Advertisement
ಈಗಾಗಲೇ ಏಷ್ಯಾದ ಎರಡು ಬಲಿಷ್ಟ ದೇಶಗಳ ನಾಯಕರ ಮುಖಾಮುಖಿಗೆ ವೇದಿಕೆ ಸಿದ್ಧಗೊಂಡಿದೆ. ದ್ವಿಪಕ್ಷೀಯ ಬಾಂಧವ್ಯಗಳನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಎರಡೂ ದೇಶಗಳ ಅಧಿಕಾರಿಗಳ ನಿಯೋಗದ ಸಭೆಯೂ ಇಲ್ಲಿ ನಡೆಯಲಿದೆ.
Related Articles
Advertisement
– ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಕಲಾವಿದರೊಂದಿಗೆ ಗ್ರೂಪ್ ಫೊಟೋಗೆ ಪೋಸ್ ನೀಡಿದ ಉಭಯ ನಾಯಕರು.
– ಉಭಯ ನಾಯಕರು ಕಲಾಕ್ಷೇತ್ರ ಫೌಂಡೇಶನ್ ನ ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮವನ್ನು ಆಸ್ವಾದಿಸುತ್ತಿದ್ದಾರೆ.
– ಮಹಾಬಲಿಪುರಂನ ಸಮುದ್ರ ತೀರದಲ್ಲಿರುವ ದೇವಾಲಯದ ಸುಂದರ ಪರಿಸರದಲ್ಲಿ ಮೋದಿ ಮತ್ತು ಝಿನ್ ಪಿಂಗ್ ಮಾತುಕತೆ.
Tamil Nadu: Prime Minister Narendra Modi and Chinese President Xi Jinping at the Shore Temple in Mahabalipuram. pic.twitter.com/uEh2oxEuNk
– ಮಹಾಬಲಿಪುರಂನಲ್ಲಿರುವ ಈ ಸ್ಮಾರಕಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿದೆ. ಕೋರಮಂಡಲ ಸಮುದ್ರ ತೀರ ಪ್ರದೇಶದಲ್ಲಿರುವ ಈ ದೇವಾಲಯಗಳ ಸಮೂಹವನ್ನು ಪಲ್ಲವ ರಾಜವಂಶಸ್ಥರು 7 ಮತ್ತು 8ನೇ ಶತಮಾನದಲ್ಲಿ ನೈಸರ್ಗಿಕ ಬಂಡೆಗಳನ್ನು ಕೊರೆದು ಕಟ್ಟಿಸಿರುವ ಇತಿಹಾಸವಿದೆ.
#WATCH The group of Monuments in Mahabalipuram, a UNESCO World Heritage site. This group of sanctuaries, founded by the Pallava kings, was carved out of rock along the Coromandel coast in the 7th and 8th centuries. #TamilNadu pic.twitter.com/hFCFnzMDcL
– ಮೋದಿ ಮತ್ತು ಝಿನ್ ಪಿಂಗ್ ಅವರು ಇಂದು ಮೂರು ಗಂಟೆಗಳನ್ನು ಜೊತೆಯಾಗಿ ಕಳೆಯಲಿದ್ದು ಒಟ್ಟಾರೆ ಈ ಉಭಯ ನಾಯಕರ ಎರಡು ದಿನಗಳ ಭೇಟಿಯಲ್ಲಿ ಇವರಿಬ್ಬರು ಆರು ಗಂಟೆಗಳನ್ನು ಜೊತೆಯಲ್ಲಿ ಕಳೆಯಲಿದ್ದಾರೆ. – ವಿದೇಶಾಂಗ ವ್ಯವಹಾರಗಳ ಸಚಿವ ಜೈ ಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಮಹಾಬಲಿಪುರಂ ದೇವಸ್ಥಾನದ ಆವರಣದಲ್ಲಿ ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿದರು.
– ಸುತ್ತಾಟದ ಬಳಿಕ ಪಂಚ ರಥಗಳ ಬಳಿ ಉಭಯ ನಾಯಕರು ಕುಳಿತು ಮಾತುಕತೆಯನ್ನು ನಡೆಸಿದರು.ಈ ಸಂದರ್ಭದಲ್ಲಿ ಮೋದಿ ಮತ್ತು ಚೀನಾ ಅಧ್ಯಕ್ಷರು ಸೀಯಾಳ ನೀರಿನ ರುಚಿ ಸವಿದದ್ದು ವಿಶೇಷವಾಗಿತ್ತು.
Tamil Nadu: Prime Minister Narendra Modi with Chinese President Xi Jinping at Panch Rathas in Mahabalipuram. pic.twitter.com/z3WvL89PLx
– ಮಹಾಬಲಿಪುರಂನಲ್ಲಿರುವ ಯುನೆಸ್ಕೋ ವಿಶ್ವಪಾರಂಪರಿಕ ತಾಣವಾಗಿರುವ ಗುಹಾ ದೇವಾಲಯದ ಆವರಣದಲ್ಲಿ ಪ್ರಧಾನಿ ಮೋದಿ ಮತ್ತು ಝಿನ್ ಪಿಂಗ್ ಅವರು ಉಭಯಕುಶಲೋಪರಿ ನಡೆಸಿದರು.
– ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷರನ್ನು ಮಹಾಬಲಿಪುರಂಗೆ ಆತ್ಮೀಯವಾಗಿ ಸ್ವಾಗತಿಸಿದರು. – ಚೀನಾ ಅಧ್ಯಕ್ಷರ ಜೊತೆ 100 ಜನ ಸದಸ್ಯರ ನಿಯೋಗ ಆಗಮಿಸಿದ್ದು ಈ ನಿಯೋಗದಲ್ಲಿ ಚೀನಾದ ವಿದೇಶಾಂಗ ಸಚಿವರು ಮತ್ತು ಸ್ಟೇಟ್ ಕೌನ್ಸಿಲರ್ ಸಹ ಇದ್ದಾರೆ. ಈ ನಿಯೋಗವು ಪ್ರಧಾನಿ ಮೋದಿ ಅವರ ಜೊತೆ ಎರಡು ದಿನಗಳ ಕಾಲ ಅನೌಪಚಾರಿಕ ಮಾತುಕತೆಯನ್ನು ನಡೆಸಲಿದೆ. – ಈ ಇಬ್ಬರು ನಾಯಕರು ಇದಕ್ಕೂ ಮೊದಲು 2018ರ ಎಪ್ರಿಲ್ 27 ಮತ್ತು 28ರಂದು ಚೀನಾದ ವುಹಾನ್ ನಲ್ಲಿ ಮೊದಲನೇ ಅನೌಪಚಾರಿಕ ಭೇಟಿ ನಡೆದಿತ್ತು.