Advertisement
ಕಾರಣ ಏನು..?ರಾಷ್ಟ್ರೀಯ ಹೆದ್ದಾರಿ 66ರ ಈ ಮೂಲ್ಕಿ ಭಾಗದ ರಸ್ತೆಯ ಪ್ರದೇಶದಲ್ಲಿ ನಿರ್ವಹಣೆ ನಡೆಸುತ್ತಿರುವ ನವಯುಗ ಸಂಸ್ಥೆಯು ರಸ್ತೆಯಲ್ಲಿ ಆಗಾಗ ಬೀಳುತ್ತಿರುವ ಹೊಂಡ ಗುಂಡಿಗಳನ್ನು ಮುಚ್ಚಲು ಹಾಗೂ ಅಲ್ಲಲ್ಲಿ ಬಿರುಕು ಬಿಟ್ಟಿರುವುದನ್ನು ದುರಸ್ತಿ ಮಾಡಲು ವಿಶೇಷ ತಂತ್ರಜ್ಞಾನದ ಮೂಲಕ ಸುಮಾರು ಮೂರು ಇಂಚು ಡಾಮರನ್ನು ಕಟ್ಟಿಂಗ್ ಮಿಷನ್ನಿನ ಮೂಲಕ ಹೆದ್ದಾರಿಯ ಒಂದು ಭಾಗದಲ್ಲಿ ಸಂಪೂರ್ಣವಾಗಿ ಸಮಾನಾಂತರವಾಗಿ ತೆಗೆದಿದ್ದು ರಸ್ತೆಯು ರಗಡಾಗಿ ನಿರ್ಮಾಣವಾಗಿದೆ. ಈ ರಸ್ತೆಯ ಮೇಲೆ ದ್ವಿಚಕ್ರ ವಾಹನಗಳ ಸಂಚಾರಿಸಿದಾಗ ಬ್ಯಾಲೆನ್ಸ್ ತಪ್ಪಿ ಅಡ್ಡ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಾಗಿ ಮಹಿಳೆಯರು ಚಲಾಯಿಸುವ ವಾಹನಗಳು ಆಯಾ ತಪ್ಪಿ ಬೀಳುತ್ತಿ ರುವುದು ಈ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಪಾವಂಜೆ ಸೇತುವೆಯಿಂದ ಹಳೆಯಂಗಡಿ ಮುಖ್ಯ ಜಂಕ್ಷನ್‌ವರೆಗೆ ಹಾಗೂ ಪಡುಪಣಂಬೂರು ಪೆಟ್ರೋಲ್ ಪಂಪ್‌ನಿಂದ ಕೊಲ್ನಾಡು ಕೈಗಾರಿಕ ಪ್ರಾಂಗಣದ ಜಂಕ್ಷನ್ ನವರೆಗೆ ಈ ರೀತಿಯಾಗಿ ನಿರ್ಮಾಣ ವಾಗಿದೆ. ಡಾಮರು ತೆಗೆದು ಒಂದು ವಾರವಾದರೂ ಸಹ ಮರು ಡಾಬರೀಕರಣ ನಡೆಯದೇ ಇರುವುದರಿಂದ ಜನರ ಅಸಮಾಧಾನ ಹೆಚ್ಚಾಗುತ್ತಿದೆ. ಈ ಭಾಗದ ರಸ್ತೆಯ ಕೊನೆಯ ಭಾಗದಲ್ಲಿ ಡಾಮರಿನ ಜಲ್ಲಿನ ಕಲ್ಲಿನ ಚೂರುಗಳು ಶೇಖರಣೆಯಾಗಿರುವುದರಿಂದ ದ್ವಿಚಕ್ರ ವಾಹನಗಳ ಸವಾರರು ಬದಿಯಲ್ಲಿಯೇ ಸಂಚರಿಸಿದರು ಸ್ಕಿಡ್ ಆಗುತ್ತಿದೆ. ಈ ರಸ್ತೆಯ ಬಗ್ಗೆ ತಿಳಿದವರು ಇದೀಗ ಪಾವಂಜೆಯಿಂದ ಒಳರಸ್ತೆಯಾಗಿ ಪಡುಪಣಂಬೂರು ಪಂಚಾಯತ್‌ನ ಮೂಲಕ ಹೊರಗೆ ಬಂದು ಹೆದ್ದಾರಿ ಯನ್ನು ಸೇರಿಕೊಂಡು ಸುತ್ತಿಬಳಸಿ ಸಂಚರಿಸುತ್ತಿದ್ದಾರೆ. ಮಾಹಿತಿ ನೀಡಲಾಗಿದೆ
