Advertisement
ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಬೆಳಗ್ಗೆ 11:51ಕ್ಕೆ ಉಡಾವಣೆ ಮಾಡಲಾಯಿತು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ , ನಾಸಾ ಅದನ್ನು ಅಭಿವೃದ್ಧಿಪಡಿಸಿದೆ. ಭೂಮಿಯಿಂದ ಲಕ್ಷಾನುಲಕ್ಷ ಕಿ.ಮೀ. ದೂರದಲ್ಲಿರುವ “ಡಿಮಾರ್ಫಸ್’ ಎಂಬ ಕ್ಷುದ್ರಗ್ರಹವನ್ನು ನಾಶ ಮಾಡುವ ಉದ್ದೇಶದಿಂದ ಈ ಕ್ಷಿಪಣಿ ಮಾದರಿಯ ಅಸ್ತ್ರ ಪ್ರಯೋಗ ಮಾಡಲಾಗಿದೆ.
Related Articles
ಈ ಕ್ಷಿಪಣಿಯು 160 ಮೀಟರ್‌ನಷ್ಟು ವ್ಯಾಸವಿರುವ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದು ಅದನ್ನು ನಾಶಪಡಿಸಲಿದೆ. ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಭೀತಿ ಆವರಿಸಿತ್ತು. ಆದರೆ, ಕ್ರಮೇಣ ಅದು ಭೂಮಿಗೆ ಅಪ್ಪಳಿಸುವುದಿಲ್ಲ ಎಂಬುದು ಖಾತ್ರಿಯಾಯಿತಾದರೂ ಭವಿಷ್ಯದಲ್ಲಿ ಇಂಥ ಕ್ಷುದ್ರಗ್ರಹಗಳ ಅಪಾಯವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ತಂತ್ರಜ್ಞಾನದ ಕಾರ್ಯವೈಖರಿಯನ್ನು ಮನಗಾಣಲು ಈ ಕ್ಷಿಪಣಿಯನ್ನು ಹಾರಿಬಿಡಲಾಗಿದೆ.
Advertisement
ಬಾಹ್ಯಾಕಾಶದಲ್ಲಿ ಇದು ಸೆಕೆಂಡಿಗೆ 6.6 ಕಿ.ಮೀ. ಅಥವಾ ಗಂಟೆಗೆ 24,000 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದು ಸದ್ಯದಲ್ಲೇ “ಡಿಮಾರ್ಫಸ್’ಗೆ ಅಪ್ಪಳಿಸಲಿದೆ. 2022ರ ಸೆ. 26ರಿಂದ ಅ. 1ರ ಅವಧಿಯಲ್ಲಿ ಈ ಢಿಕ್ಕಿ ಸಂಭವಿಸುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.