Advertisement

69th National Film Awards: ಅಲ್ಲು‌,ಆಲಿಯ ಭಟ್‌.. ಪ್ರಶಸ್ತಿ ಗೆದ್ದ ಕನ್ನಡದ ಚಾರ್ಲಿ

07:12 PM Aug 24, 2023 | Team Udayavani |

ನವದೆಹಲಿ: 2023ರ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಗುರುವಾರ (ಆ.24 ರಂದು) ಅನೌನ್ಸ್‌ ಆಗಿದೆ. ಹಲವರು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರ ಪಟ್ಟಿಯನ್ನು ಅನೌನ್ಸ್‌ ಮಾಡಲಾಗಿದೆ. ಪ್ರಾದೇಶಿಕ ಹಿಂದಿ ಚಿತ್ರರಂಗದ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

Advertisement

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ 28 ​​ಭಾಷೆಗಳಲ್ಲಿ 280 ಚಲನಚಿತ್ರಗಳು ಪ್ರಶಸ್ತಿಗಾಗಿ ಸಲ್ಲಿಕೆ ಆಗಿತ್ತು.

ಆಲಿಯಾ ಭಟ್, ಕೃತಿ ಸನೋನ್ , ಅಲ್ಲು ಅರ್ಜುನ್ ಮುಂತಾದ ಖ್ಯಾತ ಕಲಾವಿದರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಪ್ರಶಸ್ತಿಗಳ ಪಟ್ಟಿ ಮತ್ತು ವಿಭಾಗ:

ಅತ್ಯುತ್ತಮ ನಟ ಪ್ರಶಸ್ತಿ : ಅಲ್ಲು ಅರ್ಜುನ್ (ಪುಷ್ಪ)

Advertisement

ಅತ್ಯುತ್ತಮ ನಟಿ ಪ್ರಶಸ್ತಿ: ಆಲಿಯಾ ಭಟ್‌ ( ಗಂಗೂಬಾಯಿ ಕಾಠಿಯಾವಾಡಿ)

ಕೃತಿ ಸನೋನ್ (ಮಿಮಿ)

ಅತ್ಯುತ್ತಮ ಚಲನಚಿತ್ರ ವಿಭಾಗಗಳು (ಪ್ರಾದೇಶಿಕ):

ಫೀಚರ್ ಫಿಲ್ಮ್ ವಿಭಾಗ:  

ಅತ್ಯುತ್ತಮ ಮಿಶಿಂಗ್ ಚಿತ್ರ ( ಅಸ್ಸಾಂ ಪ್ರಾದೇಶಿಕ ಭಾಷೆ)  – ಬ್ಯಾಂಬೋ ರೈಸ್

ಅತ್ಯುತ್ತಮ ಅಸ್ಸಾಮಿ ಚಲನಚಿತ್ರ – ಅನುರ್

ಅತ್ಯುತ್ತಮ ಬೆಂಗಾಲಿ ಚಲನಚಿತ್ರ – ಕಲ್ಕೊಕ್ಖೋ

ಅತ್ಯುತ್ತಮ ಹಿಂದಿ ಚಿತ್ರ – ಸರ್ದಾರ್ ಉದಾಮ್

ಅತ್ಯುತ್ತಮ ಗುಜರಾತಿ ಚಲನಚಿತ್ರ – ಲಾಸ್ಟ್‌ ಫಿಲ್ಮ್‌ ಶೋ

ಅತ್ಯುತ್ತಮ ಕನ್ನಡ ಚಲನಚಿತ್ರ – 777 ಚಾರ್ಲಿ

ಅತ್ಯುತ್ತಮ ಮೈತಾಲಿ ಚಿತ್ರ- ಸಮನಾಂತರ್

ಅತ್ಯುತ್ತಮ ಮರಾಠಿ ಚಿತ್ರ – ಎಕ್ದಾ ಕೇ ಜಲಾ

ಅತ್ಯುತ್ತಮ ಮಲಯಾಳಂ ಚಿತ್ರ – ಹೋಮ್

ಅತ್ಯುತ್ತಮ ಒಡಿಯಾ ಚಿತ್ರ – ಪ್ರತೀಕ್ಷ

ಅತ್ಯುತ್ತಮ ತಮಿಳು ಚಿತ್ರ – ಕಡೈಸಿ ವಿವಾಸಾಯಿ

ಅತ್ಯುತ್ತಮ ತೆಲುಗು ಚಿತ್ರ – ಉಪ್ಪೇನಾ

ಅತ್ಯುತ್ತಮ ಜನಪ್ರಿಯ ಸಿನಿಮಾ: 