ಹೆದ್ದಾರಿಯನ್ನು ದುರಸ್ತಿಯ ನೆಪದಲ್ಲಿ ಡಾಮರನ್ನು ತೆಗೆದು ದ್ವಿಚಕ್ರ ವಾಹನ ಸವಾರರು ಬೀಳುತ್ತಿರುವ ಬಗ್ಗೆ ಈಗಾಗಲೇ ಅನೇಕರು ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ತತ್‌ಕ್ಷಣ ಕ್ರಮ ಕೈಗೊಳ್ಳಿ ಎಂದು ನವಯುಗ ಸಂಸ್ಥೆಯ ಅಧಿಕಾರಿಗೆ ಕೂಡಲೆ ತಿಳಿಸಿದ್ದೇನೆ. ಹಳೆಯಂಗಡಿಯ ರಸ್ತೆ ಹಾಗೂ ಚರಂಡಿಯ ಬಗ್ಗೆಯೂ ಗಮನ ಸೆಳೆದಿದ್ದೇನೆ. ಒಂದೆರಡು ದಿನದಲ್ಲಿ ಸರಿಯಾಗದಿದ್ದಲ್ಲಿ ಶಾಸಕರ ಮೂಲಕ ಆಗ್ರಹಿಸುವ ಪ್ರಯತ್ನ ನಡೆಸಲಾಗುವುದು.
Related Articles
Advertisement
ತತ್‌ಕ್ಷಣ ಕ್ರಮ ಕೈಗೊಳ್ಳುತ್ತೇವೆಹೆದ್ದಾರಿ ಮೇಲಿನ ಹೊಂಡ ಗುಂಡಿಗಳನ್ನು ಅಲ್ಲಲ್ಲಿ ತೇಪೆ ಹಚ್ಚಿ ದುರಸ್ತಿ ಕಾರ್ಯ ನಡೆ ಸುವ ಬದಲು ನೇರವಾಗಿ ಸಂಪೂರ್ಣವಾಗಿ ಡಾಮರೀ ಕರಣ ನಡೆಸುವ ಕಾಮಗಾರಿ ಯನ್ನು ಅತಿ ಹೆಚ್ಚು ಹಾನಿ ಯಾಗುವ ಪ್ರದೇಶದ ರಸ್ತೆಯಲ್ಲಿ ಈ ರೀತಿ ಕಾಮ ಗಾರಿ ನಡೆಸುತ್ತಿದ್ದೇವೆ ಇದು ಮುಕ್ಕದಿಂದ ಪಡುಬಿದ್ರಿ ಯವರೆಗೆ ಆರಂಭದ ಹಂತ ವಾಗಿ ನಡೆಯುತ್ತಿದೆ. ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಯಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ತತ್‌ಕ್ಷಣ ಡಾಮರು ನಡೆಸಲು ಕ್ರಮ ಕೈಗೊಳ್ಳುತ್ತೇವೆ. ಸವಾರರು ಸಹಕರಿಸಬೇಕು.
-ಶಿವಪ್ರಸಾದ್, ಪ್ರಬಂಧಕರು, ನವಯುಗ್ ಸಂಸ್ಥೆ – ನರೇಂದ್ರ ಕೆರೆಕಾಡು