Advertisement

ದುರಹಂಕಾರದ ಸಿಎಂ: ನಡಹಳ್ಳಿ ಟೀಕೆ

07:00 AM Aug 12, 2018 | Team Udayavani |

ಮುದ್ದೇಬಿಹಾಳ: ಉತ್ತರ ಕರ್ನಾಟಕದ ಜನ ಏನೇ ಕೇಳಿದರೂ ಉತ್ತರ ಕರ್ನಾಟದವರೇನು ನಮ್ಮ ಪಕ್ಷಕ್ಕೆ ಮತ ಹಾಕಿದ್ದಾರೆಯೇ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ದುರಹಂಕಾರದಿಂದ ಮಾತನಾಡುತ್ತಿದ್ದಾರೆಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಟೀಕಿಸಿದರು. 

Advertisement

ದೇವಾಂಗ ಸಮಾಜ ಹಾಗೂ ಬಿಜೆಪಿ ಗ್ರಾಮ ಘಟಕದ ನೇತೃತ್ವದಲ್ಲಿ ತಾಲೂಕಿನ ಶಿರೋಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ನೇಕಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸರಕಾರದ ಅವಧಿ  ಇನ್ನೂ ಎಷ್ಟು ದಿನಗಳಿರುತ್ತವೆಯೋ ಗೊತ್ತಿಲ್ಲ. ಚುನಾವಣೆ ಮುಗಿದ ಬಳಿಕ ಎಲ್ಲರನ್ನೂ ಒಂದೇ ರೀತಿಯಾಗಿ ಕಾಣಬೇಕಾದದ್ದು ಮುಖ್ಯಮಂತ್ರಿಯಾದವರ ಕರ್ತವ್ಯ.ಆದರೆ ಅವರು ಹಾಗೆ ನಡೆದುಕೊಳ್ಳುತ್ತಿಲ್ಲ.ಈ ಸರಕಾರ ಶೀಘ್ರ ಪತನವಾಗಲಿದ್ದು, ಹೊಸ ಸರಕಾರ ಅಸ್ತಿತ್ವಕ್ಕೆ ಬರುವುದು ನಿಶ್ಚಿತ  ಎಂದರು.

Advertisement

Udayavani is now on Telegram. Click here to join our channel and stay updated with the latest news.

Next