Advertisement

ರಾಷ್ಟ್ರೀಯ ಆ್ಯತ್ಲೆಟಿಕ್ಸ್‌: ಹರಿಯಾಣಕ್ಕೆ ಸಮಗ್ರ ಪ್ರಶಸ್ತಿ

08:54 PM Mar 12, 2023 | Team Udayavani |

ಉಡುಪಿ: ಆ್ಯತ್ಲೆಟಿಕ್‌ ಫೆಡರೇಶನ್‌ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಮತ್ತು ಜಿಲ್ಲಾ  ಅಮೆಚೂರ್‌ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಆಶ್ರಯದಲ್ಲಿ ಉಡುಪಿಯಲ್ಲಿ ನಡೆದ 18ನೇ ರಾಷ್ಟ್ರೀಯ ಯೂತ್‌ ಆ್ಯತ್ಲೆಟಿಕ್‌ ಚಾಂಪಿಯನ್‌ ಶಿಪ್‌ನಲ್ಲಿ ಹರಿಯಾಣ ರಾಜ್ಯ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.
ಪುರುಷರ ವಿಭಾಗದಲ್ಲಿ ಉತ್ತರ ಪ್ರದೇಶ ಹಾಗೂ ಮಹಿಳೆಯರ ವಿಭಾಗದಲ್ಲಿ ಹರಿಯಾಣ ಚಾಂಪಿಯನ್‌ಶಿಪ್‌ ಪಡೆದುಕೊಂಡಿದೆ. ಉತ್ತಮ ಆ್ಯತ್ಲೆಟಿಕ್‌ ಪುರುಷರಲ್ಲಿ ಮಹಾರಾಷ್ಟ್ರದ ಸಂದೀಪ್‌ ವಿನೋದ್‌ ಗೊಂಡಾ ಹಾಗೂ ಮಹಿಳೆಯರಲ್ಲಿ ಪಶ್ಚಿಮ ಬಂಗಾಲದ ರಿಝೋನಾ ಮಲಿಕ್‌ ಹೀನಾ ಕೂಟದ ಶ್ರೇಷ್ಠ ಆ್ಯತ್ಲೀಇಟ್‌ ಪ್ರಶಸ್ತಿ ಗೆದ್ದುಕೊಂಡರು.

Advertisement

ರವಿವಾರ ಜರಗಿದ ಸಮಾರೋಪ ಸಮಾರಂಭದಲ್ಲಿ ಶಾಸಕ ಕೆ. ರಘುಪತಿ ಭಟ್‌, ಜಿಲ್ಲಾ  ಧಿಕಾರಿ ಕೂರ್ಮಾ ರಾವ್‌,ಜಿಲ್ಲಾ ಪೊಲೀಸ್‌ ಅಧೀಕ್ಷಕ ಹಾಕೆ ಅಕ್ಷಯ್‌ ಮಚ್ಚೀಂದ್ರ ವಿಜೇತರಿಗೆ ಶುಭ ಹಾರೈಸಿದರು. ಭಾರತೀಯ ಆ್ಯತ್ಲೆಟಿಕ್‌ ಫೆಡರೇಶನ್‌ನ ಸಂಘಟನ ಪ್ರತಿನಿಧಿ ಸತೀಶ್‌ ಉಚ್ಚಿಲ, ಜಿಲ್ಲಾ ಅಸೋಸಿಯೇಶನ್‌ನ ಗೌರವ ಸಲಹೆಗಾರ ಅಶೋಕ್‌ ಅಡ್ಯಂತಾಯ, ಬ್ರಹ್ಮಾವರ ಮದರ್‌ ಪ್ಯಾಲೇಸ್‌ ನಿರ್ದೇಶಕ ಭರತ್‌ ಕುಮಾರ್‌ ಶೆಟ್ಟಿ, ಕರ್ನಾಟಕ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಉಪಾಧ್ಯಕ್ಷ ಎಚ್‌. ಟಿ. ಮಹಾದೇವ, ನಿಟ್ಟೆ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲ ನಿರಂಜನ್‌ ಚಿಪ್ಳೂಂಕರ್‌, ಮಣಿಪಾಲ ಎಚ್‌ಆರ್‌ಪಿ ಗ್ರೂಪ್‌ ಚೇರ್ಮೆನ್‌ ಹರಿಪ್ರಸಾದ್‌ ರೈ, ಜಿಲ್ಲಾ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಕೆಂಪರಾಜ, ಕಾರ್ಯದರ್ಶಿ ರಾಜವೇಲು, ದಿನೇಶ್‌ ಕುಮಾರ್‌, ಕೋಶಾಧಿಕಾರಿ ದೀಪಕ್‌ ರಾಮ್‌ ಬಾಯರಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು. ರಾಮಚಂದ್ರ ಪಾಟ್ಕರ್‌ ಸ್ವಾಗತಿಸಿ, ಚಿತ್ರಪಾಡಿ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು.

ಏಷ್ಯನ್‌ ಚಾಂಪಿಯನ್‌ಶಿಪ್‌ಗೆ 32 ಮಂದಿ ಆಯ್ಕೆ
ಎ.25 ರಿಂದ 30ರ ವರೆಗೆ ಉಜ್ಬೇಕಿಸ್ಥಾನದಲ್ಲಿ ನಡೆಯುವ ಏಷ್ಯನ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸುವ ಅಂಕವನ್ನು ಈ ಕೂಟದ ಮೂಲಕ 32 ಮಂದಿ ಪಡೆದಿದ್ದಾರೆ. ವೈದ್ಯಕೀಯ ವರದಿ ಬಂದ ಅನಂತರ ಇದರ ಅಂತಿಮ ಪಟ್ಟಿಯನ್ನು ಆ್ಯತ್ಲೆಟಿಕ್‌ ಫೆಡರೇಶನ್‌ ಆಫ್ ಇಂಡಿಯಾ ಪ್ರಕಟಿಸಲಿದೆ ಎಂದು ಫೆಡರೇಶನ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next