Advertisement

ಆರ್ಥಿಕ ಸಬಲರಾಗಲು ನರೇಗಾ ಪೂರಕ

02:42 PM Jun 07, 2022 | Team Udayavani |

ರಾಮನಗರ: ಸಾರ್ವಜನಿಕರು ನರೇಗಾ ಯೋಜನೆ ಲಾಭ ಪಡೆಯಲು ಗ್ರಾಪಂ ನಡೆಸುವ ವಾಡ್‌ ìಸಭೆ, ಗ್ರಾಮ ಸಭೆಗಳಲ್ಲಿ ಸಂಬಂಧಪಟ್ಟ ಕೆಲಸಗಳ ಕ್ರಿಯಾ ಯೋಜನೆ ಮಾಡಿಸಿ, ನರೇಗಾ ಯೋಜನೆ ಲಾಭ ಪಡೆಯುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಗ್ರಾಪಂ ಮಾರ್ಗದರ್ಶಿ ಅಧಿಕಾರಿ ವೈ.ಬಿ. ಪ್ರಸನ್ನಕುಮಾರ್‌ ತಿಳಿಸಿದರು.

Advertisement

ವಿಭೂತಿಕೆರೆ ಗ್ರಾಪಂ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ವರದಾನವಾಗಿದೆ. ರೈತರ ಜಮೀನಿನ ಕೃಷಿ ಅಭಿವೃದ್ಧಿಗೆ ಪೂರಕವಾಗುವ ಕೃಷಿ ಹೊಂಡ, ಬದು ನಿರ್ಮಾಣ ಸೇರಿದಂತೆ ಹಲವು ಚಟುವಟಿಕೆಗಳಿಗೆ ಕೆರೆಕುಂಟೆ ರಕ್ಷಣೆ, ಜಲಮೂಲ ಅಭಿವೃದ್ಧಿಗೆ ಗ್ರಾಮದ ರಸ್ತೆ, ಚರಂಡಿ ಸೇರಿದಂತೆ ವೈಯಕ್ತಿಕವಾಗಿ ದನದಕೊಟ್ಟಿಗೆ, ಕುರಿ, ಕೋಳಿ, ಮೇಕೆಸೆಡ್‌, ಬದು ನಿರ್ಮಾಣ, ಕೃಷಿಹೊಂಡ ನಿರ್ಮಾಣ ಮಾಡಲು ನರೇಗಾ ಯೋಜನೆಯಲ್ಲಿ ಸೌಲಭ್ಯ ನೀಡುತ್ತದೆ ಎಂದು ಹೇಳಿದರು. ನರೇಗಾ ಯೋಜನೆಯಲ್ಲಿ ಕೈಗೊಳ್ಳಬಹುದಾದ ಕೆಲಸಗಳ ತಮ್ಮ ಬೇಡಿಕೆ ಪಟ್ಟಿ ಗ್ರಾಮಸಭೆಯಲ್ಲಿ ಅನುಮೋದನೆಗೊಳ್ಳಬೇಕು. ಗ್ರಾಪಂ ನಡೆಸುವ ವಾರ್ಡ್‌ ಸಭೆ, ಗ್ರಾಮ ಸಭೆಗಳಲ್ಲಿ ಭಾಗವಹಿಸಿ, ಪಟ್ಟಿಯನ್ನು ಅನುಮೋದನೆಗೊಳಿಸಿ ಕೊಂಡು ಯೋಜನೆ ಲಾಭ ಪಡೆಯುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.

ನರೇಗಾ ಯೋಜನೆ ಅನುಷ್ಠಾನ: ಗ್ರಾಪಂ ಪಿಡಿಒ ಬಿ.ಕೆ.ಗೋಮತಿ ಮಾತನಾಡಿ, ಗ್ರಾಪಂ ಜನಸ್ನೇಹಿ ಯಾಗಿದ್ದು, ನರೇಗಾ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ವೈಯಕ್ತಿಕ ಸಮುದಾಯ ಕಾಮಗಾರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ನರೇಗಾ ಯೋಜನೆಯಲ್ಲಿ ಅಂತರ್ಜಲ ರಕ್ಷಣೆಗೆ ಒತ್ತು ನೀಡಲಾಗಿದೆ. ಕೆರೆ, ಕುಂಟೆ, ಕಾಲುವೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆ ಗ್ರಾಪಂನಿಂದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ಕಾಲಕಾಲಕ್ಕೆ ವಾರ್ಡ್ ಸಭೆ, ಗ್ರಾಮಸಭೆಗಳ ಮೂಲಕ ಜನರಿಗೆ ಮಾಹಿತಿ ತಲುಪಿಸುವ ಕೆಲಸ ಗ್ರಾಪಂ ಮಾಡುತ್ತಿದೆ ಎಂದರು. ‌

