Advertisement

ನಾಸಾದಿಂದ ಎಲೆಕ್ಟ್ರಿಕ್‌ ವಿಮಾನ ಆವಿಷ್ಕಾರ

09:46 AM Nov 11, 2019 | Hari Prasad |

ವಾಷಿಂಗ್ಟನ್‌: ಬಾಹ್ಯಾಕಾಶ, ವೈಮಾನಿಕ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ನಾಸಾ ಇದೇ ಮೊದಲ ಬಾರಿಗೆ ಜಗತ್ತಿನ ಮೊದಲ ಎಲೆಕ್ಟ್ರಿಕ್‌ ವಿಮಾನವನ್ನು ಆವಿಷ್ಕರಿಸಿ ಪರಿಚಯಿಸಿದೆ. ಎಕ್ಸ್‌ -57 ಮ್ಯಾಕ್ಸ್‌ವೆಲ್‌ ಹೆಸರಿನ ಇದನ್ನು ಕ್ಯಾಲಿಫೋರ್ನಿಯಾದಲ್ಲಿರುವ ವೈಮಾನಿಕ ಲ್ಯಾಬ್‌ನಲ್ಲಿ ತಯಾರಿಸಲಾಗಿದೆ.

Advertisement

ಇಟಲಿ ನಿರ್ಮಿತ ಟೆಕ್ನಾಮ್‌ ಪಿ 2006 ಟಿ ಪ್ರೊಫೆಲ್ಲರ್‌ಗಳಿರುವ ಎರಡು ಎಂಜಿನ್‌ಗಳನ್ನು ಈ ವಿಮಾನಕ್ಕೆ ಅಳವಡಿಸಲಾಗಿದೆ. 2015ರಿಂದ ಈ ವಿಮಾನ ಅಭಿವೃದ್ಧಿ ಮಾಡಲಾಗುತ್ತಿತ್ತು. ಮುಂದೆ ಒಟ್ಟು 14 ಎಲೆಕ್ಟ್ರಿಕ್‌ ಪ್ರೊಫೆಲ್ಲರ್‌ಗಳನ್ನು ಇದಕ್ಕೆ ಅಳವಡಿಸಿದರೆ, ವಿಮಾನ ಹಾರಾಟಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಸದ್ಯ ಈ ಎಲೆಕ್ಟ್ರಿಕ್‌ ವಿಮಾನಕ್ಕೆಂದೇ ವಿಶೇಷ ಲೀಥಿಯಂ ಅಯಾನ್‌ ಬ್ಯಾಟರಿಗಳನ್ನು ಅಳವಡಿಸಲಾಗಿದೆ.

ಸುಮಾರು 160 ಕಿ.ಮೀ. ದೂರಕ್ಕೆ ವಿಮಾನ ಹಾರಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಗರಿಷ್ಠ ಎಂದರೆ ನಾಲ್ಕು ಜನರೇ ಕೂರಬಹುದಾದಷ್ಟು ಸಾಮರ್ಥ್ಯ ಇದಕ್ಕಿದ್ದು, ಏರ್‌ ಟ್ಯಾಕ್ಸಿ ಮಾದರಿಯಲ್ಲಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಸಾಮರ್ಥ್ಯದ ಎಂಜಿನ್‌ ಮತ್ತು ವಿಮಾನ ಹಗುರಗೊಳಿಸಿ ಹೆಚ್ಚು ದೂರ ಸಾಗುವಂತೆ ಮಾಡುವ ಉದ್ದೇಶ ಸಂಶೋಧಕರದ್ದಾಗಿದೆ.

2020ರ ವೇಳೆಗೆ ಇದರ ಮೊದಲ ಹಾರಾಟ ಪರೀಕ್ಷೆಗೆ ಉದ್ದೇಶಿಸಲಾಗಿದೆ. ಸದ್ಯ ಇದರ ಸಿಮ್ಯುಲೇಟರ್‌ಗಳನ್ನು (ಹಾರಾಟ ಅನುಭವ ಪಡೆದುಕೊಳ್ಳುವ ಕೃತಕ ವ್ಯವಸ್ಥೆ) ತಯಾರಿಸಲಾಗಿದ್ದು ಪೈಲಟ್‌ಗಳು ಅದರ ಅನುಭವ ಪಡೆದುಕೊಳ್ಳಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next