Advertisement

Nandini Milk: ಆಡಳಿತ-ವಿಪಕ್ಷಗಳ ಹಾಲು ದರ ಯುದ್ಧ

12:37 PM Jun 27, 2024 | Team Udayavani |

ಬೆಂಗಳೂರು: ಹಾಲಿನ ದರ ಹೆಚ್ಚಳಕ್ಕೆ ಈಗ ಪರ-ವಿರೋಧ ಹೆಚ್ಚಿದ್ದು ರಾಜಕೀಯ ನಾಯಕರ ವಾಕ್ಸಮರಗಳು ತಾರಕಕ್ಕೇರಿವೆ. ಒಂದೆಡೆ ಸರ್ಕಾರ ದರ ಏರಿಕೆಯನ್ನೇ ಮಾಡಿಲ್ಲ ಎಂದು ಬಲವಾಗಿ ಸಮರ್ಥಿಸಿ ಕೊಳ್ಳುತ್ತಿರುವುದರ ಜತೆಗೆ, ಈ ದರ ಪರಿಷ್ಕರಣೆ ಖಂಡಿಸಿ ನಡೆಸುತ್ತಿರುವ ಹೋರಾಟವೇ ರೈತ ವಿರೋಧಿ ಮನಃಸ್ಥಿತಿಗೆ ಸಾಕ್ಷಿ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದೆ. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷ ಬಿಜೆಪಿ, ಗ್ಯಾರಂಟಿ ಹೆಸರಿನಲ್ಲಿ ಸರ್ಕಾರ ಜನರ ಕಿವಿಗೆ ಹೂವು ಮುಡಿಸುತ್ತಿದೆ. ಜನ ರೊಚ್ಚಿಗೇಳುವ ಮುನ್ನ ಎಚ್ಚೆತ್ತುಕೊಳ್ಳುವುದು ಸೂಕ್ತ ಎಂದು ಎಚ್ಚರಿಸಿದೆ.

Advertisement

ರೈತರ ಹಿತ ಗಮನದಲ್ಲಿಟ್ಟುಕೊಂಡು ಹಾಲಿನ ದರ ಏರಿಕೆ ಮಾಡಲಾಗಿದೆ. ಇದನ್ನು ವಿರೋಧಿಸುತ್ತಿರುವ ಬಿಜೆಪಿಯ ರೈತ ವಿರೋಧಿ ಮನಃಸ್ಥಿತಿ ಮತ್ತೂಮ್ಮೆ ಅನಾ ವರಣಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

ಬಿಜೆಪಿಯವರು ರೈತರ ವಿರೋಧಿಗಳು ಎಂದು ಮತ್ತೂಮ್ಮೆ ಸಾಬೀತಾಗಿದೆ. ರೈತರ ಹಿತಕ್ಕಾಗಿ ಕೇವಲ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅದೂ ಹಾಲಿನ ಪ್ರಮಾಣ ಹೆಚ್ಚಳಕ್ಕೆ ಅನುಗುಣವಾಗಿ ಪರಿಷ್ಕರಿಸಲಾ ಗಿದೆ. ರಾಜಕೀಯವಾಗಿ ಯಾರು ಏನು ಬೇಕಾದರೂ ಹೇಳಿಕೆ ನೀಡಬಹುದು. ಆದರೆ, ಹಸುಗಳ ಮೇವಿನ ಬೆಲೆ ಸೇರಿದಂತೆ ಅನೇಕ ವಿಚಾರ ಗಮನದಲ್ಲಿಟ್ಟುಕೊ ಳ್ಳಬೇಕು. ರೈತರ ಹಿತ ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಹಾಲಿನ ದರಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅತಿ ಕಡಿಮೆ ಬೆಲೆಗೆ ಹಾಲು ನೀಡಲಾಗುತ್ತಿದೆ ಎಂದರು.