ರೇಷ್ಮೆ ಅಧಿಕಾರಿ ಆನಂದ್‌, ಕೃಷಿ ಅಧಿಕಾರಿ ಪ್ರದೀಪ್‌, ತೋಟಗಾರಿಕೆ ಅಧಿಕಾರಿ ಪಿ.ಮಹೇಶ್‌, ಸಾಮಾಜಿಕ ಅರಣ್ಯ ಇಲಾಖೆಯ ಯೋಗೇಶ್‌, ಪಶು ಆಸ್ಪತ್ರೆ ಬನ್ನಿಕುಪ್ಪೆ ಅಧಿಕಾರಿ ಸುನಿತಾ ತಮ್ಮ ಇಲಾಖೆಯಿಂದ ನರೇಗಾ ಯೋಜನೆಯಲ್ಲಿ ಸಿಗುವ ಸೌಲಭ್ಯಗಳನ್ನು ಸಭೆಯಲ್ಲಿ ತಿಳಿಸಿಕೊಟ್ಟರು. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ವಿಭೂತಿಕೆರೆ ಗ್ರಾಮದ ಸ್ಮಶಾನ ಜಾಗಕ್ಕೆರಸ್ತೆ ನಿರ್ಮಾಣ ಮಾಡಬೇಕು. ಶುದ್ಧಕುಡಿಯುವ ನೀರು ಘಟಕ ದುರಸ್ಥಿ ಮಾಡಿಸಬೇಕು. ಬಸವೇಶ್ವರ ದೇವಾ ಲಯ ಹತ್ತಿರ ಹೊಸದಾಗಿ ನಿರ್ಮಾಣ ಗೊಂಡಿರುವ ಜಾನುವಾರು ಕುಡಿಯುವ ನೀರಿನ ತೊಟ್ಟಿಗೆ ನೀರಿನ ಸಂಪರ್ಕಇಲ್ಲ. ನೀರಿನ ವ್ಯವಸ್ಥೆ ಮಾಡಿಸಬೇಕು, ಮಳೆಗಾಲವಾಗಿದ್ದು, ಕೆರೆಗಳಿಗೆ ಬರುವ ನೀರು ಕಾಲುವೆಗಳು ಮುಚ್ಚಿಹೋಗಿವೆ. ಕೂಡಲೇ ಗ್ರಾಪಂ ಕಾಲುವೆಗಳ ಅಭಿವೃದ್ಧಿಪಡಿಸಿ ಕೆರೆಗಳಿಗೆ ನೀರು ಬರುವ ವ್ಯವಸ್ಥೆ ಮಾಡಿಸಿ ಕೆರೆತುಂಬಿಸಲು ಮುಂದಾಗಬೇಕು ಎಂದು ಗ್ರಾಮಸ್ಥರು ಗ್ರಾಪಂ ಅಧಿಕಾರಿಗಳನ್ನು ಒತ್ತಾಯಿಸಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಮಂಗಳಗೌರಮ್ಮ ಗಿರಿಯಪ್ಪ, ಸದಸ್ಯ ಶ್ರೀನಿವಾಸ್‌, ಕಾರ್ಯದರ್ಶಿ ಪದ್ಮಯ್ಯ, ಲೆಕ್ಕಸಹಾಯಕಿ ಅನುರಾಧ, ಬಿಲ್‌ ಕಲೆಕ್ಟರ್‌ ರೇವುಮಲ್ಲೇಶ್‌, ಅಂಗನವಾಡಿ, ಆಶಾ ಕಾರ್ಯಕರ್ತರು, ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next