Advertisement

ದೇಸಿ ಫ್ಲಿಪ್‌ಕಾರ್ಟ್‌ಗೆ ನೀಲೇಕಣಿ ತಂತ್ರಜ್ಞಾನ

08:25 AM Apr 29, 2022 | Team Udayavani |

ಹೊಸದಿಲ್ಲಿ:  ದೇಶದ ಶೇ.80ರಷ್ಟು ಆನ್‌ಲೈನ್‌ ಮಾರುಕಟ್ಟೆಯನ್ನು ತಮ್ಮದಾಗಿಸಿಕೊಂಡಿರುವ ಅಮೇಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗೆ ತಿರುಗೇಟು ನೀಡಲು ಕೇಂದ್ರ ಸರ್ಕಾರವೇ ಹೊಸ ಡಿಜಿಟಲ್‌ ಪ್ಲಾಟ್‌ಫಾರ್ಮ್ ನಿರ್ಮಿಸಲು ಸಿದ್ಧವಾಗಿದೆ. ಪ್ರಧಾನಿ ಮೋದಿಯವವರ ಆಸಕ್ತಿ ಹಿನ್ನೆಲೆ ಯಲ್ಲಿ ಇನ್ಫೋಸಿಸ್‌ನ ಕಾರ್ಯನಿರ್ವಾಕೇತರ ಅಧ್ಯಕ್ಷ ನಂದನ್‌ ನೀಲೆಕಣಿ ಯೋಜನೆಗೆ ತಾಂತ್ರಿಕ ಸಲಹೆ ನೀಡುತ್ತಿದ್ದು, ಅದರ ನಿರ್ಮಾಣದಲ್ಲಿ ತೊಡಗಿಸಿಕೊಂಡಿ ದ್ದಾರೆ. ಈ ಬಗ್ಗೆ ಮಾತನಾಡಿರುವ ನಂದನ್‌ ಅವರು, “ಡಿಜಿಟಲ್‌ ಕಾಮರ್ಸ್‌ಗೆ ನಮ್ಮದೇ ಆದ ಓಪನ್‌ ನೆಟ್‌ವರ್ಕ್‌ ಅನ್ನು ಹೊಂದುವ ಸಮಯ ಬಂದಿದೆ. ಲಕ್ಷಾಂತರ ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್‌ ಪ್ಲಾಟ್‌ಫಾರ್ಮ್ ಪರಿಚಯ ಮಾಡಿಸಲು ನಾವು ಕಾತುರದಿಂದಿದ್ದೇವೆ’ ಎಂದಿದ್ದಾರೆ.

Advertisement

ಏನಿದು ಓಪನ್‌ ನೆಟ್‌ವರ್ಕ್‌ ಫಾರ್‌ ಡಿಜಿಟಲ್‌ ಕಾಮರ್ಸ್‌(ಒಎನ್‌ಡಿಸಿ)?: ಡಿಜಿಟಲ್‌ ಕಾಮರ್ಸ್‌ಗಳ ಓಪನ್‌ ನೆಟ್‌ವರ್ಕ್‌ ಮೂಲಕ ನೀವು ಖರೀದಿ, ಮಾರಾಟ ಎರಡನ್ನೂ ಮಾಡಬಹುದು. ಸಣ್ಣದೊಂದು ಸೋಪಿ ನಿಂದ ಹಿಡಿದು, ಏರ್‌ ಟಿಕೆಟ್‌ ಬುಕ್‌ ಮಾಡುವ ಸೌಲಭ್ಯದವರೆಗೆ ಎಲ್ಲವೂ ಇದರಲ್ಲಿ ಲಭ್ಯವಿರಲಿದೆ. ದಿನಸಿ, ಊಟ ಆರ್ಡರ್‌ ಮಾಡುವುದು, ರೆಸ್ಟೋ ರೆಂಟ್‌ ಬುಕ್ಕಿಂಗ್‌, ಎಲ್ಲ ರೀತಿಯ ಟಿಕೆಟ್‌ ಬುಕ್ಕಿಂಗ್‌ ಸೇರಿ ಹಲವು ಆನ್‌ಲೈನ್‌ ಸೇವೆ ಇದರಲ್ಲಿ ಲಭ್ಯವಿರಲಿದೆ.

ಬೆಂಗಳೂರಲ್ಲಿ ಒಎನ್‌ಡಿಸಿ:  ಕೇಂದ್ರ ಸರ್ಕಾರದ ಒಎನ್‌ಡಿಸಿ ಶೀಘ್ರ ದಲ್ಲಿಯೇ  ಬೆಂಗಳೂರು, ಕೊಯಮತ್ತೂರು, ಭೋಪಾಲ, ಶಿಲ್ಲಾಂಗ್‌ ಮತ್ತು ದೆಹಲಿಗೆ ಕಾಲಿಡಲಿದೆ. ಅದರ ಜತೆಯಲ್ಲಿ ದೇಶದ ಪ್ರಮುಖ 100 ನಗರಗಳಿಗೂ ಕೆಲವೇ ತಿಂಗಳಲ್ಲಿ ಒಎನ್‌ಡಿಸಿ ಪರಿಚಯಿಸಲು ಉದ್ದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next