Advertisement

ಡೆಂಗ್ಯೂ ಪ್ರಕರಣ ಭಾರೀ ಏರಿಕೆ : ಇಂದು ರಾಷ್ಟ್ರೀಯ ಡೆಂಗ್ಯೂ ದಿನ

11:57 PM May 15, 2022 | Team Udayavani |

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ನಡುವೆಯೂ ಡೆಂಗ್ಯೂ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಆರೋಗ್ಯ ಇಲಾಖೆ ಇದೀಗ ಕೋವಿಡ್‌ ಜತೆ-ಜತೆಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುಂದಾಗಿದೆ.

Advertisement

ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತನ್ನೆಲ್ಲ ಗಮನವನ್ನು ಕೋವಿಡ್‌ ಲಸಿಕೆ ವಿತರಣೆ, ನಿಯಂತ್ರಣ ಸೇರಿದಂತೆ ಇತರ ಕೆಲಸಗಳಿಗೆ ಗಮನ ನೀಡಿದ್ದು, ಇದರ ನಡುವೆ ಕಡಿಮೆಯಾಗಿದ್ದ ಡೆಂಗ್ಯೂ ಪ್ರಕರಣ ಸದ್ದಿಲ್ಲದೆ ಏರಿಕೆಯಾಗಿದೆ. 2020ರಲ್ಲಿ ದಾಖಲಾದ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 2021ರಲ್ಲಿ ಎರಡು ಪಟ್ಟು ಏರಿಕೆಯಾಗಿದೆ.

ಡೆಂಗ್ಯೂ 7,393ಕ್ಕೆ ಏರಿಕೆ
ರಾಜ್ಯಾದ್ಯಂತ 2019ರಲ್ಲಿ ಅಂದರೆ ಕೋವಿಡ್‌ ಪೂರ್ವದಲ್ಲಿ 91,091 ಮಂದಿಯ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 18,183 ಮಂದಿ ಡೆಂಗ್ಯೂಗೆ ತುತ್ತಾಗಿದ್ದು, 17 ಮಂದಿ ಡೆಂಗ್ಯೂನಿಂದ ಮೃತಪಟ್ಟಿದ್ದರು. 2020ರಲ್ಲಿ 21,904 ಮಾದರಿಯಲ್ಲಿ 3,823 ಮಂದಿ ಡೆಂಗ್ಯೂಗೆ ತುತ್ತಾಗಿದ್ದು 5 ಮರಣ ಸಂಭವಿಸಿದೆ. 2020ರಲ್ಲಿ 7,393 ಮಂದಿಗೆ ಡೆಂಗ್ಯೂ ದೃಢಗೊಂಡಿದೆ. 2020ಕ್ಕೆ ಹೋಲಿಕೆ ಮಾಡಿದರೆ 2021ರಲ್ಲಿ ಡೆಂಗ್ಯೂ 7393ಕ್ಕೆ ವರದಿಯಾಗಿದೆ. ಅತ್ಯಧಿಕ ಪ್ರಕರಣ ಬೆಂಗಳೂರು ನಗರದಲ್ಲಿ 1,629 ಪ್ರಕರಣಗಳು ದಾಖಲಾಗಿದೆ. ಪ್ರಸ್ತುತ ನಗರದಲ್ಲಿ 2022ರ ಎಪ್ರಿಲ್‌ ಅಂತ್ಯಕ್ಕೆ 1,185 ಪ್ರಕರಣ ವರದಿಯಾಗಿದೆ.

ಮುನ್ನೆಚ್ಚರಿಕೆ ಕ್ರಮ
ಡೆಂಗ್ಯೂ ತಡೆಗಟ್ಟಲು ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳೂ ಸಹ ಡೆಂಗ್ಯೂ ಪ್ರಕರಣಗಳ ಮಾಹಿತಿಯನ್ನು ಆರೋಗ್ಯ ಇಲಾಖೆ ಪಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ 2021ರ ಡಿಸೆಂಬರ್‌ ಅಂತ್ಯದ ವರೆಗೆ 96,26,262 ಮನೆಗಳಲ್ಲಿ ಈಡೀಸ್‌ ಲಾರ್ವಾ ಸಮೀಕ್ಷೆ ನಡೆಸಿದ್ದು, ಅದರಲ್ಲಿ 54,20,122 ಮನೆಗಳಲ್ಲಿ ಈಡೀಸ್‌ ಲಾರ್ವಾ ಪತ್ತೆಯಾಗಿದೆ. ಈ ಮನೆಗಳಲ್ಲಿ ಒಟ್ಟು 2,27,30,509 ತಾಣಗಳನ್ನು ಪರಿಶೀಲಿಸಿ 1,73,441 ತಾಣಗಳಲ್ಲಿ ಲಾರ್ವಾ ಕಂಡುಬಂದಿದ್ದು, ಈ ಪೈಕಿ 1,59,409 ಈಡೀಸ್‌ ಲಾರ್ವಾ ತಾಣಗಳನ್ನು ನಾಶಪಡಿಸಲಾಗಿದೆ.

ದ.ಕ., ಉಡುಪಿ ಮುಂಚೂಣಿಯಲ್ಲಿ
ಅತ್ಯಧಿಕ ಡೆಂಗ್ಯೂ ಪತ್ತೆಯಾದ ಜಿಲ್ಲಾವಾರು ಪಟ್ಟಿಯಲ್ಲಿ ದ.ಕ., ಉಡುಪಿ, ಬಳ್ಳಾರಿ, ಕಲಬುರಗಿ, ಕೋಲಾರ ಅಗ್ರ ಸ್ಥಾನ ಪಡೆದುಕೊಂಡಿದೆ.ಯಾದಗಿರಿ, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರದಲ್ಲಿ ಎರಡಂಕಿ ಡೆಂಗ್ಯೂ ವರದಿಯಾಗಿದೆ. ಅಧಿಕ ಪ್ರಕರಣಗಳು ಪತ್ತೆಯಾದ ಜಿಲ್ಲೆಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಸ್ವಯಂಸೇವಕರು ಮನೆ ಭೇಟಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

Advertisement

ಡೆಂಗ್ಯೂ ಲಕ್ಷಣ

– ಇದ್ದಕ್ಕಿದ್ದಂತೆ ತೀವ್ರ ಜ್ವರ

– ವಿಪರೀತ ತಲೆನೋವು

– ಕಣ್ಣಿನ ಹಿಂಭಾಗದಲ್ಲಿ

– ಮೈ-ಕೈ ನೋವು

– ಕೀಲುಗಳಲ್ಲಿ ವಿಪರೀತ ನೋವು

– ವಾಕರಿಕೆ, ವಾಂತಿ

– ಆಂತರಿಕ ರಕ್ತಸ್ರಾವ

– ಒಸಡುಗಳಲ್ಲಿ ರಕ್ತಸ್ರಾವ

– ತೃಪ್ತಿ ಕುಮ್ರಗೋಡು 

Advertisement

Udayavani is now on Telegram. Click here to join our channel and stay updated with the latest news.

Next