Advertisement

ಬೆಂಗಳೂರಿನ ನಿಮ್ಹಾನ್ಸ್‌ನಿಂದ ಟೋಲ್‌ ಫ್ರೀ ನಂಬರ್‌

02:23 AM Mar 30, 2020 | Hari Prasad |

ಕೋವಿಡ್ 19 ವೈರಸ್ ಎಲ್ಲರನ್ನೂ ಗೃಹಬಂಧನದಲ್ಲಿಟ್ಟಿರುವ ಈ ಸಂದರ್ಭದಲ್ಲಿ ಮನೆಗಳಲ್ಲೇ ಉಳಿದುಕೊಂಡ ಅನೇಕರಲ್ಲಿ ಮಾನಸಿಕ ಹಾಗೂ ವರ್ತನೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಇಂಥ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಬೆಂಗಳೂರಿನಲ್ಲಿರುವ ನಿಮ್ಹಾನ್ಸ್‌ ಮುಂದಾಗಿದೆ. ಅದರಂತೆ, ಯಾವುದೇ ಸಂದೇಹಗಳಿದ್ದರೂ ಸಂಸ್ಥೆಯ 080-46110007 ಟೋಲ್‌ ಫ್ರೀ ಸಂಖ್ಯೆಯನ್ನು ಸಂಪರ್ಕಿಸುವಂತೆ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.

Advertisement

ಇದೇ ವೇಳೆ, ವೈದ್ಯಕೀಯ ತುರ್ತು ಸ್ಥಿತಿ ನಿರ್ವಹಣೆ, ಪ್ರತ್ಯೇಕಿಸಲ್ಪಟ್ಟ ಹಾಸಿಗೆಗಳು, ನಿಗಾ ಕೇಂದ್ರಗಳು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆ ಮಾರ್ಗದರ್ಶನ ನೀಡಲು ಹತ್ತು ಗುಂಪು ರಚಿಸಿರುವುದಾಗಿ ಹೇಳಿದೆ. ಸೋಂಕು ಪರೀಕ್ಷಿಸುವ ಲ್ಯಾಬ್‌ಗಳ ಸಂಖ್ಯೆ ಹೆಚ್ಚಿಸಲಾಗಿದ್ದು, 47 ಖಾಸಗಿ ಲ್ಯಾಬ್‌ಗಳಿಗೆ ಅನುಮತಿ ನೀಡಲಾಗಿದೆ.

ಕರ್ತವ್ಯಕ್ಕೆ ಹಾಜರಾಗಲು ಸೂಚನೆ: ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗೆ ಹೊಸದಾಗಿ ನೇಮಿಸಲಾಗಿದ್ದ ಸುಮಾರು 450 ವೈದ್ಯಕೀಯ ಅಧಿಕಾರಿಗಳಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಸಿಎಪಿಎಫ್ ಆರೋಗ್ಯ ಕೇಂದ್ರಗಳನ್ನು ತೆರೆಯುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ನಿವೃತ್ತ ವೈದ್ಯರನ್ನೂ ಗುತ್ತಿಗೆ ಆಧಾರದ ಮೇಲೆ ಕರ್ತವ್ಯಕ್ಕೆ ನೇಮಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next