Advertisement
ಈ ವೇಳೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮುಖ್ಯಾಧಿಕಾರಿ ಎಂ.ಎ. ನುರಾಲ್ಲಾಖಾನ ಅವರನ್ನು ತರಾಟೆಗೆ ತಗೆದುಕೊಂಡು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಜನತೆಗೆ ಕುಡಿಯುವ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಮೇಲಿಂದ ಮೇಲೆ ಜಿಲ್ಲಾದಳಿತ ಕಚೇರಿಗೆ ದೂರುಗಳು ಬರುತ್ತಿವೆ. ಈಗಾಗಲೇ ಜಿಲ್ಲಾಡಳಿತದಿಂದ ಕುಡಿಯುವ ನೀರಿನ ಯೋಜನೆಗೆ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಸಮರ್ಪಕವಾಗಿ ಬಳಕೆ ಮಾಡಬೇಕು. ಪಟ್ಟಣದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ನಿರ್ಲಕ್ಷ್ಯಧೋರಣೆ ಸಲ್ಲದು. ಕೂಡಲೇ ಪಟ್ಟಣದಲ್ಲಿರುವ ಖಾಸಗಿ ಕೊಳವೆ ಬಾವಿಗಳ ಮಾಲೀಕರ ಸಭೆ ನಡೆಸಿ, ಅವರಿಂದ ಕೊಳವೆಬಾವಿಗಳನ್ನ ಬೇಸಿಗೆ ಮುಗಿಯುವರೆಗೂ ಇಲಾಖೆಗೆ ಪಡೆದುಕೊಳ್ಳಿ. ಅದಕ್ಕೆ ಅನುದಾನವನ್ನು ನೀಡುವುದಕ್ಕೆ ಜಿಲ್ಲಾಡಳಿತ ಸನ್ನದ್ಧವಾಗಿದೆ. ಅಲ್ಲದೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ವಾರದೊಳಗೆ ಸರಬರಾಜು ನೀರು ಮಾಡುವಂತೆ ಡಿಬಿಟಿಒ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.