Advertisement

ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲಯಾಳಂ ಸಿನಿಮಾ ನಿರ್ದೇಶಕ ಸೇತುಮಾಧವನ್ ಇನ್ನಿಲ್ಲ

03:50 PM Dec 24, 2021 | Team Udayavani |

ಚೆನ್ನೈ/ತಿರುವನಂತಪುರಂ: ಪ್ರಸಿದ್ಧ ಸಿನಿಮಾ ನಿರ್ದೇಶಕ, ಹತ್ತು ರಾಷ್ಟ್ರಪ್ರಶಸ್ತಿ ಹಾಗೂ ಒಂಬತ್ತು ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ಎಸ್. ಸೇತುಮಾಧವನ್ (90ವರ್ಷ) ಶುಕ್ರವಾರ(ಡಿಸೆಂಬರ್ 24)  ಚೆನ್ನೈ ನಿವಾಸದಲ್ಲಿ ನಿಧನರಾಗಿರುವುದಾಗಿ ಮೂಲಗಳು ತಿಳಿಸಿವೆ.

Advertisement

1931ರಲ್ಲಿ ಕೇರಳದ ಪಾಲಕ್ಕಾಡ್ ನಲ್ಲಿ ಸೇತುಮಾಧವನ್ ಜನಿಸಿದ್ದರು. 1990ರ ದಶಕದಲ್ಲಿ ಸಿನಿಮಾ ನಿರ್ದೇಶನಕ್ಕೆ ಗುಡ್ ಬೈ ಹೇಳಿದ ನಂತರ ಚೆನ್ನೈನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. 1950ರ ದಶಕದಲ್ಲಿ ಎಲ್ ವಿ ಪ್ರಸಾದ್, ಸುಂದರ್ ರಾವ್ ಸೇರಿದಂತೆ ಇನ್ನಿತರ ಹಿರಿಯ ನಿರ್ದೇಶಕರ ಜತೆ ಸಹಾಯಕರಾಗಿ ಸೇತುಮಾಧವನ್ ಕಾರ್ಯನಿರ್ವಹಿಸುವ ಮೂಲಕ ತಮ್ಮ ಸಿನಿಮಾ ನಿರ್ದೇಶನ ಜೀವನ ಆರಂಭಿಸಿದ್ದರು.

1960ರಲ್ಲಿ ಸೇತುಮಾಧವನ್ ಅವರು ಸ್ವತಂತ್ರವಾಗಿ ಸಿಂಹಳಿ ಭಾಷೆಯ ಸಿನಿಮಾವನ್ನು ನಿರ್ದೇಶನ ಮಾಡಿದ ನಂತರ ಅವರು ತಮ್ಮ ನಿರ್ದೇಶನದಲ್ಲಿ ಹಿಂದಿರುಗಿ ನೋಡಿಲ್ಲ. ಮಲಯಾಳಂ, ತೆಲುಗು, ತಮಿಳು, 1975ರಲ್ಲಿ ತೆರೆ ಕಂಡಿದ್ದ ಹಿಂದಿಯ ಜೂಲಿ ಸೇರಿದಂತೆ ಸುಮಾರು 70 ಸಿನಿಮಾಗಳನ್ನು ನಿರ್ದೇಶಿಸಿದ್ದರು.

ಒಡಾಯಿಲ್ ನಿನ್ನು, ದಾಹಂ, ಕೊಟ್ಟುಕುಡುಂಬಂ, ಅನುಭವಂಗಳ್ ಪಾಲಿಚಾಕಾಲ್, ಚಟ್ಟಾಕಾರಿ, ಒಪ್ಪೋಲ್, ಮರುಪಾಕ್ಕಂ ಸೇರಿದಂತೆ ಹಲವಾರು ಜನಪ್ರಿಯ ಸಿನಿಮಾಗಳನ್ನು ಸೇತುಮಾಧವನ್ ನಿರ್ದೇಶಿಸಿದ್ದರು. 1971ರಲ್ಲಿ ಬಿಡುಗಡೆಯಾಗಿದ್ದ ಅನುಭವಂಗಳ್ ಪಾಲಿಚಾಕಾಲ್ ಸಿನಿಮಾದಲ್ಲಿ ನಟ ಮಮ್ಮುಟ್ಟಿ ಅವರು ಸೇತುಮಾಧವನ್ ಜೊತೆ ಕಿರಿಯ ನಟನಾಗಿ ಕಾರ್ಯನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next