Advertisement
ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವ ಸಿ.ಎಂ.ನಾಗರಾಜ ಅವರು ತಮ್ಮ ಸಾಧನೆ ಮತ್ತು ಸಾಧನೆಯ ಹಿಂದಿನ ಶ್ರಮದ ಬಗ್ಗೆ ಉಯವಾಣಿ ಯೊಂದಿಗೆ ಹಂಚಿಕೊಂಡಿದ್ದಾರೆ.
ಶಿಕ್ಷಕನಾಗಿ ಕೇವಲ ಪಠ್ಯದ ಬೋಧನೆ ಮಾತ್ರ ಮಾಡುತ್ತಿರಲಿಲ್ಲ. ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯವನ್ನು ಅತ್ಯಂತ ಸುಲಭವಾಗಿ ಅರ್ಥೈಸುವ ಹಲವು ಪ್ರಯೋಗಗಳನ್ನು ಮಾಡಿ, ವಿದ್ಯಾರ್ಥಿಗಳ ಮೂಲಕವೂ ಅದನ್ನು ಮಾಡಿಸುತ್ತಿದ್ದೇನೆ.
Related Articles
ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ, ಬಳಕೆ ಮಾತ್ರ ನಿಂತಿಲ್ಲ. ಹೀಗಾಗಿ ಬಳಕೆಯಾದ ಪ್ಲಾಸ್ಟಿಕ್ ಬ್ಯಾಗ್ ಇತ್ಯಾದಿಗಳನ್ನು ಉಪಯೋಗಿ ವಿದ್ಯಾರ್ಥಿ ಗಳ ಮೂಲಕವೇ ವಿವಿಧಕರಕುಶವ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದೇನೆ.ಹಾಗೆಯೇ ಜೈವಿಕ ತಾಜ್ಯದ ಸಮರ್ಪಕವಾಗಿ ಸದ್ಬಳಕೆ ಮಾಡಲು ನಾವೇ ಯಂತ್ರವನ್ನು ತಯಾರಿಸಿದ್ದೇವು. ಮಕ್ಕಳಿಗೆ ಜೀವನಕೌಶಲ್ಯದ ಜತೆಗೆ ಪೇಂಟಿಂಗ್, ಸೋಪ್ ಮೆಂಕಿಂಗ್, ಕಾಗದದಿಂದ ಸಿದ್ಧ ಪಡಿಸಬಹುದಾದ ವಿವಿಧ ಮಾದರಿಗಳು,ಕೌಶಲ್ಯಾಧಾರಿತ ವಿವಿಧ ಮಾದರಿಗಳನ್ನು ಸಿದ್ಧಪಡಿಸುವುದನ್ನು ಕಲಿಸುತ್ತಿದ್ದೇನೆ. ವಿಜ್ಞಾನದಲ್ಲಿ ವಿದ್ಯಾರ್ಥಿ ಗಳಿಗೆ ಆಸಕ್ತಿ ಬರಿಸಲು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದೆ.
Advertisement
ದಾನಿಗಳಿಂದಬಂದ ಅನುದಾನ ವಿನಿಯೋಗ ಹೇಗೆ?ದಾನಿಗಳು ಹಾಗೂ ಎನ್‌ಜಿಒ ಮೂಲಕ ಅನುದಾನ ಕ್ರೋಢೀಕರಿಸಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲತೆ ವಿನಿಯೋಗ ಮಾಡಲಾಗುತ್ತದೆ. 2018-19ರಲ್ಲಿ ಸುಮಾರು 1.45 ಲಕ್ಷ.ರೂ. ಮೌಲ್ಯದ ವಿವಿಧ ಸೌಲಭ್ಯವನ್ನು 151 ವಿದ್ಯಾರ್ಥಿಗಳು ಪಡೆದಿದ್ದಾರೆ. ಎಲ್‌ಇಡಿ ಟಿವಿ, ಸೋಲರ್ ಪ್ಯಾನಲ್, ಮೈಕ್ರೋಸ್ಕೋಪ್,ಸೋಲಾರ್ ಲ್ಯಾಂಪ್, 10ನೇ ತರಗತಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ಹೀಗೆ ದಾನಿಗಳಿಂದ ವಿವಿಧ ಸೌಲಭ್ಯ ವಿದ್ಯಾರ್ಥಿಗಳಿಗೆ ಸಿಗುವಂತಾಗಿದೆ.2019-20 ಹಾಗೂ 2020-21ರಲ್ಲಿ ಸುಮಾರು 9ಲಕ್ಷಕ್ಕೂ ಅಧಿಕ ಮೌಲ್ಯದ ಉತ್ಪನ್ನಗಳು ಹಾಗೂ ಸೌಲಭ್ಯವನ್ನು 330ಕ್ಕೂ ಅಧಿಕ ಮಕ್ಕಳು ಪಡೆದಿದ್ದಾರೆ. ಪರಿಸರ ಸ್ನೇಹಿ ಕಾರ್ಯಗಳು ಯಾವುವು?
