ಮಂಗಳೂರು: ರಾಷ್ಟ್ರೀಯ ಡೆಂಗ್ಯೂ ದಿನದ ಅಂಗವಾಗಿ ಸೋಮವಾರ ನಗರದ ವಿವಿಧ ಕಚೇರಿಗಳು, ವಸತಿ ಪ್ರದೇಶ ಗಳಲ್ಲಿ ಕೀಟಜನ್ಯ ರೋಗಗಳ ಬಗ್ಗೆ ಜಾಗೃತಿ ಚಟುವಟಿಕೆ ಹಮ್ಮಿಕೊಳ್ಳಲಾಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 100ಕ್ಕೂ ಅಧಿಕ ಕಚೇರಿ ಸಿಬಂದಿಗೆ ಡೆಂಗ್ಯೂ ಮತ್ತು ಮಲೇರಿಯ ಬಗ್ಗೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಜಾಗೃತಿ ಮೂಡಿಸಿದರು.
ಡಿಸಿ ಕಚೇರಿ ಕಟ್ಟಡದ ಎಲ್ಲ ಸಿಬಂದಿ ಕಚೇರಿ ಆವರಣದ ಸುತ್ತಮುತ್ತ ಮಳೆ ನೀರು ಸಂಗ್ರಹವಾಗುವ ಸ್ಥಳಗಳನ್ನು ಸ್ವತ್ಛಗೊಳಿಸಿದರು.
ಸಾರ್ವಜನಿಕರು ತಮ್ಮ ವಾಸದ ಮನೆಯ ಸುತ್ತಮುತ್ತಲಿನ ತಗ್ಗು ಭಾಗಗಳಲ್ಲಿ ಮಳೆ ನೀರು ಸಂಗ್ರಹ ವಾಗದಂತೆ ಸದಾ ಎಚ್ಚರಿಕೆ ವಹಿಸುವ ಮೂಲಕ ಡೆಂಗ್ಯೂ ಮತ್ತು ಮಲೇರಿಯ ನಿಯಂತ್ರಣಕ್ಕೆ ಕೈಜೋಡಿಸುವಂತೆ ವಿನಂತಿಸಲಾಯಿತು.
Related Articles
ಇದನ್ನೂ ಓದಿ:ಕರಾವಳಿಯಾದ್ಯಂತ ಸಿಡಿಲು ಸಹಿತ ಭಾರೀ ಮಳೆ; ಹಲವೆಡೆ ಕೃತಕ ನೆರೆ ಸೃಷ್ಟಿ
ಡೆಂಗ್ಯೂ ದಿನಾಚರಣೆ ಅಂಗವಾಗಿ ಬೆಳಗ್ಗೆ 10ರಿಂದ 11ರ ವರೆಗೆ ಜಾಗೃತಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಆಶಾ ಕಾರ್ಯಕರ್ತೆಯರು, ಬಹು ಉಪಯೋಗಿ ಕಾರ್ಯಕರ್ತರು ಹಲವು ಕಡೆಗಳಿಗೆ ತೆರಳಿ, ಜನವಸತಿ ಪ್ರದೇಶಗಳ ಸುತ್ತ ಪರಿಶೀಲನೆ ನಡೆಸಿ ಲಾರ್ವಾ ಉತ್ಪಾದನ ಕೇಂದ್ರಗಳನ್ನು ನಾಶಪಡಿಸಿದರು.