ವಿಶಾಖಪಟ್ಟಣ: ನಾರಾಯಣ ಸ. ಶಿ. ಸಂಸ್ಥೆಗಳ ಸಂಸ್ಥಾಪಕ, ಆಂಧ್ರದ ಮಾಜಿ ಸಚಿವರಾಗಿರುವ ಡಾ| ಪಿ.ನಾರಾಯಣ್ ಅವರನ್ನು ಆಂಧ್ರಪ್ರದೇಶ ಪೊಲೀಸರು, ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಬುಧವಾರ ಬಂಧಿಸಿದ್ದಾರೆ.
ಇತ್ತೀಚೆಗೆ ನಡೆದಿದ್ದ ಆಂಧ್ರಪ್ರದೇಶದ 10ನೇ ತರಗತಿ ಪರೀಕ್ಷೆ ಪತ್ರಿಕೆ ಸೋರಿಕೆ ಆರೋಪ ಅವರ ಮೇಲಿತ್ತು.
ಎ. 27ರಂದು ತಿರುಪತಿಯ ನಾರಾಯಣ ಕಾಲೇಜಿನ ಶಿಕ್ಷಕರೊಬ್ಬರು 10ನೇ ತರಗತಿ ತೆಲುಗು ಭಾಷೆ ಪರೀಕ್ಷೆ ಆರಂಭವಾಗಿ ಒಂದು ಗಂಟೆಯಲ್ಲೇ ಪ್ರಶ್ನೆ ಪತ್ರಿಕೆಯ ಫೋಟೋ ವನ್ನು ಸಾಮಾ ಜಿಕ ಜಾಲತಾಣಗಳಲ್ಲಿ ಹಾಕಿದ್ದರು.
ಅನಂತರ ಬೇರೆ ಪ್ರಶ್ನೆ ಪತ್ರಿಕೆಗಳೂ ಸೋರಿಕೆ ಯಾಗಿದ್ದವು. ನಾರಾಯಣ್ ಸೇರಿದಂತೆ 45 ಶಿಕ್ಷಕರು ಸೇರಿ ಒಟ್ಟು 69 ಮಂದಿಯ ವಿರುದ್ಧ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವಿತ್ತು.