ಉತ್ತರ : ಮಾಹಿತಿ, ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸುಲಭವಾಗಿ ವಿಜ್ಞಾನವನ್ನುಕಲಿಯಲು, ಅರ್ಥೈಸಿಕೊಳ್ಳಲು ಬೇಕಾದ ಅಗತ್ಯ ಕ್ರಮವನ್ನು ಜಾರಿಗೆ ತಂದಿದ್ದೇನೆ. ಶಾಲೆಯಲ್ಲಿ ಮಳೆ ನೀರಕೊಯ್ಲು, ನಿರಂತರ ಸಸಿ ನೆಟ್ಟು ಪೋಷಿಸುವುದು,ಕಸದಿಂದ ವಿವಿಧಕರಕುಶ ವಸ್ತುಗಳನ್ನು ತಯಾರಿಸುವುದು ಹೀಗೆ ವಿವಿಧ ಪರಿಸರ ಸ್ನೇಹಿ ಕ್ರಮಗಳನ್ನು ಶಾಲೆಯಲ್ಲಿ ನಡೆಯುತ್ತಿರುತ್ತದೆ. ಸಂಪನ್ಮೂಲ ವ್ಯಕ್ತಿಯಾಗಿ ಮಾಡಿರುವ ಕಾರ್ಯವೇನು?
ಕ್ಲಸ್ಟರ್ ಸಂಪನೂಲ ವ್ಯಕ್ತಿಯಾಗಿ ಶಿಕ್ಷಣ ಇಲಾಖೆಯ ಕಾರ್ಯಕ್ರಮವನ್ನು ಸಮರ್ಪಕ ಅನುಷ್ಠಾನದ ಜತೆ ಜತೆಗೆ ಸಿಬ್ಬಂದಿ ವರ್ಗಕ್ಕೆ ಕಂಪ್ಯೂಟರ್ ತರಬೇತಿ, ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠಕ್ಕೆ ಬೇಕಾದ ಸಿದ್ಧತೆ, ಬಿಸಿಯೂಟ ಯೋಜನೆಯ ಸಮರ್ಪಕ ಜಾರಿ, ಆರ್‌ಟಿಇ ಅನುಷ್ಠಾನ, ವಿದ್ಯಾಗಮ ಅನುಷ್ಠಾನ ಸೇರಿದಂತೆ 17 ಅಧಿಕ ವಿವಿಧ ಯೋಜನೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದೇನೆ. ನಾಗರಾಜ್ ಹಿನ್ನೆಲೆ
ಚಿತ್ರದುರ್ಗ ಜಿಲ್ಲೆಯ ಹೊಳ್ಕೆರೆ ತಾಲೂಕಿನವರಾದ ನಾಗರಾಜ್ ಅವರು ಕುವೆಂಪು ವಿಶ್ವ ವಿದ್ಯಾಲಯದಿಂದ ಎಂ.ಎಸ್ಸಿ ಪದವಿ ಪಡೆದಿದ್ದಾರೆ. 2005ರ ಡಿಸೆಂಬರ್‌ನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕಾಡಸೋಮಪ್ಪನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ವಿಜ್ಞಾನ ಶಿಕ್ಷಕನಾಗಿ ನೇಮಕ ಗೊಂಡು ಸೇವೆ ಆರಂಭಿಸಿದೆ. 8 ವರ್ಷದ ಶಿಕ್ಷಕ ಸೇವೆಯ ನಂತರ ಕೆಲವರ್ಷ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದರು. ಸದ್ಯ, ಬೆಂಗಳೂರು ದಕ್ಷಿಣ ಜಿಲ್ಲೆಯ ದೊಡ್ಡಬಾನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಮುಂದುವರಿಸುತ್ತಿದ್ದಾರೆ. ಕಳೆದ ಮೂರ್‍ನಾಲ್ಕು ವರ್ಷದಿಂದ ಅವರ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಸದ್ಯ 180 ವಿದ್ಯಾರ್ಥಿಗಳಿದ್ದಾರೆ. -ರಾಜುಖಾರ್ವಿ ಕೊಡೇರಿ