Advertisement

ಕಾಗಿನಲೆ ಸ್ವಾಮೀಜಿ ಆರ್ಶಿವಾದ ಪಡೆದ ಕೇಂದ್ರ ಸಚಿವ ನಾರಾಯಣಸ್ವಾಮಿ: ಎಸ್ ಟಿ ಮೀಸಲಾತಿ ಚರ್ಚೆ

02:57 PM Aug 19, 2021 | Team Udayavani |

ದಾವಣಗೆರೆ: ಕುರುಬ ಸಮಾಜವನ್ನು ಎಸ್.ಟಿ ಮೀಸಲು ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಹಕರಿಸುವಂತೆ ಕಾಗಿನಲೆ ನಿರಂಜನಾನಂದ‌ ಸ್ವಾಮೀಜಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿಗೆ ಮನವಿ ಮಾಡಿದ್ದಾರೆ.

Advertisement

ಕೇಂದ್ರ ಸಚಿವರಾದ ನಂತರ ಎ ನಾರಾಯಣ ಸ್ವಾಮಿ ಎರಡು ದಿನಗಳ‌ ಕಾಲ ಜನಾರ್ಶಿವಾದ ಯಾತ್ರೆಯನ್ನು ದಾವಣಗೆರೆ ಹಾವೇರಿಯಲ್ಲಿ ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದರು. ಇಂದು ಹಾವೇರಿ ಜಿಲ್ಲೆಗೆ ಹೋಗುವಾಗ ದಾರಿ ಮಧ್ಯೆ ಹರಿಹರ ತಾಲೂಕಿನ ಬೆಳ್ಳೂಡಿ ಕನಕ‌ ಶಾಖಾ‌ ಮಠಕ್ಕೆ ಭೇಟಿ ನೀಡಿ ಕಾಗಿನಲೆ ಪೀಠದ ನಿರಂಜನಾನಂದಪುರಿ ಮಹಾಸ್ವಾಮಿಗಳ ಆರ್ಶಿವಾದ ಪಡೆದರು.

ಈ ಸಂಧರ್ಭದಲ್ಲಿ ಸ್ವಾಮೀಜಿ ಈ ಹಿಂದೆ‌ ರಾಜ್ಯದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ನಾರಾಯಣ ಸ್ವಾಮಿ ಮಠಗಳು ಮತ್ತು ಸಾರ್ವಜನಿಕರಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅದೇ ರೀತಿ ಕೇಂದ್ರ ಸರ್ಕಾರದ ಮಂತ್ರಿಗಳಾಗಿ ಒಳ್ಳೆ ಕೆಲಸ ಮಾಡಿ ಹೆಸರು ಗಳಿಸಿ ಎಂದು ಸ್ವಾಮೀಜಿ ಶುಭ ಹಾರೈಸಿದರು.

ಇದನ್ನೂ ಓದಿ:2859 ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು 478 ಕೋಟಿ ರೂ: ಸಂಪುಟ ಸಭೆ ಅನುಮೋದನೆ

ಇದೇ ವೇಳೆ ಸ್ವಾಮೀಜಿ ಕುರುಬ ಸಮಾಜವನ್ನು ಎಸ್.ಟಿ ಮೀಸಲಾತಿ ಪಟ್ಟಿ ಸೇರಿಸುವ ಸಲುವಾಗಿ ನಿಮ್ಮ ಬಳಿ ನಾವು ಬರುತ್ತೇವೆ. ಆಗ ನೀವು ಕೇಂದ್ರ ಸರ್ಕಾರದ ಮಟ್ಟದಲ್ಲಿ ನಮಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಕೇಂದ್ರ ನಾರಾಯಣಸ್ವಾಮಿ ಕೂಡ ಸಹಮತ ವ್ಯಕ್ತಪಡಿಸಿದರು. ಇದೇ ಅನೇಕ ವಿಷಯಗಳ ಕುರಿತು ಕೇಂದ್ರ ಸಚಿವರು ಸ್ವಾಮೀಜಿಯವರೊಂದಿಗೆ‌ ಚರ್ಚೆ ನಡೆಸಿದರು.

Advertisement

ಈ ಸಂಧರ್ಭದಲ್ಲಿ ಸಂಸದ‌ ಜಿ ಎಂ ಸಿದ್ದೇಶ್. ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಡಾ. ಶಿವಯೋಗಿ ಸ್ವಾಮಿ, ಬಿಜೆಪಿ ಮುಖಂಡರಾದ ಬಿ ಎಂ ಸತೀಶ್, ಹೆಚ್ ಎನ್ ಶಿವಕುಮಾರ, ಹೇಮಾಂತ್ ಕುಮಾರ್, ಎಲ್ ಕೆ ಕಲ್ಲೇಶ್, ಜಗದೀಶ್, ಅಡಾಣಿ ಸಿದ್ದಪ್ಪ, ಹದಡಿ ಬಸವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next