Advertisement

“ನಮ್ಮ ಕೈತೋಟ-ನಮ್ಮ ಆಹಾರ”ತರಬೇತಿಗೆ ಅಪೂರ್ವ ಸ್ಪಂದನೆ

10:42 AM Feb 16, 2023 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ನೇತೃತ್ವದಲ್ಲಿ ಉದಯವಾಣಿ ದಿನಪತ್ರಿಕೆ ವತಿಯಿಂದ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಮಂಗಳೂರು ವಿ.ವಿ.ಯ ಕೊಣಾಜೆ ಮಂಗಳಗಂಗೋತ್ರಿಯ ಮಂಗಳಾ ಸಭಾಂಗಣದಲ್ಲಿ “ಸಾವಯವ ಕೃಷಿ ಸ್ವಾವಲಂಬನೆಯ ‘ಖುಷಿ’ ಸರಣಿಯ “ನಮ್ಮ ಕೈತೋಟ – ನಮ್ಮ ಆಹಾರ’ 14ನೇ ತರಬೇತಿ ಕಾರ್ಯಕ್ರಮ ಬುಧವಾರ ಯಶಸ್ವಿಯಾಗಿ ನಡೆಯಿತು.

Advertisement

ಸಭಾ ಕಾರ್ಯಕ್ರಮ ಉದ್ಘಾಟನೆಯ ಬಳಿಕ ಇಬ್ಬರು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಮಾರ್ಗದರ್ಶನ ಜರ ಗಿತು. ಸಾವಯವ ಕೃಷಿಕರಾದ ಸ್ನೇಹಾ ಭಟ್‌ ಮಾತನಾಡಿ, ಪ್ರಕೃತಿಯಿಂದ ಮಾತ್ರ ಆರೋಗ್ಯಕರ ಆಹಾರ ಸಿಗಲು ಸಾಧ್ಯ. ಹೀಗಾಗಿ ಗಾರ್ಡನಿಂಗ್‌ ಮಾಡುವ ಬಗ್ಗೆ ಆದ್ಯತೆ ನೀಡಬೇಕಿದೆ. ತರಕಾರಿ, ಹೂ, ಹಣ್ಣಿನ ಗಿಡಗಳನ್ನು ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಬೇರೆ ಬೇರೆ ಮಾದರಿಯಲ್ಲಿ ಗಿಡ ನೆಡಲು ಅವಕಾಶವಿದೆಯಾದರೂ ಮಣ್ಣಿನ ಪಾತ್ರೆ ಸಹಿತ ಪರಿಸರ ಸ್ನೇಹಿಯಾಗಿ ಗಿಡ ನೆಡುವ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕು. ಯಾವುದೋ ಒಂದು ಬೀಜ ತಂದು ನೆಟ್ಟರೆ ಸಾಲದು. ಅದು ಆರೋಗ್ಯಕರವಾಗಿರಬೇಕು ಎಂದರು.

ಬೇರೆಯವರ ಮನೆಯ ಹೂವಿನ ಗಿಡದಿಂದ ಹೂ ತಂದು ದೇವರಿಗೆ ಅರ್ಪಿಸುವ ಬದಲು ನಮ್ಮ ಮನೆಯಲ್ಲಿಯೇ ಹೂ ಗಿಡ ಬೆಳೆಸುವ ಮನೋಭಾವ ರೂಢಿಸಿಕೊಳ್ಳಬೇಕು. ಹೀಗಾಗಿ ನೀವು ಬೆಳೆದ ಒಂದು ಗಿಡದಲ್ಲಿ ಆಗುವ ಸೌತೆಕಾಯಿ, ಬದನೆ ಅಥವಾ ಯಾವುದೇ ತರಕಾರಿಯಿಂದ ಸಿಗುವ ಖುಷಿ ಅಪರಿಮಿತವಾದದ್ದು. ಹೀಗಾಗಿ ಗಾರ್ಡನಿಂಗ್‌ ಬಗ್ಗೆ ಆಸಕ್ತಿ ಮೂಡಿಸೋಣ; ಜತೆಗೆ ಮಕ್ಕಳನ್ನು ಅದರಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬೆಳೆಸೋಣ ಎಂದರು.