RRR 

ಅತ್ಯುತ್ತಮ ಚೊಚ್ಚಲ ಚಿತ್ರ: ಮೆಪ್ಪಡಿಯಾನ್ 

ಅತ್ಯುತ್ತಮ ನಿರ್ದೇಶಕ- ಸುಕುಮಾರ್ (ಪುಷ್ಪ) 

ಅತ್ಯುತ್ತಮ ಸಂಗೀತ ನಿರ್ದೇಶಕ- ದೇವಿ ಶ್ರೀ ಪ್ರಸಾದ್

ನಾನ್ ಫೀಚರ್ ಫಿಲ್ಮ್ಸ್: (ನಾನ್-ಫೀಚರ್ ಫಿಲ್ಮ್ ವರ್ಗದ ಪ್ರಮುಖ ವಿಜೇತರು)

ಅತ್ಯುತ್ತಮ ನಾನ್-ಫೀಚರ್ ಚಿತ್ರ – ಏಕ್ ಥಾ ಗಾಂವ್ (ಗರ್ವಾಲಿ ಮತ್ತು ಹಿಂದಿ)

ಅತ್ಯುತ್ತಮ ನಿರ್ದೇಶಕ – ಸ್ಮೈಲ್ ಪ್ಲೀಸ್ (ಹಿಂದಿ) ಚಿತ್ರಕ್ಕಾಗಿ ಬಾಕುಲ್ ಮತೀಯಾನಿ

ಕೌಟುಂಬಿಕ ಮೌಲ್ಯಗಳ ಮೇಲಿನ ಅತ್ಯುತ್ತಮ ಚಲನಚಿತ್ರ – ಚಾಂದ್ ಸಾನ್ಸೆ (ಹಿಂದಿ) 

ಅತ್ಯುತ್ತಮ ನಾನ್‌ ಫೀಕ್ಷನ್ ಚಲನಚಿತ್ರ – ದಲ್ ಭಟ್ (ಗುಜರಾತಿ)  

ಅತ್ಯುತ್ತಮ ಛಾಯಾಗ್ರಾಹಕ – ಪಾತಾಳ ಟೀ (ಭೋಟಿಯಾ) – ಬಿಟ್ಟು ರಾವತ್

ಅತ್ಯುತ್ತಮ ತನಿಖಾ ಚಿತ್ರ – ಲುಕಿಂಗ್ ಫಾರ್ ಚಲನ್ (ಇಂಗ್ಲಿಷ್)

ಅತ್ಯುತ್ತಮ ಶೈಕ್ಷಣಿಕ ಚಿತ್ರ – ಸಿರ್ಪಿಗಲಿನ್ ಸಿಪಂಗಲ್ (ತಮಿಳು)

ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಚಲನಚಿತ್ರ – ಮಿಥು ದಿ (ಇಂಗ್ಲಿಷ್), ತ್ರೀ ಟೂ ಒನ್ (ಮರಾಠಿ ಮತ್ತು ಹಿಂದಿ)

ಅತ್ಯುತ್ತಮ ಪರಿಸರ ಚಲನಚಿತ್ರ – ಮುನ್ನಂ ವಲವು (ಮಲಯಾಳಂ)

ಆರ್‌ಆರ್‌ಆರ್, ಸರ್ದಾರ್ ಉಧಮ್, ಗಂಗೂಬಾಯಿ ಕಾಥಿಯಾವಾಡಿ ಪ್ರಶಸ್ತಿ..

ರಾಷ್ಟ್ರೀಯ ಭಾವೈಕ್ಯತೆಯ ಅತ್ಯುತ್ತಮ ಚಲನಚಿತ್ರ – ಕಾಶ್ಮೀರ್ ಫೈಲ್ಸ್

ಸಂಪೂರ್ಣ ಮನರಂಜನೆಯ ಅತ್ಯುತ್ತಮ ಚಲನಚಿತ್ರ – RRR

ಅತ್ಯುತ್ತಮ ಚಲನಚಿತ್ರ – ರಾಕೆಟ್ರಿ: ದಿ ನಂಬಿ ಎಫೆಕ್ಟ್

ಅತ್ಯುತ್ತಮ  ಹಿನ್ನೆಲೆ ಗಾಯಕಿ – ಶ್ರೇಯಾ ಘೋಷಾಲ್ (ಇರವಿನ್ ನಿಜಾಲ್ ಸಿನಿಮಾಕ್ಕಾಗಿ)

