Advertisement
ಕಲ್ಸಂಕ ರೋಯಲ್ ಗಾರ್ಡನ್‌ನಲ್ಲಿ ನಡೆಯುವ ಧರ್ಮಸಂಸದ್ ಅಧಿವೇಶನದ ಸಭಾಮಂಟಪಕ್ಕೆ ಪ್ರಸಿದ್ಧ ಸಾಮಾಜಿಕ, ಧಾರ್ಮಿಕ ಕ್ರಾಂತಿಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಇರಿಸ ಲಾಗಿದೆ. 1969ರಲ್ಲಿ ಐತಿಹಾಸಿಕ ವಿಶ್ವ ಹಿಂದೂ ಪರಿಷದ್ ಪ್ರಥಮ ಪ್ರಾಂತ ಅಧಿವೇಶನದಲ್ಲಿ ಪಾಲ್ಗೊಂಡು ಸಾಮಾಜಿಕ ಸಾಮರಸ್ಯಕ್ಕೆ ಬೆಸುಗೆಯನ್ನಿತ್ತ ನಿವೃತ್ತ ಐಎಎಸ್ ಅಧಿಕಾರಿ ಆರ್. ಭರಣಯ್ಯ ಅವರ ಸ್ಮರಣಾರ್ಥ ಭರಣಯ್ಯ ವೇದಿಕೆ ಎಂದು ಹೆಸರು ಇಡಲಾಗು ವುದು. ಪರ್ಯಾಯ ಶ್ರೀ ಪೇಜಾವರ ಮಠಾಧೀಶರು ಉತ್ಕೃಷ್ಟವಾದ ಭೋಜನವನ್ನು ವಿತರಿಸಬೇಕೆಂದು ಸಂಕಲ್ಪಿಸಿ ಸಹಕರಿಸುತ್ತಿದ್ದಾರೆ. ಆದ್ದರಿಂದ ಭೋಜನಾಲಯಕ್ಕೆ ಕೃಷ್ಣಪ್ರಸಾದ ಭವನ ಎಂದು ಹೆಸರು ಇಡಲಾಗುತ್ತಿದೆ.
Related Articles
ನ. 24ರ ಬೆಳಗ್ಗೆ 10ಕ್ಕೆ ರಾಜಾಂಗಣ ಪಾರ್ಕಿಂಗ್ ಪ್ರದೇಶದಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಸಾಧು ಸಂತರನ್ನು ಮೆರ ವಣಿಗೆಯಲ್ಲಿ ಅಧಿವೇಶನ ಸ್ಥಳಕ್ಕೆ ಕರೆತರ ಲಾಗುವುದು. ಉದ್ಘಾಟನಾ ಸಮಾರಂಭದಲ್ಲಿ ಪೇಜಾವರ ಶ್ರೀಗಳು, ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು, ಶ್ರೀ ರಂಭಾಪುರಿ, ಶ್ರೀ ಸುತ್ತೂರು, ಶ್ರೀ ಆದಿಚುಂಚನಗಿರಿ ಮಠಾಧೀಶರು, ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಪಾಲ್ಗೊಳ್ಳುವರು. ಆರೆಸ್ಸೆಸ್ ಸರಸಂಘಚಾಲಕ್ ಮೋಹನ್ ಭಾಗವತ್ ದಿಕ್ಸೂಚಿ ಭಾಷಣ ಮಾಡುವರು. ಅಪರಾಹ್ನ ಮತ್ತು ನ. 25ರ ಬೆಳಗ್ಗೆ ಮತ್ತು ಅಪರಾಹ್ನ ನಿರ್ಣಯ ಗೋಷ್ಠಿಗಳು ನಡೆಯಲಿವೆ. ನ. 26ರ ಬೆಳಗ್ಗೆ 10ರಿಂದ 12.30ರ ವರೆಗೆ ರಾಜಾಂಗಣ ದಲ್ಲಿ ವಿವಿಧ ಸಮಾಜದ ಪ್ರಮುಖರ ಸಭೆ ಮತ್ತು ರೋಯಲ್ ಗಾರ್ಡನ್‌ನಲ್ಲಿ ನಿರ್ಣಯಗಳ ಗೋಷ್ಠಿ ನಡೆಯಲಿವೆ. ನ. 26ರ ಅಪರಾಹ್ನ ಜೋಡುಕಟ್ಟೆಯಿಂದ ಆಕರ್ಷಕ ಶೋಭಾಯಾತ್ರೆ, ಬಳಿಕ ಎಂಜಿಎಂ ಮೈದಾನ ದಲ್ಲಿ ಹಿಂದೂ ಸಮಾಜೋತ್ಸವ ಜರಗಲಿದ್ದು ಗೋರಕ್ಷ ಪೀಠಾಧ್ಯಕ್ಷ, ಉ.ಪ್ರ. ಮುಖ್ಯಮಂತ್ರಿ ಆದಿತ್ಯನಾಥ ದಿಕ್ಸೂಚಿ ಭಾಷಣ ಮಾಡುವರು.
