನಲ್ಲಿ 2006 ರಲ್ಲಿ ಪ್ರಾರಂಭವಾದ ಕ್ಲಿಯರ್ ಟ್ರಿಪ್  15 ವರ್ಷದ ತನ್ನ ಪಯಣದಲ್ಲಿ ಸಾಕಷ್ಟು ಯಶಸ್ಸನ್ನು ತನ್ನ ಮುಡಿಗೇರಿಸಿಕೊಂಡಿದೆ.

ಕ್ಲೀಯರ್ ​ಟ್ರಿಪ್ ಶೀಘ್ರವೇ ತನ್ನ ಎಲ್ಲಾ ವ್ಯವಹಾರವನ್ನು ನಿಲ್ಲಿಸಿ ಕಂಪನಿಯನ್ನು ಮುಚ್ಚುವ ಹಂತದಲ್ಲಿತ್ತು. ಆದರೆ ಈಗ ಫ್ಲಿಪ್ ಕಾರ್ಟ್ ಮೂಲಕ ಟ್ರಾವೆಲ್ಲಿಂಗ್ ಮತ್ತು ಆತಿಥ್ಯ ಸೇವೆಯನ್ನು ಮುಂದುವರೆಸುವ ಹೊಸ ಬೆಳೆವಣಿಗೆಯ ಬಗ್ಗೆ ಒಪ್ಪಂದ ಮಾಡಿಕೊಳ್ಳುವುದಾಗಿ ವರದಿ ತಿಳಿಸಿದೆ.

ಓದಿ : ಕೋವಿಡ್ 2ನೇ ಅಲೆ: ಭಾರತದಲ್ಲಿ 24 ಗಂಟೆಗಳಲ್ಲಿ 2.73 ಲಕ್ಷ ಪ್ರಕರಣ ಪತ್ತೆ

ಉಭಯ ಕಂಪೆನಿಗಳೊಂದಿಗೆ ಸಮಾಲೋಚನೆ ನಡೆಯುತ್ತಿದ್ದು, ಅತಿ ಶೀಘ್ರದಲ್ಲಿ ಒಪ್ಪಂದಕ್ಕೆ ಉಭಯ ಸಂಸ್ಥಗಳು ಸಹಿ ಹಾಕುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ ಎಂದು ವರದಿ ತಿಳಿಸಿದೆ.

Advertisement

ಇನ್ನು, ಭಾರತದ ಹೊರತಾಗಿ ಯುಎಇ, ಸೌದಿ ಅರೇಬಿಯಾ ಮತ್ತು ಈಜಿಪ್ಟ್‌ನಲ್ಲಿ ಕ್ಲಿಯರ್ ಟ್ರಿಪ್ ಕಾರ್ಯನಿರ್ವಹಿಸುತ್ತದೆ.

ಇದರ ಪ್ರಮುಖ ಹೂಡಿಕೆದಾರರು ಕಾನ್‌ ಕೂರ್ ಟೆಕ್ನಾಲಜೀಸ್, ಡಿಎಜಿ ವೆಂಚರ್ಸ್ ಮತ್ತು ಗುಂಡ್ ಇನ್ವೆಸ್ಟ್‌ ಮೆಂಟ್ ಕಾರ್ಪೊರೇಶನ್. ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಸ್ಟುವರ್ಟ್ ಕ್ರೈಟನ್ 2006 ರಲ್ಲಿ ಕ್ಲಿಯರ್ ಟ್ರಿಪ್ ಅನ್ನು ಸ್ಥಾಪಿಸಿದ್ದರು.

ಇಲ್ಲಿಯವರೆಗೆ ಕ್ಲೀಯರ್​ಟ್ರಿಪ್ ಸುಮಾರು 70 ಮಿಲಿಯನ್ ಹೂಡಿಕೆದಾರರ ಬಂಡವಾಳವನ್ನು ಸಂಗ್ರಹಿಸಿದೆ.

ಫ್ಲಿಪ್‌ ಕಾರ್ಟ್, ಅಮೆಜಾನ್ ಮತ್ತು ಪೇಟಿಎಂ ನಂತಹ ದೈತ್ಯ ಕಂಪನಿಗಳು ಸೂಪರ್-ಆ್ಯಪ್ ತಂತ್ರದ ಮೂಲಕ ಚಿಲ್ಲರೆ ವ್ಯಾಪಾರ, ಆಹಾರ ವಿತರಣೆ, ಪಾವತಿ ಸೇವೆಗಳು ಮತ್ತು ಪ್ರಯಾಣದಂತಹ ಪ್ರತಿಯೊಂದು ವ್ಯಾಪಾರ ವಿಭಾಗದಲ್ಲೂ ತಮ್ಮ ಅಸ್ತಿತ್ವವನ್ನು ಹೊಂದಿವೆ. ಅಮೆಜಾನ್ ಮತ್ತು ಪೇಟಿಎಂ ಸಹ ಆನ್‌ ಲೈನ್ ಪ್ರಯಾಣ ವಿಭಾಗದಲ್ಲಿವೆ. ಮೇ 2019 ರಲ್ಲಿ, ಅಮೆಜಾನ್ ಇಂಡಿಯಾ ತನ್ನ ಪಾವತಿ ಸೇವೆಯಾದ ಅಮೆಜಾನ್ ಪೇ ಗೆ ಫ್ಲೈಟ್ ಬುಕಿಂಗ್ ಆಯ್ಕೆಯನ್ನು ಸೇರಿಸಲು ಕ್ಲಿಯರ್‌ ಟ್ರಿಪ್‌ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಓದಿ : ಮಿತಿಮೀರಿ ಹೆಚ್ಚಳವಾಗುತ್ತಿರುವ ಕೋವಿಡ್: ಪರಿಸ್ಥಿತಿ ನಿಭಾಯಿಸಲು ಸಭೆ ಕರೆದ ಪ್ರಧಾನಿ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next