Advertisement

ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ  ನಂದಿ ಕೊಡುಗೆ

08:30 AM Sep 06, 2017 | Harsha Rao |

ಕಾಪು: ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ದೇವರ ಸೇವೆಯಲ್ಲಿ ನಿರತವಾಗಿದ್ದು, ಕಳೆದ ವಾರ ಅಸು ನೀಗಿರುವ ನಂದಿಯ ಸ್ಥಾನವನ್ನು ತುಂಬುವ ನಿಟ್ಟಿನಲ್ಲಿ ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನೂತನ ನಂದಿ (ದಿಡುಂಬೆ) ಯನ್ನು ಸಮರ್ಪಿಸಲು ಸಂಕಲ್ಪಿಸಿದ್ದಾರೆ.

Advertisement

ಎಲ್ಲೂರು ಸೀಮೆಯ ಒಡೆಯ ಶ್ರೀ ವಿಶ್ವನಾಥನ ಸನ್ನಿಧಾನಕ್ಕೆ ಸಮರ್ಪಿಸಲು ಉದ್ದೇಶಿಸಲಾಗಿರುವ ಸುಮಾರು 25 ತಿಂಗಳು ಪ್ರಾಯದ ನಂದಿಯನ್ನು ಚೆನ್ನೈ – ಆಂಧ್ರ ಬಾರ್ಡರ್‌ನಿಂದ ಉಡುಪಿಗೆ ತರಲಾಗುತ್ತಿದ್ದು, ಅದನ್ನು ಉಡುಪಿ ಪಾಡಿಗಾರು ಪುತ್ತಿಗೆ ಮಠದಿಂದ ಎಲ್ಲೂರು ದೇವಳಕ್ಕೆ ಸೆ. 6ರಂದು ಸಮರ್ಪಿಸಲು ಚಿಂತನೆ ನಡೆಸಲಾಗಿದೆ.

ಉಡುಪಿಯಿಂದ ತರುವ ನಂದಿಯನ್ನು ಸೆ. 6ರಂದು ಮಧ್ಯಾಹ್ನ 4.00 ಗಂಟೆಗೆ ಎಲ್ಲೂರು ಇರಂದಾಡಿಯಲ್ಲಿ ಸೀÌಕರಿಸಿ, ಬಳಿಕ ವಾದ್ಯಘೋಷ ಮೆರವಣಿಗೆಯಲ್ಲಿ ಸೀಮೆಯ ಭಜಕವೃಂದದವರ ನೇತೃತ್ವದಲ್ಲಿ ಎಲ್ಲೂರು ದೇವಳಕ್ಕೆ ಬರಮಾಡಿಕೊಳ್ಳಲಾಗುವುದು. ಆನಂತರ ಶಾಸೋ¤Åಕ್ತ ವಿಧಾನಗಳನ್ನು ಪೂರೈಸಿ ದೇವರ ಸೇವೆಗೆ ಸಮರ್ಪಿಸಲಾಗುವುದು ಎಂದು ದೇವಲದ  ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವೈ. ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು ಮತ್ತು ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next