Advertisement

ಚಂದ್ರನಲ್ಲಿ ಮೊದಲ ಮಹಿಳೆ ಇಳಿಸಲು ನಾಸಾ ಸಿದ್ಧತೆ

01:08 AM Sep 23, 2020 | mahesh |

ವಾಷಿಂಗ್ಟನ್‌: 2024ಕ್ಕೆ ಮಾನವ ಸಹಿತ ಚಂದ್ರಯಾನದ ಗುರಿ ಹಾಕಿಕೊಂಡಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಚಂದ್ರನ ಅಂಗಳದಲ್ಲಿ ಮೊದಲ ಮಹಿಳೆಯನ್ನು ಇಳಿಸಲು ಸಿದ್ಧವಾಗುತ್ತಿದೆ. ಈ ಐತಿಹಾಸಿಕ ಯೋಜನೆಗಾಗಿ ಸಿದ್ಧವಾಗುತ್ತಿರುವ ಲ್ಯಾಂಡರ್‌ನಲ್ಲಿ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷ ಗಗನಯಾತ್ರಿಗಳು ಇರಲಿದ್ದಾರಂತೆ.

Advertisement

ಈ ಮಾನವಸಹಿತ ಚಂದ್ರಯಾನ ಯೋಜನೆಗೆ ಒಟ್ಟು 28 ಶತಕೋಟಿ ಅಮೆರಿಕನ್‌ ಡಾಲರ್‌ ಖರ್ಚಾಗಲಿದ್ದು, ಕೇವಲ ಲ್ಯಾಂಡರ್‌ ಮಾದರಿಗೆ 16 ಶತಕೋಟಿ ಡಾಲರ್‌ ವ್ಯಯಿಸ ಲಾಗುತ್ತದಂತೆ.

ಚಂದ್ರನ ಮೇಲೆ ಮೊದಲ ಮಾನವನನ್ನು ಇಳಿಸಿದ ಗರಿಮೆ ಅಮೆರಿ ಕಕ್ಕಿದೆ. ಆದರೆ, ಈ ಬಾರಿ ಮೂನ್‌ ಮಿಷನ್‌ ಹಿಂದಿನ ಬಾರಿ ಯಂತೆ ಚಂದ್ರನ ಸಮಭಾಜಕದಲ್ಲಿ ಇಳಿಯುವುದಿಲ್ಲ, ಬದಲಾಗಿ ದಕ್ಷಿಣ ತುದಿಯಲ್ಲಿ ಇಳಿಯಲಿದೆ ಎಂದು ನಾಸಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಮ್‌ ಬ್ರಿಡೆನ್‌ಸ್ಟೈನ್‌ ಹೇಳುತ್ತಾರೆ.

ಚಂದ್ರನ ಅಂಗಳದಲ್ಲಿ ಇಳಿಯಲಿರುವ ಮೊದಲ ಮಹಿಳೆ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ. ಜೆಫ್ ಬೆಜೋಸ್‌ರ ಬ್ಲೂ ಒರಿಜಿನ್‌, ಎಲಾನ್‌ ಮಸ್ಕ್ರ ಸ್ಪೇಸ್‌ ಎಕ್ಸ್‌ನಂಥ ಖಾಸಗಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಾಸಾ ಈ ಯೋಜನೆಗೆ ಸಿದ್ಧತೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next