Advertisement

ಐಫೋನ್ ನಲ್ಲಿ ಮೂಡಿಬಂದ ‘ನನ್ನಾಕಿ’

04:48 PM Apr 07, 2023 | Team Udayavani |

ಈಗಾಗಲೇ ಕೆಲವು ತಂಡಗಳು ಫೋನಿನಲ್ಲೇ ಸಿನಿಮಾ ಚಿತ್ರೀಕರಣ ಮಾಡಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ನನ್ನಾಕಿ’ ತಂಡ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬಂದಿರುವ “ನನ್ನಾಕಿ’ ಚಿತ್ರವನ್ನು ಸಂಪೂರ್ಣವಾಗಿ ಐಫೋನ್‌ನಲ್ಲೇ ಚಿತ್ರೀಕರಣ ಮಾಡಲಾಗಿದೆ.

Advertisement

ಯುಟ್ಯೂಬ್‌ನಲ್ಲಿ ಕಾಮಿಡಿ ವಿಡಿಯೋ ಮೂಲಕ ಫೇಮಸ್‌ ಆಗಿರುವ ಮಲ್ಲು ಜಮಖಂಡಿ ಈ ಸಿನಿಮಾದ ನಾಯಕ. ಜೊತೆಗೆ ನಿರ್ದೇಶನ ಕೂಡಾ ಅವರದ್ದೇ. ಆನಂದ್‌ ಎಂಜೆ ಅವರು ನಿರ್ಮಾಣ ಮಾಡಿರುವ ಅನಿಲ್‌ ಸಿಜೆ ಸಂಗೀತ, ವಿಶಾಲ್‌ ಛಾಯಾಗ್ರಹಣವಿದೆ.

“ಒಂದು ಕಿರುಚಿತ್ರ ಮಾಡೋಣ ಎಂದ ಹೊರಟ ನಮ್ಮ ತಂಡ ಈಗ ಸಿನಿಮಾ ಮಾಡಿ ಮುಗಿಸಿದ್ದೇವೆ. ಚಿತ್ರಕ್ಕೆ ಸಂಗೀತ ಮಾಡಿಸಲು ಅನಿಲ್‌ ಸಿಜೆ ಅವರಬಳಿ ಹೋದಾಗ ಚಿತ್ರ ನೋಡಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಇದನ್ನು ಸಿನಿಮಾ ಮಾಡಿ ಎಂದರು. ಅದರಂತೆ ಈ ಸಿನಿಮಾ ಮಾಡಿದ್ದೇವೆ. ಕಾಮಿಡಿ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಸಾಗುತ್ತದೆ. ನಮ್ಮೂರಲ್ಲಿ ನೋಡಿರುವ ಅಂಶಗಳನ್ನೇ ಸೇರಿಸಿ ಈ ಸಿನಿಮಾದ ಕಥೆ ಮಾಡಿದ್ದೇನೆ’ ಎನ್ನುವುದು ಮಲ್ಲು ಜಮಖಂಡಿ ಮಾತು.

ಹೊಸಪೇಟೆಯ ಶಿವಗಂಗಾ ಚಿತ್ರದ ನಾಯಕಿಯಾಗಿದ್ದು, ಬಾಬಣ್ಣ, ರೇಖಾದಾಸ್‌ ಕೂಡ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next