ಲಕ್ನೋ: ಹಿಂದೂ ಸೇನೆ ಸ್ಥಾಪಿಸಿರುವ ನಾಥೂರಾಂ ಗೋಡ್ಸೆ ಪ್ರತಿಮೆಯನ್ನು ಮಂಗಳವಾರ ಗುಜರಾತ್ ನ ಜಾಮ್ ನಗರದ ಕಾಂಗ್ರೆಸ್ ಅಧ್ಯಕ್ಷ ದಿಗುಭಾ ಜಡೇಜಾ ಮತ್ತು ಅವರ ಆಪ್ತರು ಧ್ವಂಸಗೊಳಿಸಿರುವ ಘಟನೆ ಮಂಗಳವಾರ(ನವೆಂಬರ್ 16) ನಡೆದಿದೆ.
ಇದನ್ನೂ ಓದಿ:ಪುನೀತ್ ದೆಸೆಯಿಂದಾದರೂ ಹಂಸಲೇಖರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ: ಗಣೇಶ್ ಕಾರ್ಣಿಕ್
ಕಾಂಗ್ರೆಸ್ ಮುಖಂಡ ಜಡೇಜಾ ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ತೆರಳಿ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು. ನಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತ್ರಿವರ್ಣ ಧ್ವಜವನ್ನು ಸುತ್ತಿರುವುದಾಗಿ ವರದಿ ವಿವರಿಸಿದೆ.
ಜಾಮ್ ನಗರದಲ್ಲಿ ನಾಥೂರಾಂ ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಹಿಂದೂ ಸೇನೆ ಆಗಸ್ಟ್ ನಲ್ಲಿ ಪ್ರಕಟಿಸಿತ್ತು. ಏತನ್ಮಧ್ಯೆ ಗೋಡ್ಸೆ ಪ್ರತಿಮೆ ಸ್ಥಾಪಿಸಲು ಸ್ಥಳ ನೀಡಲು ಸಾಧ್ಯವಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಹರ್ಯಾಣದ ಅಂಬಾಲಾ ಸೆಂಟ್ರಲ್ ಜೈಲಿನಿಂದ ಮಣ್ಣನ್ನು ತಂದು ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು ಅನಾವರಣ ಮಾಡಲಾಗುವುದು ಎಂದು ಹಿಂದೂ ಮಹಾಸಭಾ ತಿಳಿಸಿದೆ.