Advertisement
ನಿರ್ಣಯಗಳುಅಯೋಧ್ಯಾ ರಾಮಮಂದಿರ ನಿರ್ಮಾಣ, ಗೋಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಮತಾಂತರ ತಡೆ, ಮರಳಿ ಮಾತೃಧರ್ಮಕ್ಕೆ, ಸಾಂಸ್ಕೃತಿಕ ಮೌಲ್ಯ ಪುನಃಸ್ಥಾಪನೆ ಕುರಿತಂತೆ ಸಂತರು ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳುವರು. ಇದರೊಂದಿಗೆ ದೇವಸ್ಥಾನಗಳ ಆಡಳಿತ ಹಿಂದೂಗಳ ವಶದಲ್ಲಿರಬೇಕು, ಜನಸಂಖ್ಯೆ ನಿಯಂತ್ರಣಕ್ಕೆ ಸಮಾನ ಕಾನೂನು ರೂಪುಗೊಳ್ಳಬೇಕು ಇತ್ಯಾದಿ ಚರ್ಚೆಗಳನ್ನೂ ಕೈಗೆತ್ತಿಕೊಳ್ಳಬಹುದು. ಈ ಮೇಲಿನ ವಿಷಯಗಳನ್ನು ವಿಶ್ವ ಹಿಂದೂ ಪರಿಷದ್ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಗೋಪಾಲ್, ಪ್ರಾಂತ ಅಧ್ಯಕ್ಷ ಎಂ.ಬಿ. ಪುರಾಣಿಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರಾಂತ ಕಾರ್ಯದರ್ಶಿ ಟಿ.ಎ.ಪಿ. ಶೆಣೈ, ಜಿಲ್ಲಾಧ್ಯಕ್ಷ ವಿಲಾಸ ನಾಯಕ್, ಬಜರಂಗ ದಳದ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಉಪಸ್ಥಿತರಿದ್ದರು. 12ನೇ ಅಧಿವೇಶನ
2005 -6ರ ಬಳಿಕ ಧರ್ಮಸಂಸದ್ ಅಧಿವೇಶನ ನಡೆಯಲಿಲ್ಲ. ಆಗ 11ನೇ ಧರ್ಮಸಂಸದ್ ಅಧಿವೇಶನ 6 ಕಡೆ ನಡೆದಿತ್ತು. ಒಂದೇ ಅವಧಿಯಲ್ಲಿ ವಿವಿಧೆಡೆ ನಡೆದ ಅಧಿವೇಶನವನ್ನು ಒಂದೇ ಎಂದು ಪರಿಗಣಿಸುವುದರಿಂದ ಈಗ ನಡೆಯುತ್ತಿರುವುದು 12ನೇ ಅಧಿವೇಶನ. ರಾಜಕಾರಣಿಗಳಿಗೆ ಪ್ರವೇಶವಿಲ್ಲ
ಧರ್ಮ ಸಂಸದ್ ಅಧಿವೇಶನದಲ್ಲಿ ರಾಜಕಾರಣಿಗಳಿಗೆ ಅವಕಾಶವಿಲ್ಲ. ಸಾಧ್ವಿ ಉಮಾಭಾರತಿಯವರು ಧರ್ಮಸಂಸದ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆದರೆ ಇವರನ್ನು ಸಾಧ್ವಿ ಎಂದು ಪರಿಗಣಿಸುವುದೇ ವಿನಾ ರಾಜಕಾರಣಿಯಾಗಿ ಅಲ್ಲ. ಯೋಗಿ ಆದಿತ್ಯನಾಥ್ ಅವರು ಗೋರಕ್ಷ ಪೀಠದ ಅಧ್ಯಕ್ಷರು ಎಂದು ಪರಿಗಣಿಸುವುದೇ ವಿನಾ ಉ.ಪ್ರ. ಮುಖ್ಯಮಂತ್ರಿಯಾಗಿ ಅಲ್ಲ.
ಗೋಪಾಲ್, ವಿಹಿಂಪ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