Advertisement
ಅಪಘಾತಗಳು ಉಂಟಾದಾಗ ವಾಹನಗಳು ರಸ್ತೆಯಿಂದ ಹೊರಕ್ಕೆ ಅಥವಾ ಆಳವಾದ ಕಂದಕಗಳಿಗೆ ಬೀಳದಂತೆ ತಡೆಯಲು ಇವುಗಳನ್ನು ಅಳವಡಿಸಲಾಗುತ್ತದೆ. ಜಿಲ್ಲಾ ವ್ಯಾಪ್ತಿ ಯಲ್ಲಿ ಹಾದು ಹೋಗುವ ಪ್ರಮುಖ ಹೆದ್ದಾರಿಗಳಾದ ಎನ್‌ಎಚ್ 66, ಎನ್‌ಎಚ್ 73 ಹೆದ್ದಾರಿಗಳಲ್ಲಿ ದಶಕಗಳ ಹಿಂದೆ ರಸ್ತೆ ನಿರ್ಮಾಣದ ವೇಳೆ ಕಬ್ಬಿಣದ ಪಟ್ಟಿಗಳನ್ನು ಅಳವಡಿಸಲಾಗಿತ್ತು. ಪ್ರಸ್ತುತ ಅಲ್ಲಲ್ಲಿ ನಜ್ಜುಗುಜ್ಜಾಗಿರುವುದು, ತುಂಡಾ ಗಿರುವುದು ಕಾಣಲು ಸಿಗುತ್ತಿವೆ.
ಇಂತಹ ನಜ್ಜುಗುಜ್ಜಾದ ಕಬ್ಬಿಣದ ಪಟ್ಟಿಗಳನ್ನು ಬದಲಾಯಿಸಿ, ಹೊಸದಾಗಿ ಅಳವಡಿಸುವ ಕೆಲಸ ಮಾತ್ರ ಹೆದ್ದಾರಿ ಪ್ರಾಧಿಕಾರದ ಮೂಲಕ ನಡೆಯುತ್ತಿಲ್ಲ. ಹೆದ್ದಾರಿಯಲ್ಲಿರುವ ಗುಂಡಿಗಳಿಗೆ ತೇಪೆ,ಡಾಮರು, ಡಿವೈಡರ್‌ಗಳಿಗೆ ಬಣ್ಣ
ಬಳಿಯುವುದು, ಬ್ಲಿಂಕರ್ಗಳ ಅಳವಡಿಕೆ, ಬೀದಿ ದೀಪಗಳ ನಿರ್ವಹಣೆ, ಹುಲ್ಲು ಪೊದೆಗಳ ತೆರವು ಸೇರಿದಂತೆ ಎಲ್ಲ ರೀತಿಯ ಕೆಲಸಗಳು ಪ್ರತಿ ವರ್ಷ ನಡೆಯುತ್ತದೆ. ಆದರೆ ಈ ಪಟ್ಟಿಗಳನ್ನು ರಿಪೇರಿಮಾಡಲು ಮಾತ್ರ ಇಲಾಖೆ ಮುಂದಾಗು ತ್ತಿಲ್ಲ ಎನ್ನುವ ಆರೋಪಗಳು ಸಾರ್ವಜನಿಕವಲಯದಿಂದ ಕೇಳಿ ಬಂದಿವೆ. ಹೆಚ್ಚಿನ ಅಪಾಯಕ್ಕೆ ಆಹ್ವಾನ
ಕೆಲವು ಕಡೆಗಳಲ್ಲಿ “ಪಟ್ಟಿ’ ಅಳವಡಿಸಿದ್ದ ಕಬ್ಬಿಣದ ಕಂಬಗಳು ಮಾತ್ರ ಉಳಿದಿದ್ದು, ಇವುಗಳೂ ಅಪಾಯಕ್ಕೆ ಆಹ್ವಾನ ನೀಡಿದಂತಿವೆ. ರಾತ್ರಿ ವೇಳೆ ವಾಹನ ಸವಾರರಿಗೆ ತಡೆ ಇರುವುದು ಗೋಚರಿಸಲು ಅಳವಡಿಸಲಾಗಿದ್ದ ಕೆಂಪು ಬಣ್ಣದ ರಿಫ್ಲೆಕ್ಟರ್‌ಗಳು ಕೂಡ ಮಾಯವಾಗಿದ್ದು, ಇದು ಕೂಡಾ ಅಪಾಯವೇ. ಸ್ಥಳೀಯರು ಕೂಡ ತಮ್ಮ ಆವಶ್ಯತೆಗಳಿಗಾಗಿ ಅವುಗಳನ್ನು ಕತ್ತರಿಸಿರುವುದು, ಕೆಲವು ಕಡೆಗಳಲ್ಲಿ ಕಾಮಗಾರಿಗಳಿಗಾಗಿ ತುಂಡರಿಸಿ ತೆಗೆದು ಪುನಃ ಅಳವಡಿಸದಿರುವುದೂ ಇದೆ.
Related Articles
Advertisement