Advertisement

Wave of Islamophobia: ಇಸ್ಲಾಮೋಫೋಬಿಯಾ… ನಟ ಶಾ ಹೇಳಿಕೆಗೆ ಭಾರೀ ಆಕ್ಷೇಪ

09:37 AM Sep 05, 2024 | Team Udayavani |

ಹೊಸದಿಲ್ಲಿ: ಕಂದಹಾರ್‌ನಲ್ಲಿ 1999ರಲ್ಲಿ ನಡೆದ ಐಸಿ814 ವಿಮಾನ ಅಪಹರಣದಿಂದ “ಇಸ್ಲಾಂ ವಿರೋಧಿ ಅಲೆ’ ಹೆಚ್ಚಾಗುವ ಆತಂಕವಿತ್ತು ಎಂದು ನಟ ನಾಸಿರುದ್ದೀನ್‌ ಶಾ ಹೇಳಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಏನು ಆಗಿತ್ತು ಎಂಬುದರ ಬಗ್ಗೆ ನನಗೆ ಚೆನ್ನಾಗಿ ಅರಿವು ಇದೆ ಎಂದು ಹೇಳಿದ್ದರು.

Advertisement

ಹಿರಿಯ ನಟನ ಹೇಳಿಕೆ ಬಗ್ಗೆ ಆಕ್ಷೇಪಿಸಿರುವ ಶಿವಸೇನಾ ವಕ್ತಾರ ಕೃಷ್ಣ ಹೆಗ್ಡೆ ವಿಮಾನದಲ್ಲಿದ್ದ 200 ಮಂದಿಯ ಜೀವ ಸುರಕ್ಷತೆಗಿಂತಲೂ ಹೆಚ್ಚು ಅವರಿಗೆ ಇಸ್ಲಾಂ ವಿರೋಧಿ ಅಲೆ ಬಗ್ಗೆ ಚಿಂತೆ ಮಾಡುತ್ತಿದ್ದರು ಎಂದಿದ್ದಾರೆ. ಬಿಜೆಪಿ ನಾಯಕ ಸುಧೀರ್‌ ಮುಂಗಂಟಿವಾರ್‌ ಮಾತನಾಡಿ, “ನಮಗೆ ನಟನ ಹೇಳಿಕೆ ಯಿಂದ ಏನೂ ವ್ಯತ್ಯಾಸವಾಗದು. ಆದರೆ ಸಿನೆಮಾ ಎಂಬುದು ಸತ್ಯವಾದ ಹಾಗೂ ಸ್ಪಷ್ಟವಾದ ಮಾಹಿತಿ ಒದಗಿಸಬೇಕು ಎಂದಿದ್ದಾರೆ.

ಮತಾಂತರಕ್ಕೆ ಒತ್ತಾಯ: ವಿಮಾನದಲ್ಲಿ ಪ್ರಯಾಣಿಕ ರುಪಿನ್‌ ಕತ್ಯಾಲ್‌ ಎಂಬು ವರನ್ನು ಹತ್ಯೆ ಮಾಡಿದ್ದ ಅಪಹರಣಕಾರ ಪ್ರಯಾಣಿಕರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲು ಪ್ರೇರೇಪಿಸಿದ್ದ ಎಂದು ಅವರ ಪತ್ನಿ ಹೇಳಿ ಕೊಂಡಿದ್ದಾರೆ. ಹಿಂದೂ ಧರ್ಮಕ್ಕೆ ಹೋಲಿಕೆ ಇಸ್ಲಾಂ ಒಳ್ಳೆಯದು ಆತ ಮನ ವೊಲಿಕೆ ಮಾಡಿದ್ದ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next