ಕೋಲ್ಕತ್ತಾ : ಪ್ರಧಾನಿ ನರೇಂದ್ರ ಮೋದಿಯವರು ಇಂದು(ಗುರುವಾರ, ಮಾ.18) ಚುನಾವಣಾ ಪ್ರಚಾರ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಬಿಟ್ಟ ವಾಗ್ಬಾಣಕ್ಕೆ ಪ್ರತಿಯಾಗಿ ತೃಣಮೂಲ ಕಾಂಗ್ರೆಸ್ ತನ್ನ ಬಾಣ ಪ್ರಯೊಗವನ್ನು ಮಾಡಿದೆ.
ಪಶ್ಚಿಮ ಬಂಗಾಳದಲ್ಲಿ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಕೇಳುವ ಮೂಲಕ ಪ್ರಧಾನಿಯವರಿಗೆ ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದೆ.
ಓದಿ : ತಮಿಳುನಾಡು ಚುನಾವಣೆ: ಅಣ್ಣಾಮಲೈ ನಾಮಪತ್ರ ಸಲ್ಲಿಕೆ, ತೇಜಸ್ವಿ ಸೂರ್ಯ, ಮುನಿರತ್ನ ಸಾಥ್
ನಿಮ್ಮದು ಒಡೆದು ಆಳುವ ಪಕ್ಷ, ನಾನು ಪ್ರಧಾನಿಯವರಿಗೆ ಒಂದೇ ಒಂದು ಪ್ರಶ್ನೆಯನ್ನು ಕೇಳಬಯಸುತ್ತೇನೆ. ಯಾರು ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ..? ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಮಮತಾ ಬ್ಯಾನರ್ಜಿ. ನಿಮಗೆ ಯಾರದ್ದಾದರೂ ಒಬ್ಬರ ಹೆಸರನ್ನು ಹೇಳುವುದಕ್ಕೆ ಯಾಕೆ ಸಾದ್ಯವಿಲ್ಲ..? ಯಾಕೆ ಗೊತ್ತಾ..? ಯಾರಾದರೂ ಒಬ್ಬರ ಹೆಸರನ್ನು ಹೇಳಿದರೇ..ದಂಗೆ ಏಳುತ್ತದೆ. ನಾನು ನಿಮಗೆ ಸವಾಲು ಹಾಕುತ್ತೇನೆ. ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಹೆಸರಿಸಿ ಎಂದು ತೃಣಮೂಲ ಕಾಂಗ್ರೆಸ್ ನ ಸಂಸದ ಡೆರೆಕ್ ಒ’ಬ್ರಿಯೆನ್ ಹೇಳಿದ್ದಾರೆ.
ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡ ಸಿನೆಮಾ ನಟ ಮಿತುನ್ ಚಕ್ರವರ್ತಿ, ತೃಣಮೂಲ ಕಾಂಗ್ರೆಸ್ ನಿಂದ ಪಕ್ಷಾಂತರವಾಗಿ ಬಂದವರಲ್ಲಿ ಚುನಾವಣೆಯಲ್ಲಿ ಗೆದ್ದರೆ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಊಹಾಪೋಹಗಳು ಪಶ್ಚಿಮ ಬಂಗಾಳದ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.
ನಮ್ಮ ಮುಖ್ಯಮಂತ್ರಿಗಳು ಭರವಸೆ ನೀಡುತ್ತಾರೆ ಮತ್ತು ಅದನ್ನು ಕಾರ್ಯ ರೂಪಕ್ಕೆ ತರುತ್ತಾರೆ. ಆದರೇ, ಪ್ರಧಾನಿ ಹಾಗೂ ಅಮಿತ್ ಶಾ ಭರವಸೆಯನ್ನಷ್ಟೇ ನೀಡುತ್ತಾರೆ. ಏನಾಯಿತು ನೋಟು ಅಮಾನ್ಯೀಕರಣ..? ಎಲ್ಲಿ ಹೋಯಿತು 15 ಲಕ್ಷ..? ಈ ಚುನಾವಣೆ ಸಂವಿಧಾನದ ಹೋರಾಟವಾಗಲಿದೆ ಎಂದು ಒ’ಬ್ರಿಯೆನ್ ಹೇಳಿದ್ದಾರೆ.
ಓದಿ : ಒಂದು ವರ್ಷದೊಳಗೆ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ: ನಿತಿನ್ ಗಡ್ಕರಿ