Advertisement

29ನೇ ಬಾರಿಗೆ ಮಂಗಳನಲ್ಲಿಗೆ ಇನ್‌ಜೆನ್ಯೂಟಿ!

10:20 PM May 30, 2022 | Team Udayavani |

ಲಂಡನ್‌: ಅನ್ಯಗ್ರಹಗಳಲ್ಲಿ ನಿರೀಕ್ಷೆಗೂ ಮೀರಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಇನ್‌ಜೆನ್ಯೂಟಿ ಹೆಲಿಕಾಪ್ಟರ್‌, ಈಗ 29ನೇ ಬಾರಿಗೆ ಕೆಂಪುಗ್ರಹದತ್ತ ತೆರಳಲು ಸಿದ್ಧವಾಗಿದೆ. ಮಂಗಳ ಗ್ರಹದ ಮೇಲ್ಮೈ ಮೇಲಿನ ಆಗಸದಲ್ಲಿ ಹಾರುವ ಮುನ್ನ, ಈ ಕ್ವಾಡ್‌ಕಾಪ್ಟರ್‌ ತನ್ನ ದೀರ್ಘಾವಧಿಯ ಮತ್ತು ಅತಿ ವೇಗದ ಸಂಚಾರದ ವಿಡಿಯೋವನ್ನು ಬಹಿರಂಗಪಡಿಸಿದೆ.

Advertisement

ಏ.8ರಂದು ಇನ್‌ಜೆನ್ಯುಟಿ ಹೆಲಿಕಾಪ್ಟರ್‌ ದಾಖಲೆಯ 25ನೇ ಬಾರಿಗೆ ಕೆಂಪುಗ್ರಹದತ್ತ ಪಯಣ ಆರಂಭಿಸಿತ್ತು. ಪ್ರತಿ ಸೆಕೆಂಡಿಗೆ 5.5 ಮೀಟರ್‌ನಷ್ಟು ವೇಗದಲ್ಲಿ ಹಾರಿತ್ತು. ಅಂದು ಗಂಟೆಗೆ 12 ಮೈಲು ವೇಗದಂತೆ ಮಂಗಳನ ಮೇಲ್ಮೆ„ನಿಂದ 33 ಅಡಿ ಎತ್ತರದಲ್ಲಿ ಜಿಗಿದರೆ ಹೇಗಿರುತ್ತದೆ ಎಂಬ ಅನುಭವವನ್ನು ಇನ್‌ಜೆನ್ಯುಟಿ ತನ್ನ ಹಾರಾಟದಲ್ಲಿ ನಮಗೆ ನೀಡಿತು ಎಂದಿದ್ದಾರೆ ಇನ್‌ಜೆನ್ಯುಟಿ ತಂಡದ ನೇತೃತ್ವ ವಹಿಸಿರುವ ಟೆಡ್ಡಿ ಜ್ಯಾನೆಟೋಸ್‌.

ಸುಮಾರು 1 ವರ್ಷ ಕಾಲ ಮಂಗಳನ ಮೇಲ್ಮೈ ನಲ್ಲಿದ್ದ ಈ ಕ್ವಾಡ್‌ಕಾಪ್ಟರ್‌ನ ಕಾರ್ಯಾಚರಣೆಯನ್ನು ನಾಸಾ ಈಗ ಸೆಪ್ಟೆಂಬರ್‌ವರೆಗೂ ವಿಸ್ತರಿಸಿದೆ. ಕೆಂಪು ಗ್ರಹದಲ್ಲಿ ಈಗಾಗಲೇ ಅಧ್ಯಯನ ನಡೆಸುತ್ತಿರುವ ಪರ್ಸೆವೆರೆನ್ಸ್‌ ರೋವರ್‌ಗೆ ಈ ಕ್ವಾಡ್‌ಕಾಪ್ಟರ್‌ ನೆರವಾಗಲಿದೆ. ಮಂಗಳನಲ್ಲಿ ಪ್ರಾಚೀನ ಸೂಕ್ಷ್ಮಾಣುಜೀವಿಗಳೇನಾದರೂ ಇದ್ದವೇ ಎಂಬುದಕ್ಕೆ ಸಾಕ್ಷ್ಯ ಹುಡುಕುವ ಪ್ರಯತ್ನದಲ್ಲೂ ರೋವರ್‌ಗೆ ಈ ಕಾಪ್ಟರ್‌ ಸಾಥ್‌ ನೀಡಲಿದೆ ಎಂದು ನಾಸಾ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next