Advertisement

ರಾಷ್ಟ್ರೀಯ ಕ್ರೀಡಾಕೂಟ: ಚಿನ್ನ ಗೆದ್ದ ಮೀರಾಬಾಯಿ ಚಾನು

10:28 PM Sep 30, 2022 | Team Udayavani |

ಗಾಂಧಿನಗರ್‌: ರಾಷ್ಟ್ರೀಯ ಕ್ರೀಡಾಕೂಟದ 49 ಕೆಜಿ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದರು.

Advertisement

ಮೀರಾಬಾಯಿ ಒಟ್ಟು 191 ಕೆಜಿ ಭಾರವೆತ್ತಿದರು. ಸ್ನ್ಯಾಚ್‌ನಲ್ಲಿ 84 ಕೆಜಿ ಹಾಗೂ ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ 107 ಕೆಜಿಗಳ ಸಾಧನೆ ಚಾನು ಅವರದಾಗಿತ್ತು.

ಎಡ ಮಣಿಗಂಟಿನ ನೋವಿನ ಕಾರಣ ಎರಡೂ ವಿಭಾಗಗಳಲ್ಲಿ ಮೂರನೇ ಪ್ರಯತ್ನ ಮಾಡಲಿಲ್ಲ. ಇದು ಮೀರಾಬಾಯಿ ಪಾಲ್ಗೊಂಡ ಕೇವಲ ಎರಡನೇ ರಾಷ್ಟ್ರೀಯ ಕ್ರೀಡಾಕೂಟ. ಮುಂಬರುವ ವಿಶ್ವ ಚಾಂಪಿಯನ್‌ಶಿಪ್‌ ಹಾಗೂ ಏಷ್ಯಾಡ್‌ನ‌ಲ್ಲಿ ಪೋಡಿಯಂ ಏರುವುದು ಈ ಮಣಿಪುರಿ ವೇಟ್‌ಲಿಫ್ಟರ್‌ ಗುರಿ.

49 ಕೆಜಿ ವಿಭಾಗದ ಬೆಳ್ಳಿ ಪದಕ ಸಂಜಿತಾ ಚಾನು ಪಾಲಾಯಿತು. ಅವರು ಒಟ್ಟು 187 ಕೆಜಿ (82 ಕೆಜಿ ಪ್ಲಸ್‌ 105 ಕೆಜಿ) ಭಾರವೆತ್ತಿದರು. “ನನ್ನ ಪಾಲಿಗೆ ಇದೊಂದು ವಿಶೇಷ ಕ್ಷಣ. ಕೇರಳದ 2015ರ ಕೂಟದಲ್ಲಿ ನಾನು ಬಂಗಾರ ಜಯಿಸಿದ್ದೆ. ಆದರೆ ಇಲ್ಲಿ ಮೀರಾಬಾಯಿ ಚಿನ್ನ ಗೆಲ್ಲಲು ಅರ್ಹರಾಗಿದ್ದರು’ ಎಂಬುದಾಗಿ ಸಂಜಿತಾ ಪ್ರತಿಕ್ರಿಯಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next