Advertisement

ಜೇಮ್ಸ್‌ ತೆಗೆದ ಚಿತ್ರ ಪ್ರಕಟಿಸುತ್ತದೆ ನಾಸಾ! ಬ್ರಹ್ಮಾಂಡದ ಸೌಂದರ್ಯ ನಾಳೆ ಅನಾವರಣ

12:20 AM Jul 11, 2022 | Team Udayavani |

ವಾಷಿಂಗ್ಟನ್‌: ಕಳೆದ ವರ್ಷ, ಡಿ.25ರಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ), ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಅನ್ನು ಬಿಡುಗಡೆ ಮಾಡಿದ್ದು ನಿಮಗೆ ಗೊತ್ತೇ ಇದೆ. ಅದು ಅತ್ಯಂತ ದೂರದವರೆಗೆ ತಲುಪಬಲ್ಲ ಅತ್ಯಂತ ಸೂಕ್ಷ್ಮ ದೂರದರ್ಶಕ! ಆ ಟೆಲಿಸ್ಕೋಪ್‌ನ ಮೂಲಕ ತೆಗೆದ ಈ ಬ್ರಹ್ಮಾಂಡದ ನಮ್ಮ ಸೌರಮಂಡಲದ ಆಚೆಗಿನ ಗ್ರಹಗಳ ಚಿತ್ರಗಳನ್ನು ಜೂ. 12ರಂದು ಬಿಡುಗಡೆ ಮಾಡುವುದಾಗಿ ನಾಸಾ ತಿಳಿಸಿದೆ.

Advertisement

ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಬಳೆಯ ಆರಂಭಿಕ ಹಂತದಲ್ಲಿ ನಾಸಾ, 5 ಆಕಾಶಕಾಯಗಳತ್ತ ತನ್ನ ಗಮನ ಕೇಂದ್ರೀಕರಿಸಿದೆ. ನಾವಿರುವ ಸೌರವ್ಯೂಹದ ಹೊರಗಿರುವ, ಭೂಮಿಯಿಂದ 1,100 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಒಂದು ಗ್ರಹದ ಚಿತ್ರವನ್ನು ಈ ಟೆಲಿಸ್ಕೋಪ್‌ನಿಂದ ಚಿತ್ರಿಸಲಾಗಿದೆ.

ಇದಲ್ಲದೆ, 290 ಮಿಲಿಯನ್‌ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರಮಂಡಲವೊಂದನ್ನು ಈ ಟೆಲಿಸ್ಕೋಪ್‌ ಮೂಲಕ ಸೆರೆಹಿಡಿಯಲಾಗಿದೆ. ಇದು 1877ರಲ್ಲಿ ಪತ್ತೆಯಾಗಿತ್ತು. ಇದಕ್ಕೆ ಸ್ಟೀಫ‌ನ್‌ ಕ್ವಿಂಟೆಟ್‌ ಎಂಬ ಹೆಸರಿದೆ. ಇವೆರಡು ಸೇರಿದಂತೆ ಇನ್ನೂ ಕೆಲವು ಗ್ರಹಗಳು, ನಕ್ಷತ್ರಪುಂಜಗಳು, ಹಲವಾರು ಸೌರಮಂಡಲಗಳನ್ನು ಒಳಗೊಂಡ ಕ್ಷೀರಪಥಗಳ ಅದ್ಭುತ ಚಿತ್ರಗಳು ನಮಗೆ ಸಿಗಲಿವೆ.

ಭಾರತದಿಂದಲೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ!
ಭಾರತದಿಂದ ಇಂಟರ್ನೆಂಟ್‌ ಮೂಲಕ ಈ ಚಿತ್ರಗಳ ಬಿಡುಗಡೆ ಕಾರ್ಯಕ್ರಮವನ್ನು ಲೈವ್‌ ಸ್ಟ್ರೀಮಿಂಗ್‌ ಮೂಲಕ ನೋಡಬಹುದು. ಇದಕ್ಕಾಗಿ, ನಾಸಾ ನೀಡಿರುವ https://www.nasa.gov/nasalive ಲಿಂಕ್‌ ಕ್ಲಿಕ್‌ ಮಾಡಬಹುದು. ಜು. 12ರ ಬೆಳಗ್ಗೆ 9:45ಕ್ಕೆ ಫೋಟೋಗಳ ಅನಾವರಣ ಕಾರ್ಯಕ್ರಮ ಶುರುವಾಗಲಿದೆ. 10:30ಕ್ಕೆ ಗ್ರಹಗಳ ಕಲರ್‌ ಫೋಟೋಗಳು ಬಿಡುಗಡೆಯಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ನಾಸಾ ವಕ್ತಾರರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುವ ಪತ್ರಿಕಾಗೋಷ್ಠಿ ಪ್ರಸಾರವಾಗಲಿದೆ. ಮಧ್ಯಾಹ್ನ 3:30ಕ್ಕೆ ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ನ ಬಗ್ಗೆ ವಿವರಣೆಯುಳ್ಳ ಸಂವಾದ ನಡೆಯಲಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next