Advertisement

ನರಸಾಪುರ ಗ್ರಾಮ ಸೀಲ್‌ಡೌನ್‌

05:07 PM May 12, 2021 | Team Udayavani |

ಕೋಲಾರ: ತಾಲೂಕಿನ ನರಸಾಪುರಗ್ರಾಮ ದಲ್ಲಿ ಕೊರೊನಾ ಪ್ರಕರಣಹೆಚ್ಚಾದ ಹಿನ್ನೆಲೆ ಮೇ 24 ರವರೆಗೂಗ್ರಾಪಂ ವತಿಯಿಂದ ಇಡೀ ನರಸಾಪುರಗ್ರಾಮವನ್ನು ಸೀಲ್‌ ಡೌನ್‌ಮಾಡಲಾಗಿದೆ.

Advertisement

ಕೈಗಾರಿಕೆಗಳು:ನರಸಾಪುರ ಗ್ರಾಮಜಿಲ್ಲೆಗೆ ಸಮೀಪದಲ್ಲಿದ್ದು, ಕೋಲಾರದಪ್ರಮು ಖ ಕೈಗಾರಿಕಾ ಪ್ರದೇಶವಾಗಿದೆ.ಮುಖ್ಯ ವಾಗಿ ಹೊಂಡಾ, ವಿಸ್ಟ್ರಾನ್‌,ಬ್ಯಾಂಡೋ, ಸೆರೆಬ್ರಾ, ಮಹೇಂದ್ರ,ವಿಂಡೋ, ಲೂಮ್ಯಾಕ್ಸ್‌, ಸ್ಕ್ಯಾನಿಯ ಈಗೆ ಅನೇಕ ಕಂಪನಿಗಳು ಇದ್ದು ಪ್ರತಿದಿನಜಿಲ್ಲೆಯ ಹಲವು ಭಾಗಗಳಿಂದ ಹಾಗೂಬೇರೆ ಜಿಲ್ಲೆಗಳ, ಬೇರೆ ರಾಜ್ಯಗಳ ಸಾವಿರಾರು ಕಾರ್ಮಿಕರು, ಕೆಲಸ ಮಾಡುತ್ತಿದ್ದರು.

ಪ್ರತಿದಿನ ನರಸಾಪುರ ಕೈಗಾರಿಕಾಪ್ರದೇಶ ದಲ್ಲಿ ಜನಜಂಗುಳಿ ತುಂಬಿರುತ್ತಿತ್ತು ಹಾಗೂ ನರಸಾಪುರ ಗ್ರಾಮದಲ್ಲಿಜನರ ಓಡಾಟ ಹೆಚ್ಚಿರುತ್ತಿತ್ತು.ಕಾರ್ಖಾನೆಗಳಲ್ಲಿ ಕೆಲಸ ಮಾಡುವಸುಮಾರು ಕಾರ್ಮಿಕರು, ನರಸಾಪುರ,ಕುರ್ಕಿ ಹಾಗೂ ಸುತ್ತಮುತ್ತಲಿನಗ್ರಾಮಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಮಾಡುತ್ತಿದ್ದಾರೆ.

ಈ ಕಾರ್ಮಿಕರಿಂದಹಾಗೂ ಗ್ರಾಮಸ್ಥರಿಂದ ನರಸಾಪುರಗ್ರಾಮ ದಲ್ಲಿ ಕೋವಿಡ್‌ ಸೋಂಕಿನಪ್ರಮಾಣ ಹೆಚ್ಚಾಗಿದ್ದು, ಸುಮಾರು300ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್‌ಬಂದಿದೆ. ಹೀಗಾಗಿ ಅಗತ್ಯ ಸೇವೆಹೊರತು ಪಡಿಸಿ ಇಡೀ ಗ್ರಾಮವನ್ನುಸೀಲ್‌ ಡೌನ್‌ ಮಾಡಲಾಗಿದೆ.ಈ ಸಂದರ್ಭದಲ್ಲಿ ಪಿಡಿಒ ಎಚ್‌.ಎಂ.ರವಿ, ಉಪಾ ಧ್ಯಕ್ಷ ಸುಮಾನ್‌ಚಂದ್ರು, ಕೊರೊನಾ ವಾರಿಯರ್ಸ್‌ ಆಗಿಕಾರ್ಯ ನಿರ್ವಹಿಸುತ್ತಿರುವ ಕೆಇಬಿಚಂದ್ರು, ಕುಮಾರ್‌, ರಾಜೇಂದ್ರ, ಎಸ್‌.ಮುನಿ ರಾಜು, ಸುಬ್ರಮಣಿ, ಪಾನಿಪುರಿವೆಂಕ ಟೇಶ್‌, ಅವಿನಾಶ್‌, ವಿನೋದ್‌ದೇವ ರಾಜ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next