Advertisement

ತಮಿಳು ಅಲ್ಪಸಂಖ್ಯಾಕರಿಗೆ ಅಧಿಕಾರ ಹಂಚಿಕೆ ಮೂಲಕ ಸಮಾನತೆ ಕಲ್ಪಿಸಲು ಮೋದಿ ಆಗ್ರಹ

11:39 PM Sep 26, 2020 | sudhir |

ಹೊಸದಿಲ್ಲಿ: ಶ್ರೀಲಂಕಾದ ತಮಿಳು ಅಲ್ಪಸಂಖ್ಯಾಕರಿಗೆ ಅಧಿಕಾರ ಹಂಚಿಕೆ ಮೂಲಕ ಸಮಾನತೆ ಕಲ್ಪಿಸಬೇಕು ಎಂದು ಲಂಕಾ ತಮಿಳರ ಪರ ಪ್ರಧಾನಿ ನರೇಂದ್ರ ಮೋದಿ ಧ್ವನಿಯೆತ್ತಿದ್ದಾರೆ. ಶಾಂತಿ ಮತ್ತು ಸಾಮರಸ್ಯದ ಮೂಲಕ ತಮಿಳರ ಸಮಾ ನತೆ, ನ್ಯಾಯ ಮತ್ತು ಘನತೆಯ ನಿರೀಕ್ಷೆಗಳನ್ನು ಸಾಕಾರ ಗೊಳಿಸಲು ಅಧಿಕಾರ ಹಂಚಿಕೆ ಅವಕಾಶ ಮಾಡಿಕೊಡುತ್ತದೆ ಎಂದು ಅಭಿ ಪ್ರಾಯಪಟ್ಟಿದ್ದಾರೆ.

Advertisement

ಮೋದಿ ಮತ್ತು ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಶನಿವಾರ ನಡೆಸಿದ ದ್ವಿಪಕ್ಷೀಯ ವರ್ಚು ವಲ್‌ ಶೃಂಗ ದಲ್ಲಿ ಪ್ರಧಾನಿ, ಅಧಿಕಾರ ಹಂಚಿಕೆಯ ಪ್ರಸ್ತಾಪ ಎತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಸಂಬಂಧ ಸಂವಿಧಾನದ 13ನೇ ತಿದ್ದುಪಡಿ ಯನ್ನು ಶ್ರೀಲಂಕಾ ಸಂಪೂರ್ಣ ವಾಗಿ ಅನುಷ್ಠಾನ ಗೊಳಿಬೇಕು ಎಂದೂ ಆಗ್ರಹಿಸಿದ್ದಾರೆ.

ಏನಿದು ಅಧಿಕಾರ ಹಂಚಿಕೆ?
ದ್ವೀಪ ರಾಷ್ಟ್ರದಲ್ಲಿ ಸಂವಿಧಾನದ 13ನೇ ತಿದ್ದುಪಡಿ ತಮಿಳು ಸಮುದಾಯಕ್ಕೆ ಅಧಿಕಾರ ಹಂಚಿಕೆಗೆ ಅವಕಾಶ ಮಾಡಿಕೊಟ್ಟು, ವಿವಿಧ ರಂಗಗಳಲ್ಲಿ ಸಮಾನತೆ ಕಲ್ಪಿಸಲು ನೆರವಾ ಗಲಿದೆ. 1987ರ ಇಂಡೋ- ಶ್ರೀಲಂಕಾ ಒಪ್ಪಂದ ಅನಂತರ ಭಾರತ ಈ ಸಂಗತಿಯನ್ನು ಹಲವು ಬಾರಿ ಪ್ರಸಾವಿಸಿತ್ತು. ಪ್ರಸ್ತುತ ಪ್ರಧಾನಿ ಪುನಃ ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ.

ಉಭಯ ನಾಯಕರು ರಕ್ಷಣೆ ಮತ್ತು ಭದ್ರತಾ ಒಪ್ಪಂದಗಳಲ್ಲದೆ, ವ್ಯಾಪಾರ ಮತ್ತು ಹೂಡಿಕೆ ಸಹಕಾರ ಕುರಿ ತಾಗಿಯೂ ಆಳವಾಗಿ ಚರ್ಚಿಸಿದ್ದಾರೆ. ಮೀನುಗಾರರ ಕುರಿತಾಗಿ ಮಾನವೀಯ ಮತ್ತು ರಚನಾತ್ಮಕ ನೀತಿಗಳ ಜಾರಿ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ.

ಲಂಕಾಕ್ಕೆ 110 ಕೋಟಿ ರೂ. ಅನುದಾನ
ಶ್ರೀಲಂಕಾದಲ್ಲಿ ಬೌದ್ಧ ಸಂಸ್ಕೃತಿಯನ್ನು ಇನ್ನಷ್ಟು ಪ್ರೋತ್ಸಾಹಿಸಲು ಭಾರತ ನಿರ್ಧರಿಸಿದೆ. ದ್ವಿಪಕ್ಷೀಯ ಶೃಂಗದಲ್ಲಿ ಪ್ರಧಾನಿ ಮೋದಿ, ಲಂಕಾದಲ್ಲಿ ಬೌದ್ಧ ಸಂಸ್ಕೃತಿಯ ಉತ್ತೇಜನಕ್ಕೆ 110 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಬೌದ್ಧ ಮಂದಿರಗಳ ನವೀಕರಣ, ಬುದ್ಧಿಸಂ ಮತ್ತು ಬೌದ್ಧ ಪ್ರಚಾರಕರ ಮೂಲಕ ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯವನ್ನು ಪ್ರೋತ್ಸಾಹಿಸಲು ಈ ನಿಧಿ ಬಳಕೆಯಾಗಲಿದೆ. ಈ ವೇಳೆ ಶ್ರೀಲಂಕಾ, ದ್ವಿಪಕ್ಷೀಯ ಕರೆನ್ಸಿ ವಿನಿಮಯವನ್ನು 81 ಶತಕೋಟಿ ಡಾಲರ್‌ಗೆ ಹೆಚ್ಚಿಸಬೇಕು ಹಾಗೂ ಸಾಲ ಮರುಪಾವತಿ ಕಾಲಮಿತಿ ವಿಸ್ತರಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next