ನಂಜನಗೂಡು: ರಾಜ್ಯದ ಪ್ರಮುಖ ಯಾತ್ರಾ ಸ್ಥಳವಾದ ದಕ್ಷಿಣ ಕಾಶಿಯಲ್ಲಿ ಅತೀ ಶೀಘ್ರದಲ್ಲಿ ಪೊಲೀಸ್ ಕ್ಯಾಂಟೀನ್ (ಉಪಹಾರಗೃಹ ಸ್ಥಾಪಿಸಲಾಗುವದು ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ತಿಳಿಸಿದರು.
ನಂಜನಗೂಡು ಡಿವೈಎಸ್‌ಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಟ್ಟಣದ ಶ್ರೀ ಕಂಠೇಶ್ವರ ರಥ ಬೀದಿಯಲ್ಲಿರುವ ಹಳೇ ಪೊಲೀಸ್ ಠಾಣೆಯ ಕಟ್ಟಡದಲ್ಲಿಯೇ ಈ ಉಪಹಾರ ಗೃಹವನ್ನು ಆರಂಭಿಸಲಾಗುತ್ತಿದ್ದು ಇಲಾಖೆ ಸಿಬ್ಬಂದಿಗಳಿಗೆ ಉಚಿತ ಹಾಗೂ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಕಾಫಿ, ಟೀ, ಉಪಹಾರ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲಾಗುವುದು ಎಂದು ಘೋಷಿಸಿದರು.
5 ರೂಗೆ ಟೀ, ಕಾಫಿ. 10 ರೂಗೆ ತಿಂಡಿ: ಇಲ್ಲಿರುವ ಶಿಥಿಲಾವಸ್ಥೆ ತಲುಪಿರುವ ಕಟ್ಟಡವನ್ನು ತೆರವುಗೊಳಿಸಿ ಅಲ್ಲಿ ನೂತನ ಕಟ್ಟಣ ನಿರ್ಮಿಸಲು ಇಲಾಖೆ 7 ಲಕ್ಷ ರೂ. ಬಿಡುಗಡೆ ಮಾಡಿದ್ದು, ಇಲಾಖೆಯಲ್ಲಿ ಹಣಕ್ಕೇನು ಕೊರತೆ ಇಲ್ಲ ಎಂದು ಚೆನ್ನಣ್ಣನವರ್ ಹೇಳಿದರು ಸಾರ್ವಜನಿಕರಿಗೆ 5 ರೂಗೆ ಟೀ, ಕಾಫಿ . 10 ರೂಗಳಿಗೆ ತಿಂಡಿ, 15 ರೂ ಗಳಿಗೆ ಊಟ ನೀಡುವ ಸಲುವಾಗಿ ಐಎ ಈ ಉಪಹಾರ ಗೃಹ ಸ್ಥಾಪಿಸಲಾಗುತ್ತದೆ. ಸಾರ್ವಜನಿಕರೂ ಈ ಸೌಲಭ್ಯದ ಉಪಯೋಗ ಪಡೆದುಕೊಳ್ಳಬಹುದು ಎಂದರು.
ದೂರು ಪೆಟ್ಟಿಗೆ ಸಿದ್ದ: ಪಟ್ಟಣದ ನಾಲ್ಕಾರು ಕಡೆ ಪೊಲೀಸ್ ಇಲಾಖೆಯಿಂದ ದೂರು ಪೆಟ್ಟಿಗೆ ಇಡಲಾಗುತ್ತಿದ್ದು, ನೇರವಾಗಿ ಠಾಣೆಗೆ ಬಂದು ದೂರು ನೀಡಲಾಗದವರು ದೂರುಬರೆದು ಈ ಪೆಟ್ಟಿಗೆಯಲ್ಲಿ ಹಾಕಿದರೆ ಆ ದೂರಿನ ಅನ್ವಯ ಸಂಭಂಧಿಸಿದವರ ಮೇಲೆ ವಿಚಾರಣೆ ನಡಲಾಗುವುದು. ಹಾಗೂ ದೂರು ನೀಡಿದವರ ಹೆಸರುಗಳನ್ನು ಗೌಪ್ಯವಾಗಿಡಲಾಗುವದು ಎಂದು ಚನ್ನಣ್ಣನವರ್‌ತಿಳಿಸಿದರು.
ಇಂಥಹ ನಾಲ್ಕು ದೂರು ಪಟ್ಟಿಗೆಗಳು ಸಿದ್ದವಾಗಿದ್ದು ಅದನ್ನು ಪಟ್ಟಣದ ಬಸ್ ನಿಲ್ದಾಣ ಶ್ರೀಕಂಠೇಶ್ವರ ದೇವಾಲಯದ ಆವರಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅಳವಡಿಸುವಂತೆ ಸೂಚಿಸಿ ಪಟ್ಟಣ ಠಾಣೆಯ ಪಿಎಸ್ಸೆ„ ಕುಮಾರಿ ಸವಿ ಅವರಿಗೆ ಪೆಟ್ಟಿಗೆಯನ್ನು ಹಸ್ತಾಂತರಿಸಿದರು.
ಮಾಲೀಕರೂ ಜವಾಬ್ದಾರಿ: ಪ್ರಮುಖ ಕೈಗಾರಿಕಾ ಕೇಂದ್ರವಾದ ನಂಜನಗೂಡಿನಲ್ಲಿ ವಿದೇಶಿಯರೂ ಅಪರಿಚಿತರಿಗೆ ಮನೆ ಬಾಡಿಗೆ ನೀಡುವಾಗ ಅವರಿಂದ ಸೂಕ್ತ ದಾಖಲಾತಿಗಳ ವಿವರ ಪಡೆಯುವುದು ಕಡ್ಡಾಯ.ಬಾಡಿಗೆ ದಾರರು ಅಪರಾಧವೆಸಗಿದರೆ ಮಾಲಿಕರೂ ಜವಾಬ್ದಾರರು ಬಾಡಿಗೆಗೆ ಇದ್ದವರು ಅಪರಾಧ ವೆಸಗಿದಲ್ಲಿ ಸೂಕ್ತ ದಾಖಲಾತಿ ಇಲ್ಲದಿದ್ದರೆ ಮನೆ ಮಾಲಿಕರನ್ನೂ ಸೇರಿಸಿ ಕೇಸ್ ಹಾಕಲಾಗುವದು ಎಂದು ಎಚ್ಚರಿಕೆ ನೀಡಿದರು.