Advertisement
ಕೊರೊನಾ ಹಿನ್ನೆಲೆಯಲ್ಲಿ ಶುಕ್ರವಾರದ ಜುಮಾ ನಮಾಜ್ ಮಸೀದಿಗಳಲ್ಲಿ ಸಾಮೂಹಿಕವಾಗಿ ನಿರ್ವಹಿಸದಂತೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಮನವಿ ಮಾಡಿತ್ತು. ರಾಜ್ಯ ವಕ್ಫ್ ಮಂಡಳಿಯೂ ನಿರ್ದೇಶಿಸಿತ್ತು. ಹೀಗಾಗಿ ದ.ಕ. ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಜ್ ಇರಲಿಲ್ಲ. ಮಸೀದಿಗಳ ಇಮಾಮ್ ಮತ್ತು ಮುಅದಿÕನ್ ಹಾಗೂ ಇತರ ಸಿಬಂದಿ ವರ್ಗವು ಲುಹರ್ ನಮಾಝ್ ಮಾಡಿದರೆ, ಪ್ರತಿಯೊಬ್ಬರೂ ಸ್ವತಃ ಮನೆಗಳಲ್ಲಿ ಕುಟುಂಬ ಸಮೇತವಾಗಿ ಲುಹರ್ ನಮಾಜ್ ಮಾಡಿದರು.ಮಂಗಳೂರು ನಗರದ ಬಂದರ್ ಝೀನತ್ ಬಕ್Ò ಜುಮಾ ಮಸ್ಜಿದ್, ಬಾವುಟಗುಟ್ಟದ ಈದ್ಗಾ ಮಸ್ಜಿದ್, ಹಂಪನಕಟ್ಟೆಯ ಮಸ್ಜಿದು ನ್ನೂರ್, ಸ್ಟೇಟ್‌ಬ್ಯಾಂಕ್‌ನ ಮಸ್ಜಿದ್ ಇಬ್ರಾ ಹೀಂಖಲೀಲ್, ಪಂಪ್‌ವೆಲ್‌ನ ತಖ್ವಾ ಮಸ್ಜಿದ್, ಕಂದುಕ, ಬೋಳಾರ, ಕಂಕನಾಡಿ, ಜಪ್ಪು, ಕುದ್ರೋಳಿ ಹೀಗೆ ಯಾವ ಮಸೀದಿಯಲ್ಲೂ ಜುಮಾ ನಮಾಝ್ ಇರಲಿಲ್ಲ. ಉಡುಪಿ ನಗರದ ಯಾವುದೇ ಮಸೀದಿಗಳಲ್ಲೂ ಜುಮಾ ನಮಾಜ್ ನಡೆದಿರಲಿಲ್ಲ.