ಅತ್ಯುತ್ತಮ  ಹಿನ್ನೆಲೆ ಗಾಯಕ – ಕಾಲ ಭೈರವ (RRR)

ಅತ್ಯುತ್ತಮ ಪೋಷಕ ನಟ – ಪಂಕಜ್ ತ್ರಿಪಾಠಿ (ಮಿಮಿ)

ಅತ್ಯುತ್ತಮ ಪೋಷಕ ನಟಿ – ಪಲ್ಲವಿ ಜೋಶಿ (ಕಾಶ್ಮೀರ್‌ ಫೈಲ್ಸ್‌)

ಅತ್ಯುತ್ತಮ ಸಂಕಲನ – ಗಂಗೂಬಾಯಿ ಕಾಥಿಯಾವಾಡಿ

ಅತ್ಯುತ್ತಮ ಛಾಯಾಗ್ರಹಣ – ಸರ್ದಾರ್ ಉಧಮ್

69ನೇ ರಾಷ್ಟ್ರೀಯ ಪ್ರಶಸ್ತಿ: ತಾಂತ್ರಿಕ ಪ್ರಶಸ್ತಿಗಳು

ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ – RRR

ಅತ್ಯುತ್ತಮ ನೃತ್ಯ ಸಂಯೋಜನೆ – RRR

ಅತ್ಯುತ್ತಮ ಸ್ಪೆಷೆಲ್‌ ಎಫೆಕ್ಟ್ಸ್ – RRR

ಸ್ಪೆಷೆಲ್‌ಜ್ಯೂರಿ ಅವಾರ್ಡ್ – ಶೇರ್ಷಾ

ಅತ್ಯುತ್ತಮ ಸಾಹಿತ್ಯ – ಕೊಂಡ ಪೋಲಂ   

ಇತರೆ ವಿಭಾಗದ ಪ್ರಶಸ್ತಿಗಳು..

ಅತ್ಯುತ್ತಮ ಸಂಗೀತ  – ಪುಷ್ಪ (ತೆಲುಗು) , ಆರ್‌ ಆರ್‌ ಆರ್

ಅತ್ಯುತ್ತಮ ವಸ್ತ್ರ ವಿನ್ಯಾಸ – ಸರ್ದಾರ್ ಉಧಮ್ 

ಅತ್ಯುತ್ತಮ ಮೇಕಪ್ ಕಲಾವಿದೆ – ಗಂಗೂಬಾಯಿ ಕಾಥಿಯಾವಾಡಿ  

ಅತ್ಯುತ್ತಮ ಸಂಕಲನ – ಗಂಗೂಬಾಯಿ ಕಾಥಿಯಾವಾಡಿ

ಅತ್ಯುತ್ತಮ ಆಡಿಯೋಗ್ರಫಿ – ಚವಿಟ್ಟು, ಸರ್ದಾರ್ ಉದಾಮ್ ಮತ್ತು ಜಿಲ್ಲಿ

ಅತ್ಯುತ್ತಮ ಚಿತ್ರಕಥೆ – ನಾಯಟ್ಟು, ಗಂಗೂಬಾಯಿ ಕಾಥಿಯಾವಾಡಿ  ‌ 

ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ಅಲ್ಲು ಅರ್ಜುನ್‌ ಅವರಿಗೆ ಜೂ.ಎನ್‌ ಟಿ ಆರ್‌ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ. ಇನ್ನು ʼಮಿಮಿʼ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗೆದ್ದ ಪಂಕಜ್‌ ತ್ರಿಪಾಠಿ ಅವರು “ಇದು ನನಗೆ ದುಃಖ ಅವಧಿಯಾಗಿದೆ. ಈ ಸಮಯದಲ್ಲಿ ನನ್ನೊಂದಿಗೆ ನನ್ನ ತಂದೆ ಇದ್ದಿದ್ದರೆ ತುಂಬಾ ಸಂತೋಷಪಡುತ್ತಿದ್ದರು. ಈ ಪ್ರಶಸ್ತಿಯನ್ನು ನಾನು ಅವರಿಗೆ ಅಪರ್ಪಿಸುತ್ತೇನೆ ಎಂದು ʼಇಂಡಿಯಾ ಟುಡೇʼ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next