Advertisement

ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಸಚಿವರ ಆಗ್ರಹ

08:39 PM Sep 26, 2021 | Team Udayavani |

ನವದೆಹಲಿ: ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿಯ ಮುಂದಿನ ವಾರ್ಷಿಕ ಸಭೆಯನ್ನು ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಸುವಂತೆ ಕರ್ನಾಟಕದ ಸಹಕಾರ ಸಚಿವರು ಹಾಗೂ ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ನಿರ್ದೇಶಕರು ಆದ ಎಸ್.ಟಿ.ಸೋಮಶೇಖರ್ ಅವರು ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿಗೆ ಮನವಿ ಮಾಡಿದರು.

Advertisement

ಭಾನುವಾರ ನವದೆಹಲಿಯ ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ಅಧ್ಯಕ್ಷರಾದ ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ವಸತಿ ಮಹಾಮಂಡಳಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮಹಾರಾಷ್ಟ್ರ, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ, ಹರಿಯಾಣ ಸೇರಿದಂತೆ ಸಭೆಯಲ್ಲಿ 15ಕ್ಕೂ ಹೆಚ್ಚು ರಾಜ್ಯಗಳ ನಿರ್ದೇಶಕರು ಭಾಗವಹಿಸಿದ್ದರು. ರಾಷ್ಟ್ರೀಯ ವಸತಿ ನೀತಿ ಜಾರಿಗೊಳಿಸಲು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನಿವೇಶನ ದೊರಕಿಸಿಕೊಡುವ ಬಗ್ಗೆ ಕೆಲವು ಅಡ್ಡಿ ಆತಂಕಗಳಿವೆ. ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಕೆಲವು ಅಡಚಣೆಗಳಿದ್ದು ಇವುಗಳನ್ನು ಪರಿಹರಿಸಲು ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

ಈ ಸಭೆಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಸಹಕಾರಿ ವಸತಿ ಮಹಾಮಂಡಳಿಗಳನ್ನು ಬಲಪಡಿಸಲು ಕೆಲವು ಮುಖ್ಯ ತಿದ್ದುಪಡಿ ತರಲು ಚರ್ಚಿಸಲಾಯಿತು.

Advertisement

ಇದನ್ನೂ ಓದಿ :ಯೋಗಿ ಸಂಪುಟ ವಿಸ್ತರಣೆ: ಕೈ ತೊರೆದಿದ್ದ ಜಿತಿನ್ ಪ್ರಸಾದ್ ಗೆ ಕ್ಯಾಬಿನೆಟ್ ದರ್ಜೆ

Advertisement

Udayavani is now on Telegram. Click here to join our channel and stay updated with the latest news.

Next