ನನ್ನ ಪ್ರಕಾರ ಹಾಲಿನ ದರ ಇನ್ನೂ ಹೆಚ್ಚಳ ಮಾಡಬೇಕಿತ್ತು. ರೈತರು ತಮ್ಮ ಹಸುಗಳನ್ನು ಮಾರಿಕೊಳ್ಳುವ ದುಸ್ಥಿತಿಯಲ್ಲಿ ಇದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಹಾಲಿನ ದರ ಎಷ್ಟಿದೆ ಎಂದು ತಿಳಿದು, ಆಮೇಲೆ ಮಾತಾಡಲಿ. ರೈತರನ್ನು ಬದುಕಿಸುವ ಕೆಲಸ ಮಾಡಲಿ ಎಂದು ತೀಕ್ಷ್ಣವಾಗಿ ಹೇಳಿದರು.

ಕಾಫಿ, ಟೀ ದರ ಹೆಚ್ಚಳ ಸಲ್ಲದು

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಹಾಲಿನ ದರ ಏರಿಕೆ ಮಾಡಲಾಗಿದೆ ಎನ್ನುವ ವ್ಯಾಖ್ಯಾನವೇ ತಪ್ಪು. ಹೆಚ್ಚಾಗಿ ಉತ್ಪಾದನೆಯಾಗಿರುವ ಹಾಲನ್ನು ರೈತರಿಂದ ಕೊಳ್ಳಬೇಕೆ ಹೊರತು ಚೆಲ್ಲಲಾಗುವುದಿಲ್ಲ. ಖರೀದಿಸುವ ವರಿಗೆ ಹಾಲು ಹೆಚ್ಚಾಗಿ ದೊರೆಯುತ್ತಿದ್ದು, ಅದಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗಿದೆ. ಜನ ಹಾಲನ್ನು ಖರೀದಿಸಬೇಕು. ಹೊಟೇಲ್‌ ಮಾಲೀಕರು ಕಾಫಿ-ಟೀ ದರಗಳನ್ನು ಹೆಚ್ಚಿಸುವುದು ಸಲ್ಲದು. ಹಾಲಿನ ಬೆಲೆ ಏರಿದ್ದರೆ ಮಾತ್ರ ಹೆಚ್ಚಿಸಬೇಕು ಎಂದು ಹೇಳಿದರು.

ಸರ್ಕಾರದಿಂದ ಕಿವಿಗೆ ಹೂವು

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಬೆಲೆ ಏರಿಕೆಯ ಪರ್ವ ನಡೆಯುತ್ತಿದೆ. ಜನರಿಗೆ ಬರೆ ಎಳೆಯುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ. ಮುದ್ರಾಂಕ ಶುಲ್ಕ ಏರಿಸಲಾಗಿದೆ. ವಿದ್ಯುತ್‌ ರೈತರ ಜಮೀನುಗಳಿಗೆ ಹಾಕುವ ಟ್ರಾನ್ಸ್‌ಫಾರ್ಮರ್‌ ದರ 2,500ದಿಂದ 2.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಪೆಟ್ರೋಲ್‌-ಡೀಸೆಲ್‌ ಹೆಚ್ಚಾಗಿದೆ. ಈಗ ಹಾಲೂ ದುಬಾರಿಯಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಜನರ ಕಿವಿಗೆ ಹೂ ಮುಡಿಸಿ¨ªಾರೆ ಎಂದು ತಿರುಗೇಟು ನೀಡಿದರು.

ಪೆಟ್ರೋಲ್‌- ಡೀಸೆಲ್‌ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಟ್ರ್ಯಾಕ್ಟರ್‌, ಟಿಲ್ಲರ್‌ ಬಳಸುವ ರೈತರೂ ತೊಂದರೆ ಅನುಭವಿಸುತ್ತಿದ್ದಾರೆ. ಬಿತ್ತನೆ ಬೀಜದ ದರ ಶೇ. 40- 50ರಷ್ಟು ಹೆಚ್ಚಾಗಿದೆ. ಇಂಥ ಸಂಕಷ್ಟದ ಸಂದರ್ಭದಲ್ಲೂ ಜನರಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಜನ ರೊಚ್ಚಿಗೇಳುವ ಮುನ್ನ ಎಚ್ಚರವಾಗಿ:

