ನಾರಾಯಣಪುರ: ಕಾಲಮಿತಿಯೊಳಗೆ ಕಾಮಗಾರಿ ನಿರ್ವಹಿಸಬೇಕು. ಗುಣಮಟ್ಟದ ಕಾಮಗಾರಿಗೆ ಆದ್ಯತೆ ಇರಲಿ, ಕಳಪೆ ಮಟ್ಟದ ಕಾಮಗಾರಿ ಕಂಡು ಬಂದರೆ ಕೂಡಲೇ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ಸಮೀಪದ ರಾಜಕೋಳೂರ ಜಿ.ಪಂ ವ್ಯಾಪ್ತಿಯ ಬೂದಿಹಾಳ ಸಿ.ಸಿ. ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಿ.ಸಿ ರಸ್ತೆಗಳ ಕಾಮಗಾರಿ ಉತ್ತಮ ಗುಣಮಟ್ಟದಿಂದ ನಡೆಯಬೇಕು. ಅಲ್ಲದೇ ಕಾಲ ಕಾಲಕ್ಕೆ ಇಲಾಖೆ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಬೇಕು ಎಂದರು.
ಇದೇ ವೇಳೆ ಬೂದಿಹಾಳ, ಕರೇಕಲ್, ಬಪ್ಪರಗಿ, ರಾಜನಕೋಳುರ ತಾಂಡಾ, ಮಾರುತಿ ತಾಂಡಾ, ಬೆಂಚಿಗಡ್ಡಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಎಚ್.ಸಿ. ಪಾಟೀಲ, ಜಿ.ಪಂ ಸದಸ್ಯ ನಾರಾಯಣ ನಾಯ್ಕ, ಮರಲಿಂಗಪ್ಪ ಕರ್ನಾಳ, ತಾ.ಪಂ ಸದಸ್ಯ ಮೋಹನ ಪಾಟೀಲ, ಡಾ| ಬಸನಗೌಡ ಅಳ್ಳಿಕೋಟಿ, ಮಲ್ಲು ನವಲಗುಡ್ಡ, ಅಂಬ್ರಣ್ಣ ಹುಡೇದ, ಶಾಂತಿಲಾಲ್ ರಾಠೊಡ, ಶಿವಲಿಂಗಪ್ಪ ದೊಡ್ಡಮನಿ, ಶಂಕರಗೌಡ ಜೇವರಗಿ, ಬಿ.ಎನ್. ಪೊಲೀಸ್ ಪಾಟೀಲ, ಧರೆಪ್ಪ ಮೇಟಿ, ಬಾಲಪ್ಪ ಉಪ್ಪಲದಿನ್ನಿ, ಬಸವರಾಜ ಕಡೇಮನಿ, ಶಿವಶಂಕರ ಧನ್ನುರ, ಬಸವರಾಜ ಸಜ್ಜಿಮನಿ, ಬಸವರಾಜ ಗಡ್ಡಿಗೌಡ್ರ, ಗುರಣ್ಣ ವಡಿಗೇರಿ, ಲೋಕೋಪಯೋಗಿ ಇಲಾಖೆಯ ಕೆ. ಜಾವಿದ ಅಹ್ಮದ್, ಎಸ್.ಜಿ. ಪಾಟೀಲ, ಸುಭಾಶ್ಚಂದ್ರ, ರಾಮನಗೌಡ ವಠಾರ, ಭೀಮನಗೌಡ ಮಾಲಿಪಾಟೀಲ ತೀರ್ಥ ಸೇರಿದಂತೆ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.