Advertisement

ಇನ್ಫಿ ಕಾರ್ಯನಿರ್ವಾಕೇತರ ಅಧ್ಯಕ್ಷರಾಗಿ ನಿಲೇಕಣಿ ಆಯ್ಕೆ

06:00 AM Aug 25, 2017 | |

ಬೆಂಗಳೂರು: ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶಾಲ್‌ ಸಿಕ್ಕಾ ಅವರ ರಾಜೀನಾಮೆಯಿಂದ ಸಂಕಷ್ಟಕ್ಕೀಡಾಗಿರುವ ಸಾಫ್ಟ್ವೇರ್‌ ದೈತ್ಯ ಇನ್ಫೋಸಿಸ್‌ ನೆರವಿಗೆ ಇದೀಗ ಸಹ ಸಂಸ್ಥಾಪಕರಲ್ಲೊಬ್ಬರದ ನಂದನ್‌ ನಿಲೇಕಣಿ ಅವರನ್ನು ತರಲಾಗಿದೆ.

Advertisement

ನಿಲೇಕಣಿ ಅವರನ್ನು ಇನ್ಫೋಸಿಸ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರು ಕೆಲವು ಸಮಯಗಳ ಕಾಲ ಹುದ್ದೆಯಲ್ಲಿರಲಿದ್ದಾರೆ ಎನ್ನಲಾಗಿದೆ. ಹೂಡಿಕೆದಾರರನ್ನು ಕಂಡುಕೊಳ್ಳುವುದು, ಗ್ರಾಹಕರು, ಸಿಬ್ಬಂದಿಗಳ ವಿಶ್ವಾಸ ವೃದ್ಧಿ, ಹೊಸ ಸಿಇಒ ನೇಮಕಕ್ಕೆ ಉತ್ತಮ ವಾತಾವರಣ ಕಲ್ಪಿಸುವವರೆಗೆ ನಿಲೇಕಣಿ ಅವರು ಕಂಪನಿಯ ಮುಖ್ಯ ಸ್ಥಾನ ಹೊಂದಿರಲಿದ್ದಾರೆ ಎಂದು ಹೇಳಲಾಗಿದೆ.

2009ರಲ್ಲಿ ನಿಲೇಕಣಿ ಅವರನ್ನು ಆಗಿನ ಯುಪಿಎ ಸರ್ಕಾರ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರದ ಮುಖ್ಯಸ್ಥರನ್ನಾಗಿ ನೇಮಿಸಿದ್ದು, ಇನ್ಫೋಸಿಸ್‌ ಅನ್ನು ತೊರೆದಿದ್ದರು. ಇದೀಗ ಆಡಳಿತ ಮಂಡಳಿಯ ಒಳಗುದ್ದಾಟದಲ್ಲಿ ಹಣ್ಣಾಗಿರುವ ಇನ್ಫೋಸಿಸ್‌ಗೆ ನಿಲೇಕಣಿ ಮರಳಿ ಬಂದಿದ್ದಾರೆ. ನಿಲೇಕಣಿ ಅವರನ್ನು ಮತ್ತೆ ಕಂಪನಿಗೆ ಬರುವಂತೆ ವಿವಿದ ಸ್ವತಂತ್ರ್ಯ ನಿರ್ದೇಶಕರು, ಹಿತೈಶಿಗಳು, ಕಂಪನಿಯ ಉನ್ನತ ಹುದ್ದೆಯಲ್ಲಿರುವವರು ಆಗ್ರಹಿಸಿದ್ದರು. ಇದೇ ವೇಳೆ ಇತ್ತ ಇನ್ಫೋಸಿಸ್‌ ಆಡಳಿತ ಮಂಡಳಿಗೂ ವಿಶಾಲ್‌ ಸಿಕ್ಕಾ ರಾಜೀನಾಮೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next