ಸಿದ್ದರಾಮಯ್ಯನವರು ನಿದ್ರೆಯಲ್ಲಿ ಇದ್ದಂತಿದೆ. ಜನರ ಸಂಕಷ್ಟ ಅವರಿಗೆ ಕಾಣುತ್ತಿಲ್ಲ. ಜನರು ರೊಚ್ಚಿಗೇಳುವ ಮೊದಲು, ಜನರು ರಸ್ತೆಗೆ ಇಳಿಯುವ ಮುಂಚೆ ದರ ಹೆಚ್ಚಳ ವಾಪಸ್‌ ಪಡೆಯಬೇಕು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯಸಚೇತಕ ಎನ್‌. ರವಿಕುಮಾರ್‌ ಎಚ್ಚರಿಸಿದ್ದಾರೆ.

“ಹಾಲಿನ ದರ ಎಲ್ಲಿ ಹೆಚ್ಚಳ ಆಗಿದೆ? ಹೆಚ್ಚುವರಿ ಯಾಗಿ 50 ಎಂಎಲ್‌ ಹಾಲು ಕೊಡುತ್ತಿಲ್ಲವೇ? ಈಗಾಗಲೇ ಸಿಎಂ ಸ್ಪಷ್ಟನೆ ನೀಡಿದ್ದಾರೆ. ರೈತರಿಗೆ ಪ್ರೋತ್ಸಾಹಧನ ಕೊಡದಿದ್ದರೆ ಸರ್ಕಾರ ಖಂಡಿತಾ ಕ್ರಮ ತೆಗೆದುಕೊಳ್ಳುತ್ತದೆ.”  – ಕೆ.ಎನ್‌. ರಾಜಣ್ಣ, ಸಹಕಾರ ಸಚಿವ

“ಬಿಜೆಪಿ ಅವಧಿಯಲ್ಲಿ ಯಾವ ದರ ಎಷ್ಟಿತ್ತು ಎಂಬುದು ಎಲ್ಲ ರಿಗೂ ಗೊತ್ತಿರುವ ಸಂಗತಿ. ರೈತರ ಮತ್ತು ಜನರ ಅನುಕೂಲಕ್ಕಾಗಿ ಹಾಲಿನ ದರ ಪರಿಷ್ಕರಣೆ ಮಾಡಲಾಗಿದೆ. ನಾವು ಬಿಜೆಪಿ ಯವರಂತೆ ಬೇಕಾಬಿಟ್ಟಿ ಏರಿಕೆ ಮಾಡಿಲ್ಲ.”  ಬಸವರಾಜ ಶಿವಗಂಗಾ, ಚನ್ನಗಿರಿ ಶಾಸಕ

“ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ಕಳೆದ 10 ತಿಂಗಳಿನಿಂದ 1 ಸಾವಿರ ಕೋಟಿ ರೂ. ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡಿದೆ. ಇನ್ನೊಂದೆಡೆ ಹಾಲಿನ ದರ 2 ರೂ. ಏರಿಸಿ ಜನರ ಜೇಬಿಗೆ ಕೈ ಹಾಕಿದೆ.”  – ಎಂ.ಜಿ. ಮಹೇಶ್‌, ರಾಜ್ಯ ಬಿಜೆಪಿ ವಕ್ತಾರ

“ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಎಲ್ಲ ದರಗಳು ಶೇ.5 ರಿಂದ 10 ಏರಿಕೆ ಆಗುವುದು ಸಹಜ. ಅದರಂತೆ ಹಾಲಿನ ದರವೂ ಏರಿಕೆಯಾಗಿದೆ. ಬೆಲೆ ಏರಿಕೆ ಬಗ್ಗೆ ಮಾತನಾಡುವ ಬಿಜೆಪಿಗರ ಅವ ಧಿಯಲ್ಲಿ ಮಾಡಿಲ್ವಾ?.”  –ಚಲುವರಾಯಸ್ವಾಮಿ, ಕೃಷಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next