Advertisement

ಸ್ವಗ್ರಾಮಗಳಿಗೆ ತೆರಳಿದ 198 ವಲಸೆ ಕಾರ್ಮಿಕರು

04:59 PM May 30, 2020 | Naveen |

ನಾರಾಯಣಪುರ: ರಾಜನಕೋಳುರ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್‌ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಮಹಾರಾಷ್ಟ್ರದಿಂದ ಆಗಮಿಸಿದ್ದ 222 ವಲಸೆ ಕಾರ್ಮಿಕರ ಪೈಕಿ 198 ಜನರ ಕಾರ್ಮಿಕರ ಗಂಟಲು ದ್ರವದ ಪರೀಕ್ಷೆ ವರದಿ ನೆಗೆಟಿವ್‌ ಬಂದಿದ್ದರಿಂದ ಅವರನ್ನು ಸ್ವಗ್ರಾಮಗಳಿಗೆ ಕಳುಹಿಸಿಕೊಡಲಾಯಿತು. ಇದರೊಂದಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಅವಧಿ ಪೂರೈಸಿದವರನ್ನು ಆರೋಗ್ಯ ತಪಾಸಣೆ ನಡೆಸಿ ಕೈಗಳಿಗೆ ಹೋಂ ಕ್ವಾರಂಟೈನ್‌ ಸೀಲ್‌ ಹಾಕುವ ಮೂಲಕ 4 ಪ್ರತ್ಯೇಕ ಬಸ್‌ಗಳಲ್ಲಿ ಸ್ವಗ್ರಾಮಗಳಿಗೆ ಕಳಿಸಲಾಯಿತು.

Advertisement

198 ಜನರ ವರದಿ ನೆಗಟಿವ್‌: ವಸತಿ ಶಾಲೆಯ ಕ್ವಾರಂಟೈನ್‌ ಕೇಂದ್ರದ 222 ಕಾರ್ಮಿಕರ ಪೈಕಿ 198 ಜನ ಕಾರ್ಮಿಕರ ವರದಿ ನೆಗೆಟಿವ್‌ ಬಂದಿದೆ. ಇನ್ನುಳಿದವರ ವರದಿ ಬರುವದು ಬಾಕಿ ಇದೆ. ವರದಿ ಬಂದ ಕಾರ್ಮಿಕರ ಪೈಕಿ ಜೇವರಗಿ ತಾಲೂಕಿನ 3 ಜನ, ಶಹಾಪೂರ ತಾಲೂಕಿನ 54 ಜನ, ಮುದ್ದೇಬಿಹಾಳ ತಾಲೂಕಿನ 3 ಜನ ಹಾಗೂ ಹುಣಸಗಿ ತಾಲೂಕಿನ 138 ಜನ ಕಾರ್ಮಿಕರನ್ನು ಹುಣಸಗಿ ತಾಲೂಕು ಗ್ರೇಡ್‌-2 ತಹಶೀಲ್ದಾರ್‌ ಸುರೇಶ ಚವಲಕರ ಅವರ ಸಮ್ಮುಖದಲ್ಲಿ ಡಾ.ಪವನರಾವ್‌ ಮತ್ತು ಸಿಬ್ಬಂದಿ ಸೋಲಾರ್‌ ಸ್ಕ್ರೀನಿಂಗ್‌ ಮಾಡುವ ಮೂಲಕ ಕೈಗೆ 14 ದಿನಗಳ ಹೋಂ ಕ್ವಾರಂಟೈನ್‌ ಮೊಹರು ಹಾಕಿ ಬೀಳ್ಕೊಡಲಾಯಿತು. ಇದೇ ಸಂದರ್ಭದಲ್ಲಿ ನೆಗೆಟಿವ್‌ ವರದಿ ಬಂದ 198 ಜನ ಕಾರ್ಮಿಕರಿಗೆ ದೃಢೀಕರಣ ಪ್ರಮಾಣ ಪತ್ರ ವಿತರಿಸಲಾಯಿತು.

ಉಪ ತಹಶೀಲ್ದಾರ್‌ ಮಹಾದೇವಪ್ಪಗೌಡ, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ, ಪಿಡಿಒ ಸಂಗಣ್ಣ, ಎಎಸ್‌ಐ ಭೀಮಾಶಂಕರ, ದತ್ತಾತ್ರೇಯ ಕುಲಕರ್ಣಿ, ಸಂಗಣ್ಣ, ರವಿ ಸೇರಿದಂತೆ ಆರೋಗ್ಯ, ಕಂದಾಯ, ಗ್ರಾಪಂ, ಪೊಲೀಸ್‌ ಇಲಾಖೆಗಳ ಸಿಬ್ಬಂದಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next