Advertisement

ನಂಚಾರು ಶಾಲೆ: ಸರಕಾರಿ ಮಂಜೂರಾತಿಗೆ ಮನವಿ

11:43 PM Jul 18, 2019 | Team Udayavani |

ಬ್ರಹ್ಮಾವರ: ನಂಚಾರು ಶಾಲೆಯು ಸರಕಾರಿ ಶಾಲೆಯಾಗಿ ಘೋಷಣೆಯಾಗಿದ್ದರೂ ಸರಕಾರಿ ಮಂಜೂರಾತಿ ಆದೇಶ ದೊರೆಯದ ಕಾರಣ ಅತಂತ್ರ ಸ್ಥಿತಿಯಲ್ಲಿದೆ.

Advertisement

ಶಾಲೆಗೆ ಡೈಸ್‌ ಕೋಡ್‌ ಇನ್ನೂ ದೊರೆತಿಲ್ಲ. ಇದರಿಂದ ಮಕ್ಕಳ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಲು, ವಿದ್ಯಾರ್ಥಿಗಳು ವಿವಿಧ ಸರಕಾರಿ ಸೌಲಭ್ಯಗಳನ್ನು ಪಡೆಯಲು, ಎಸ್‌.ಡಿ.ಎಂ.ಸಿ. ರಚಿಸಲು, ಖಾಯಂ ಸರಕಾರಿ ಶಿಕ್ಷಕರ ನೇಮಕಕ್ಕೆ ತೊಂದರೆಯಾಗಿದೆ. ಇವೆಲ್ಲದಕ್ಕೂ ಸರಕಾರಿ ಆದೇಶ ಅಗತ್ಯವಾಗಿರುತ್ತದೆ.

ಶಾಲಾ ಹಿನ್ನೆಲೆ

ಸುಮಾರು 65 ವರ್ಷಗಳ ಹಿಂದೆ ನಂಚಾರು ಗ್ರಾಮದಲ್ಲಿ ದಿ| ಸುಬ್ಬಣ್ಣ ಕರಬರು ಶ್ರೀ ಸುದರ್ಶನ ಅನುದಾನಿತ ಕಿ.ಪ್ರಾ. ಶಾಲೆ ಸ್ಥಾಪಿಸಿದ್ದರು. 2019ರ ಮೇ 31ರಂದು ಮುಖ್ಯ ಶಿಕ್ಷಕರಾಗಿದ್ದ ಜಯ ನಾಯ್ಕ ಅವರು ಸೇವಾ ನಿವೃತ್ತಿಯಾಗುವು ದರೊಂದಿಗೆ ಅಧ್ಯಾಪಕರಿಲ್ಲದೆ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿ ಶಾಲೆ ಮುಚ್ಚುವ ಪರಿಸ್ಥಿತಿ ಎದುರಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಊರ ನಾಗರಿಕರು ಎಚ್ಚೆತ್ತು ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಶಿಕ್ಷಣ ಇಲಾಖೆಯ ಅಧಿಕಾರಿಯವರಿಗೆ ಮನವರಿಕೆ ಮಾಡಿಸಿ, ಈ ಶಾಲೆಯನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತಿಸಬೇಕು ಎಂಬ ಬೇಡಿಕೆಯನ್ನು ಇಟ್ಟರು. ಅಧಿಕಾರಿಗಳು ಸಕಾಲಕ್ಕೆ ಸ್ಪಂದಿಸಿ ಸರಕಾರಿ ಶಾಲೆಯಾಗಿ ಘೋಷಿಸಿದರು.

