Advertisement

ನರೇಗಾದಲ್ಲಿ 1.40 ಕೋಟಿ ಹೆಚ್ಚುವರಿ ಮಾನವ ದಿನ ಸೃಜನೆ: ಈಶ್ವರಪ್ಪ

11:12 PM Dec 30, 2021 | Team Udayavani |

ಬೆಂಗಳೂರು: ನರೇಗಾ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 13 ಕೋಟಿ ಮಾನವ ದಿನಗಳನ್ನು ಪೂರೈಸಿದ್ದು, ರಾಜ್ಯ ಸರಕಾರದ ಮನವಿ ಮೇರೆಗೆ ಕೇಂದ್ರ ಸರಕಾರ 1.40 ಕೋಟಿ ಮಾನವ ದಿನಗಳ ಸೃಜನೆಗೆ ಅವಕಾಶ ಕಲ್ಪಿಸಿದೆ. ಇದರಿಂದ ರಾಜ್ಯಕ್ಕೆ 715 ಕೋಟಿ ರೂ. ಅನುದಾನ ದೊರೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Advertisement

ಇಲಾಖೆಯ ಪ್ರಗತಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಗೆ ಈ ವರ್ಷ 4.45 ಲಕ್ಷ ಉದ್ಯೋಗ ಕಾರ್ಡ್‌ ವಿತರಿಸುವ ಮೂಲಕ 10.68 ಲಕ್ಷ ಜನರು ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ವರ್ಷದಲ್ಲಿ 31.45 ಲಕ್ಷ ಕುಟುಂಬಗಳ 58.96 ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿದ್ದು, ಈಗಾಗಲೇ 46 ಸಾವಿರ ಕುಟುಂಬಗಳು 100 ದಿನಗಳ ಕೂಲಿ ಪೂರ್ಣಗೊಳಿಸಿವೆ. ಈ ವರ್ಷ ಈ ಯೋಜನೆ ಅಡಿಯಲ್ಲಿ 29.15 ಲಕ್ಷ ಮಹಿಳೆಯರು, 4.83 ಲಕ್ಷ ಹಿರಿಯರು, 22 ಸಾವಿರಕ್ಕೂ ಹೆಚ್ಚು ವಿಕಲಚೇತನರಿಗೆ ಉದ್ಯೋಗ ನೀಡಲಾಗಿದೆ ಎಂದರು

ಪ್ರವಾಹ ಪೀಡಿತ 17 ಜಿಲ್ಲೆಗಳ 99 ತಾಲೂಕುಗಳ ಜನರಿಗೆ 150 ದಿನ ಉದ್ಯೋಗ ಕಲ್ಪಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೇಂದ್ರ ಸರಕಾರ ಡಿ. 24ರಂದು 661 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಪ್ರಸ್ತುತ ವರ್ಷ 13.09 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 3.87 ಲಕ್ಷ ಕಾಮಗಾರಿಗಳು ಪೂರ್ಣಗೊಂಡಿವೆ. ಕೂಲಿ ಪಾವತಿಸಲು 3738 ಕೋಟಿ ರೂ. ಹಾಗೂ ಸಾಮಗ್ರಿ ವೆಚ್ಚ ಪಾವತಿಸಲು 1354.30 ಕೋಟಿ ರೂ. ವೆಚ್ಚ ಮಾಡಲಾಗಿದೆ. ಎಂದರು.

ಜಲಶಕ್ತಿ ಅಭಿಯಾನ: ಪ್ರಥಮ ಸ್ಥಾನ:

ಜಲಶಕ್ತಿ ಅಭಿಯಾನದಲ್ಲಿ ರಾಜ್ಯ 4.87 ಲಕ್ಷ ಕಾಮಗಾರಿ ಪೂರ್ಣಗೊಳಿಸುವ ಮೂಲಕ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದೆ. ರಾಮನಗರ, ತುಮಕೂರು, ಬೆಳಗಾವಿ, ಚಿತ್ರದುರ್ಗ, ಕಲುºರ್ಗಿ ಮತ್ತು ಕೊಪ್ಪಳ ಜಲಶಕ್ತಿ ಅಭಿಯಾನದಲ್ಲಿ ಅತೀ ಹೆಚ್ಚು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿವೆ. ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಮಹಿಳಾ ಕಾಯಕೋತ್ಸವ ಹಮ್ಮಿಕೊಳ್ಳಲಾಗಿದೆ. 20 ಸಾವಿರಕ್ಕಿಂತ ಹೆಚ್ಚಿನ ಮಾನವ ದಿನಗಳನ್ನು ಸೃಜನೆ ಮಾಡಿರುವ 2680 ಗ್ರಾಮ ಪಂಚಾಯತಿಗಳಿಗೆ ಮಹಿಳಾ ಗ್ರಾಮ ಕಾಯಕ ಮಿತ್ರರನ್ನು ನೇಮಕ ಮಾಡಲಾಗಿದೆ ಎಂದರು.

Advertisement

ಪಂಚಾಯತಿ ಮಟ್ಟದಲ್ಲಿ ಅರಣ್ಣೀಕರಣ ಹೆಚ್ಚಳ, ರೈತರ ಆದಾಯ ಹೆಚ್ಚಿಸಲು ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ ನೀಡಲಾಗಿದೆ ಎರೆ ಹುಳು ತೊಟ್ಟಿ ನಿರ್ಮಿಸಲು ರೈತ ಬಂಧು ಅಭಿಯಾನ ಆರಂಭಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯತಿಗೆ 25 ಎರೆ ಹುಳು ತೊಟ್ಟಿ ನಿರ್ಮಿಸಲಾಗುವುದು. ನರೇಗಾ ಯೋಜನೆ ಮೂಲಕ ಅಂಗನವಾಡಿ ಕಟ್ಟಡ ನಿರ್ಮಾಣ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ದೇವಸ್ಥಾನ ನಿರ್ವಹಣೆಗೆ ಸಮಿತಿ  :

ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ, ದೇವಸ್ಥಾನದ ಹಣ ಬಳಕೆಗೆ ಭಕ್ತರೇ ಆಯ್ಕೆ ಮಾಡುವ ಸಮಿತಿ ರಚನೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯದ ಹಣ ಇದ್ಧರೂ ಅದನ್ನು ದೇವಾಲಯಕ್ಕೇ ಬಳಸಿಕೊಳ್ಳಲು ಈಗ ಅವಕಾಶ ಇಲ್ಲ. ಆ ಹಣಕ್ಕೆ ಸರ್ಕಾರ ಕೈ ಹಾಕದೆಯೇ ದೇವಸ್ಥಾನದಲ್ಲೇ ಭಕ್ತರೇ ಆಯ್ಕೆ ಮಾಡುವ ಸಮಿತಿ ಮೂಲಕ ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಸಮಿತಿಗೆ ಹೆಚ್ಚು ಅಧಿಕಾರ ಕೊಡುವ ವ್ಯವಸ್ಥೆ ಮಾಡಲಾಗುವುದು. ಆದರೆ, ಸರ್ಕಾರದ ಉಸ್ತುವಾರಿ ಇರುತ್ತದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next