Advertisement
ಪುಸ್ತಕದಲ್ಲಿ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ವಿರುದ್ಧ ರಾಣೆ ಅವರ ಭಾವೋದ್ರೇಕ ಆರೋಪಗಳ ಬಳಿಕ ಪಕ್ಷವು ಅವರ ವಿರುದ್ಧ ಪ್ರತಿದಾಳಿ ನಡೆಸಿದೆ. ಸಿಂಧುದುರ್ಗದಿಂದ ಶಿವಸೇನೆ ಶಾಸಕ ವೈಭವ್ ನಾೖಕ್ ಅವರು ರಾಣೆ ಅವರ ವಿರುದ್ಧ ವಾಗ್ಧಾಳಿ ನಡೆಸುತ್ತ, ಬೇರೆಯವರ ಮೇಲೆ ಆರೋಪಗಳನ್ನು ಹೊರೆಸುವುದೇ ರಾಣೆ ಅವರ ಪಾತ್ರವಾಗಿದೆ ಎಂದು ಕಿಡಿಕಾರಿದ್ದಾರೆ. ಶ್ರೀಧರ್ ನಾೖಕ್ ಹತ್ಯೆ ಪ್ರಕರಣ ಹಾಗೂ ಚೆಂಬೂರ್ ಮತ್ತು ಕೊಂಕಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ರಾಣೆ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಸ್ಪಷ್ಟೀಕರಣವನ್ನು ನೀಡುವರೇ? ಎಂದು ನಾೖಕ್ ಪ್ರಶ್ನಿಸಿದ್ದಾರೆ.
Related Articles
Advertisement
ತನ್ನ ಜೀವನಚರಿತ್ರೆಯಿಂದ ಯುವ ಜನತೆಗೆ ಪ್ರೇರಣೆ ಸಿಗುತ್ತದೆ ಎಂದು ರಾಣೆ ಭಾವಿಸಿದ್ದಾರೆ. ಆದರೆ, ಕೇವಲ ಹುದ್ದೆಗಾಗಿ ಹಲವು ಪಕ್ಷಗಳನ್ನು ಸೇರಿಕೊಂಡಿರುವ ಅವಕಾಶವಾದಿ ನಾಯಕನಿಂದ ಯುವ ಜನರಿಗೆ ಕಲಿಯಲು ಸಿಗುವುದಾದರೂ ಏನು ?ಎಂದು ಮನೀಷಾ ಪ್ರಶ್ನಿಸಿದ್ದಾರೆ. ರಾಣೆ ಅವರ ಜೀವನಚರಿತ್ರೆಯನ್ನು ಮನೀಷಾ ಪ್ರಚಾರ ತಂತ್ರ ಎಂದು ಬಣ್ಣಿಸಿದ್ದಾರೆ.
ರಾಣೆ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಇನ್ನೂ ಹಲವಾರು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿ¨ªಾರೆ. ಬಿಜೆಪಿಯಲ್ಲಿ ಎರಡನೇ ಸ್ಥಾನದಲ್ಲಿರುವ ನಾಯಕ ಚಂದ್ರಕಾಂತ್ ಪಾಟೀಲ್ ಅವರ ಕಾರಣದಿಂದಾಗಿ ತನಗೆ ಬಿಜೆಪಿಯಲ್ಲಿ ಸೇರಲು ಸಾಧ್ಯವಾಗಿಲ್ಲ ಎಂದು ರಾಣೆ ಆರೋಪಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಉಪಸ್ಥಿತಿಯಲ್ಲಿ ರಾಣೆ ಅವರು ತಮ್ಮ ಆತ್ಮಚರಿತ್ರೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ರಾಣೆ ಆರೋಪಗಳನ್ನು ತಿರಸ್ಕರಿಸಿದ ಮನೋಹರ್ಶಿವಸೇನೆ ಹಿರಿಯ ನಾಯಕ ಮನೋಹರ್ ಜೋಶಿ ಕೂಡ ರಾಣೆ ಅವರ ಆರೋಪಗಳನ್ನು ಖಂಡಿಸಿದ್ದಾರೆ. ರಾಣೆಯನ್ನು ಪಕ್ಷದಿಂದ ಹೊರಹಾಕಲು ಉದ್ಧವ್ ಠಾಕ್ರೆ ಅವರು ಮಾತೋಶ್ರೀಯನ್ನು ತೊರೆಯುವ ಬೆದರಿಕೆ ಹಾಕಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಯಾರಿಗೆ ಸರಿಯಾದ ವಿದ್ಯೆ ಸಿಗುವುದಿಲ್ಲವೋ ಅವರು ಇಂತಹ ಆರೋಪಗಳನ್ನು ಮಾಡುತ್ತಾರೆ ಎಂದು ಜೋಶಿ ನುಡಿದಿದ್ದಾರೆ.