Advertisement

ಮಂಗಳಕ್ಕೆ ವಿಜ್ಞಾನಿಗಳ 30 ದಿನಗಳ ಟ್ರಿಪ್‌! ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ವಿಶಿಷ್ಟ ಸಾಹಸ

05:33 PM May 26, 2022 | Team Udayavani |

ನವದೆಹಲಿ: ಮಂಗಳ ಮತ್ತು ಚಂದ್ರ ಗ್ರಹಕ್ಕೆ ಖಗೋಳ- ಭೌತ ಶಾಸ್ತ್ರಜ್ಞರನ್ನು 30 ದಿನಗಳ ಕಾಲ ಅಧ್ಯಯನಕ್ಕೆ ಕಳುಹಿಸಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ತೀರ್ಮಾನಿಸಿದೆ.

Advertisement

2030ನೇ ದಶಕದ ಅಂತ್ಯ ಅಥವಾ 2040ರ ಆರಂಭಿಕ ವರ್ಷಗಳಲ್ಲಿ ಈ ಸಾಹಸ ಮಾಡಲಿದೆ. ಇದಕ್ಕೆ ಸಂಬಂಧಪಟ್ಟಂತೆ ಮೇ 31ರವರೆಗೆ ಯಾವುದೇ ರೀತಿಯ ತಜ್ಞರು ನಾಸಾಕ್ಕೆ ಸಲಹೆ ನೀಡಬಹುದು. ನಾಸಾ ಒಟ್ಟು ನಾಲ್ಕು ವಿಭಾಗಗಳಲ್ಲಿ 50 ಅಂಶಗಳನ್ನು ಪಟ್ಟಿ ಮಾಡಿದೆ.

ಆ ಪ್ರಕಾರ ಈ ಯಾನಕ್ಕೆ ಸಲಹೆ-ಸಹಕಾರ ನೀಡಬಹುದು. ಇದರಲ್ಲಿ ಸಾಗಣೆ ಮತ್ತು ವಾಸ್ತವ್ಯ, ಚಂದ್ರ ಮತ್ತು ಮಂಗಳನಿಗೆ ಸಂಬಂಧಿಸಿದ ಮೂಲಸೌಕರ್ಯ, ಕಾರ್ಯಾಚರಣೆ, ವಿಜ್ಞಾನಗಳು ಇದರಲ್ಲಿ ಸೇರಿವೆ.

ಏನಿದು ಯೋಜನೆ?: ನಾಸಾ ಒಂದು ಬೃಹತ್‌ ಬಾಹ್ಯಾಕಾಶ ನೌಕೆಯ ಮೂಲಕ ಮಂಗಳನಲ್ಲಿಗೆ 6 ಮಂದಿ ವಿಜ್ಞಾನಿಗಳನ್ನು ಕಳುಹಿಸಲಿದೆ.

ಅದರಲ್ಲಿ ಇಬ್ಬರು ಚಂದ್ರ ಗ್ರಹದಲ್ಲಿ ಇಳಿದುಕೊಳ್ಳಲಿದ್ದಾರೆ. ಉಳಿದ ನಾಲ್ವರು ಮಂಗಳನಲ್ಲಿಗೆ ತಲುಪಲಿದ್ದಾರೆ. ಎಲ್ಲ ರೀತಿಯಲ್ಲೂ ಅನುಕೂಲವಿರುವಂತೆ ಈ ಬಾಹ್ಯಾಕಾಶ ನೌಕೆಯನ್ನು ಸಿದ್ಧಪಡಿಸಲಾಗಿರುತ್ತದೆ. ಭೂಮಿಯಿಂದ ಮಂಗಳನಲ್ಲಿಗೆ ತಲುಪಿ ಹಿಂತಿರುಗಿಬರಲು ಒಟ್ಟು 500 ದಿನಗಳ ಅಗತ್ಯವಿದೆ.ಈ ಇಷ್ಟೂ ಪ್ರಕ್ರಿಯೆಗಳಲ್ಲಿ ಈ ಎರಡು ಗ್ರಹಗಳನ್ನು ಅಧ್ಯಯನಕ್ಕೊಳಪಡಿಸುವುದು ನಾಸಾದ ಉದ್ದೇಶ.

Advertisement
Advertisement

Udayavani is now on Telegram. Click here to join our channel and stay updated with the latest news.

Next