Advertisement

ಸೋಫಿಯಾದಿಂದ ಅದ್ಭುತ ಚಿತ್ರಗಳು ರವಾನೆ; ಫೋಟೋಗಳನ್ನು ಹಂಚಿಕೊಂಡ ನಾಸಾ

08:52 AM Oct 01, 2022 | Team Udayavani |

ವಾಷಿಂಗ್ಟನ್‌: ನಾಸಾದ “ಹಾರಾಡುತ್ತಿರುವ ದೂರದರ್ಶಕ’ ಎಂಬ ಖ್ಯಾತಿಗೆ ಪಾತ್ರವಾಗಿರುವ ಸೋಫಿಯಾ (ಸ್ಟ್ರಾಟೋಸೆ#ರಿಕ್‌ ಆಬ್ಸರ್ವೇಟರಿ ಫಾರ್‌ ಇನ್‌ಫ್ರಾರೆಡ್‌ ಆ್ಯಸ್ಟ್ರಾನಮಿ) ಸೆರೆಹಿಡಿದಿರುವಂಥ ಬ್ರಹ್ಮಾಂಡದ ಕೆಲವು ಚಿತ್ರಗಳನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ಶುಕ್ರವಾರ ಬಿಡುಗಡೆ ಮಾಡಿದೆ.

Advertisement

2010ರಲ್ಲಿ ಬಾಹ್ಯಾಕಾಶಕ್ಕೆ ನೆಗೆದಿದ್ದ ಸೋಫಿಯಾ ದೂರದರ್ಶಕವು ಈವರೆಗೆ ಬೆರಗುಗೊಳಿಸುವಂಥ ಹಲವು ಆಕಾಶಕಾಯಗಳ ಚಿತ್ರಗಳನ್ನು ಭೂಮಿಗೆ ರವಾನಿಸಿದೆ.

2020ರಲ್ಲಿ ಇದು ಚಂದ್ರನ ಅಂಗಳದಲ್ಲಿ ನೀರಿನಂಶವಿದೆ ಎಂಬುದನ್ನು ಪತ್ತೆಹಚ್ಚಲೂ ನೆರವಾಗಿತ್ತು. ನಂತರದಲ್ಲಿ ಬ್ರಹ್ಮಾಂಡದಲ್ಲಿರುವ ಹಲವು ವೈಚಿತ್ರ್ಯಗಳು, ವಿಸ್ಮಯಕಾರಿ ದೃಶ್ಯಗಳನ್ನು ವಿಜ್ಞಾನಿಗಳಿಗೆ ಕಳುಹಿಸುತ್ತಲೇ ಇದೆ. ಆ ಪೈಕಿ ಒಂದೆರಡು ಫೋಟೋಗಳನ್ನು ನಾಸಾ ಶುಕ್ರವಾರ ಹಂಚಿಕೊಂಡಿದೆ.

ಇನ್ನೊಂದೆಡೆ, ಇತ್ತೀಚೆಗೆ ನಾಸಾದ ಡಾರ್ಟ್‌ ಬಾಹ್ಯಾಕಾಶ ನೌಕೆಯು ಕ್ಷುದ್ರಗ್ರಹವೊಂದಕ್ಕೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದ ಕ್ಷಣದ ಫೋಟೋಗಳನ್ನು ಜೇಮ್ಸ್‌ ವೆಬ್‌ ದೂರದರ್ಶಕ ಮತ್ತು ಹಬಲ್‌ ಸ್ಪೇಸ್‌ ಟೆಲಿಸ್ಕೋಪ್‌ ಸೆರೆಹಿಡಿದಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next