ಹಳೆವಿದ್ಯಾರ್ಥಿ ಸಂಘ

Advertisement

ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಶಾಲೆಯ ಅಭಿವೃದ್ಧಿಯ ಬಗ್ಗೆ ಹಳೆ ವಿದ್ಯಾರ್ಥಿ ಸಂಘವನ್ನು ರಚಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ಉಚಿತವಾದ ಸಾರಿಗೆ ವಾಹನ ಸೌಲಭ್ಯ, ಇಬ್ಬರು ಗೌರವ ಶಿಕ್ಷಕಿಯರನ್ನು ನೇಮಿಸಿಕೊಂಡು ಅವರಿಗೆ ಸಂಭಾವನೆ ನೀಡುವುದು, ಹಾಗೆಯೇ ಶಾಲೆಯ ಇತರ ಅಗತ್ಯತೆಗಳನ್ನು ಪೂರೈಸುವ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಅಧ್ಯಾಪಕರ ನೇಮಕಾತಿ ಬಹಳ ಅಗತ್ಯವಾಗಿದೆ. ಆದ್ದರಿಂದ ಸರಕಾರ ಹಾಗೂ ಶಿಕ್ಷಣ ಇಲಾಖೆಯವರು ಈ ಬಗ್ಗೆ ಕೂಡಲೇ ಸ್ಪಂದಿಸಿ, ಶಾಲೆಗೆ ಆದಷ್ಟು ಬೇಗ ಸರಕಾರಿ ಮಂಜೂರಾತಿ ಆದೇಶ, ಡೈಸ್‌ ಕೋಡ್‌ನ್ನು ನೀಡಬೇಕು. ಇಬ್ಬರು ಖಾಯಂ ಸರಕಾರಿ ಶಿಕ್ಷಕರನ್ನು ನೇಮಕಾತಿ ಮಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ಅನುಕೂಲತೆಗಳನ್ನು ಒದಗಿಸಿಕೊಡಬೇಕಾಗಿ ಮನವಿ ಮಾಡಿದ್ದಾರೆ.

ಅನುದಾನಿತ ಶಾಲೆಗಳನ್ನು ಸರಕಾರವು ತನ್ನ ತೆಕ್ಕೆಗೆ ತೆಗೆದುಕೊಂಡು ಸರಕಾರಿ ಶಾಲೆಯಾಗಿ ಪರಿವರ್ತಿಸುವ ಯೋಜನೆ ಈ ಹಿಂದೆ ಚಾಲ್ತಿಯಲ್ಲಿತ್ತು. ಆದರೆ ಈಗ ಆ ಯೋಜನೆ ಇಲ್ಲದಿರುವುದರಿಂದ ಹೊಸ ಸರಕಾರಿ ಶಾಲೆ ಪ್ರಾರಂಭಿಸುವ ಪೂರ್ಣ ಪ್ರಕ್ರಿಯೆ ನಡೆಯಬೇಕಿದೆ.ಪ್ರಸ್ತುತ ನಂಚಾರು ಶಾಲೆಯಲ್ಲಿ 25 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಯವರು ಓರ್ವ ಸರಕಾರಿ ಶಿಕ್ಷಕರನ್ನು, ಓರ್ವ ಗೌರವ ಶಿಕ್ಷಕರನ್ನು ನಿಯೋಜನೆ ಮಾಡಿರುತ್ತಾರೆ.

ಹೊಸ ಶಾಲೆ

ಅನುದಾನಿತ ಶಾಲೆಗಳನ್ನು ಸರಕಾರವು ತನ್ನ ತೆಕ್ಕೆಗೆ ತೆಗೆದುಕೊಂಡು ಸರಕಾರಿ ಶಾಲೆಯಾಗಿ ಪರಿವರ್ತಿಸುವ ಯೋಜನೆ ಈ ಹಿಂದೆ ಚಾಲ್ತಿಯಲ್ಲಿತ್ತು. ಆದರೆ ಈಗ ಆ ಯೋಜನೆ ಇಲ್ಲದಿರುವುದರಿಂದ ಹೊಸ ಸರಕಾರಿ ಶಾಲೆ ಪ್ರಾರಂಭಿಸುವ ಪೂರ್ಣ ಪ್ರಕ್ರಿಯೆ ನಡೆಯಬೇಕಿದೆ.ಪ್ರಸ್ತುತ ನಂಚಾರು ಶಾಲೆಯಲ್ಲಿ 25 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಯವರು ಓರ್ವ ಸರಕಾರಿ ಶಿಕ್ಷಕರನ್ನು, ಓರ್ವ ಗೌರವ ಶಿಕ್ಷಕರನ್ನು ನಿಯೋಜನೆ ಮಾಡಿರುತ್ತಾರೆ.
Advertisement

Udayavani is now on Telegram. Click here to join our channel and stay updated with the latest news.

Next