Advertisement
ಬೆಳಗಾವಿ: ಕೊರೊನಾ ಎರಡನೇ ಅಲೆ ರೈತ ಸಮುದಾಯ ಹಾಗೂ ಬಡ ಕಾರ್ಮಿಕ ಕುಟುಂಬಗಳ ಮೇಲೆ ಮತ್ತೆ ಕಾರ್ಮೋಡ ಕವಿಯುವಂತೆ ಮಾಡಿದೆ. ಒಂದು ಕಡೆ ಸೋಂಕಿನ ತೀವ್ರತೆ ಮತ್ತೂಂದು ಕಡೆ ಕೈಯಲ್ಲಿದ್ದ ಬೆಳೆದ ಬೆಳೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾರದೆ ಬಹಳ ನಷ್ಟ ಅನುಭವಿಸಿರುವ ಬಡ ವರ್ಗದ ಜನರ ದಿಕ್ಕುತಪ್ಪಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಬಡವರ ಅದರಲ್ಲೂ ರೈತ ಸಮುದಾಯದ ಪಾಲಿಗೆ ಹೊಸ ಆಶಾಕಿರಣವಾಗಿ ಬಂದಿದೆ.
Related Articles
Advertisement
ಇದರಲ್ಲಿ ಮಣ್ಣು-ನೀರು ಸಂರಕ್ಷಣಾ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಲಾಯಿತು. 2020-21ನೇ ಸಾಲಿನಲ್ಲಿ ಕೃಷಿ-ಜಲಾನಯನ ಅಭಿವೃದ್ಧಿ ಇಲಾಖೆ ಮೂಲಕ ಅನುಷ್ಠಾನ ಮಾಡಿದ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ 1186870 ಮಾನವ ದಿನಗಳನ್ನು ಸೃಜನೆ ಮಾಡಿದ ಹೆಗ್ಗಳಿಕೆ ಪಡೆಯಿತು. ಪರಿಣಾಮಕಾರಿಯಾದ ಕೃಷಿಹೊಂಡ: ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 1918 ಕೃಷಿ ಹೊಂಡಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಅದರಂತೆ ಮಾರ್ಚ ಅಂತ್ಯದವರೆಗೆ 848 ಕೃಷಿ ಹೊಂಡಗಳ ಕಾಮಗಾರಿ ಪೂರ್ಣಗೊಂಡಿದ್ದರೆ 398 ಕಾಮಗಾರಿಗಳು ಪ್ರಗತಿಯಲ್ಲಿದ್ದವು.
ಈ ಕಾಮಗಾರಿಗಳಿಗೆ 3543 ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಅದೇ ರೀತಿ 4887 ಬದು ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ಅದರಲ್ಲಿ ಈಗಾಗಲೇ 2450 ಕಾಮಗಾರಿಗಳು ಪೂರ್ಣಗೊಂಡಿವೆ. ಇದಕ್ಕಾಗಿ 1600 ಕ್ಕೂ ಹೆಚ್ಚು ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಅಥಣಿ ತಾಲೂಕಿನಲ್ಲಿ 180, ಬೆಳಗಾವಿಯಲ್ಲಿ 120, ಬೈಲಹೊಂಗಲದಲ್ಲಿ 22, ಚಿಕ್ಕೋಡಿಯಲ್ಲಿ 170, ಗೋಕಾಕದಲ್ಲಿ 140, ಹುಕ್ಕೇರಿಯಲ್ಲಿ 79, ಕಾಗವಾಡದಲ್ಲಿ ಆರು, ಖಾನಾಪುರದಲ್ಲಿ 28, ಕಿತ್ತೂರು ತಾಲೂಕಿನಲ್ಲಿ 32, ಮೂಡಲಗಿಯಲ್ಲಿ 244, ನಿಪ್ಪಾಣಿಯಲ್ಲಿ 32, ರಾಯಬಾಗದಲ್ಲಿ 560 ರಾಮದುರ್ಗ ತಾಲೂಕಿನಲ್ಲಿ 54 ಹಾಗೂ ಸವದತ್ತಿ ತಾಲೂಕಿನಲ್ಲಿ 251 ಕೃಷಿ ಹೊಂಡ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅದೇ ರೀತಿ ಅಥಣಿ ತಾಲೂಕಿನಲ್ಲಿ 831, ಬೆಳಗಾವಿಯಲ್ಲಿ 590, ಬೈಲಹೊಂಗಲದಲ್ಲಿ 992,ಚಿಕ್ಕೋಡಿಯಲ್ಲಿ 110, ಗೋಕಾಕದಲ್ಲಿ 35, ಹುಕ್ಕೇರಿಯಲ್ಲಿ 614, ಕಾಗವಾಡದಲ್ಲಿ ಎಂಟು, ಖಾನಾಪುರದಲ್ಲಿ 32, ಕಿತ್ತೂರು ತಾಲೂಕಿನಲ್ಲಿ 34, ಮೂಡಲಗಿಯಲ್ಲಿ 12, ನಿಪ್ಪಾಣಿಯಲ್ಲಿ 10, ರಾಯಬಾಗದಲ್ಲಿ 370 ರಾಮದುರ್ಗ ತಾಲೂಕಿನಲ್ಲಿ 470 ಹಾಗೂ ಸವದತ್ತಿ ತಾಲೂಕಿನಲ್ಲಿ 779 ಬದು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.
ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಹೊಂಡಗಳು ಹಾಗೂ ಬದು ನಿರ್ಮಾಣ ಯೋಜನೆ ಬಹಳ ಉಪಯೋಗಕಾರಿಯಾಗಿದೆ. ಇದರಲ್ಲಿ ಎಲ್ಲ ರೈತರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಆಗ ಇದರ ನಿರ್ವಹಣೆಯ ಸಮಸ್ಯೆ ಬರಲ್ಲ. ಇದಲ್ಲದೆ ಯೋಜನೆಗೆ ವೆಚ್ಚ ಮಾಡಿದ ಹಣವೂ ಸದುಪಯೋಗವಾಗುತ್ತದೆ ಎಂಬುದು ರೈತ ಮುಖಂಡರ ಅಭಿಪ್ರಾಯ.