ಆಹಾರ ವಿಷಮುಕ್ತವಾಗಲಿ ಸಾವಯವ ಕೃಷಿಕರಾದ ಹರಿಕೃಷ್ಣ ಕಾಮತ್‌ ಪುತ್ತೂರು ಮಾತನಾಡಿ, ನಾವು ತಿನ್ನುವ ಬಹುತೇಕ ಆಹಾರವೂ ಈಗ ಗರಿಷ್ಠ ಪ್ರಮಾಣದಲ್ಲಿ ಕಲಬೆರಕೆಯದ್ದಾಗಿದೆ. ತರಕಾರಿಯಲ್ಲಿ ಬೀಜ ಹಾಳಾಗಬಾರದು ಎಂಬ ಕಾರಣಕ್ಕೆ ರಾಸಾಯನಿಕ ಲೇಪನ, ಮೊಳಕೆ ಬರಲು ಮತ್ತೂಂದು ರಾಸಾಯನಿಕ ಸಿಂಪಡಣೆ ಸಹಿತ ಹಂತ ಹಂತವಾಗಿ ಗಿಡಕ್ಕೆ ಸುಮಾರು 3 ವಾರ ಕೀಟನಾಶಕ, ರಸಗೊಬ್ಬರ ಹಾಕಿ ಅದರಿಂದ ಬಂದ ತರಕಾರಿ ಮಾರುಕಟ್ಟೆಗೆ ಬರುತ್ತದೆ. ಇದು ಸಾಲದೆಂಬಂತೆ, ಮಾರುಕಟ್ಟೆಯಲ್ಲಿ ಚಂದ ಕಾಣಬೇಕು, ಬೇಗನೆ ಹಾಳಾಗಬಾರದು. ಬೇಗ ಹಣ್ಣಾಗಬೇಕು ಎಂಬ ದುರಾಸೆಯಿಂದ ರಾಸಾಯನಿಕ ಮಿಶ್ರಣ ಮಾಡಲಾಗುತ್ತಿದೆ ಎಂದರು. ನಾವು ಚಿಕ್ಕವರಿರುವಾಗ ಬಿಪಿ, ಶುಗರ್‌ ಸಮಸ್ಯೆ ಇರಲಿಲ್ಲ.

ಆದರೆ ಈಗ ಬಿಪಿ, ಶುಗರ್‌, ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆಗಳದ್ದೇ ಸುದ್ದಿ. ಯಾವುದೇ ಬ್ಯಾಕ್ಟೀರಿಯಾ, ವೈರಸ್‌ನಿಂದ ಇದು ಬರುವುದಲ್ಲ. ಬದಲಾಗಿ, ನಾವು ತಿನ್ನುವ ಆಹಾರ ಹಾಗೂ ನಮ್ಮ ಜೀವನ ಪದ್ಧತಿಯಿಂದಾಗಿ ಇದು ಬರುತ್ತದೆ. ಹೀಗಾಗಿ ಇದರಿಂದ ಮುಕ್ತಿ ಸಿಗಲು ನಾವು ತಿನ್ನುವ ಆಹಾರವನ್ನು ವಿಷಮುಕ್ತಗೊಳಿಸಬೇಕು ಎಂದರು.

Advertisement

ಗಮನ ಸೆಳೆದ ವಸ್ತು ಪ್ರದರ್ಶನ

ಸಾವಯವ ತರಕಾರಿ, ಕೈತೋಟ ಬೆಳೆಸುವುದು ಹೇಗೆ, ಅಲಂಕಾರಿಕ ಗಿಡ ಪಾಲನೆ ಕುರಿತಂತೆ ತರಬೇತಿ ನಡೆಯಿತು. ಜತೆಗೆ, ಉತ್ತಮ ತಳಿಯ ತರಕಾರಿ ಬೀಜ, ವಿವಿಧ ಗೊಬ್ಬರಗಳು, ತೋಟಗಾರಿಕೆ ವಸ್ತುಗಳ ಪ್ರದರ್ಶನ ಗಮನಸೆಳೆಯಿತು. ನಗರದ ಸಣ್ಣ ಸ್ಥಳದಲ್ಲಿಯೂ ಗಿಡ ನೆಡುವ ಪರಿಕಲ್ಪನೆಯನ್ನು ಮಾದರಿ ರೂಪದಲ್ಲಿ ಪ್ರದರ್ಶಿಸಲಾಯಿತು. ಜತೆಗೆ ಸಾವಯವ ಉತ್ಪನ್ನಗಳ ಮಾರಾಟ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next